‘ಸೀಲ್​ಡೌನ್​ನಿಂದಾಗಿ ಜೀವನ ಬೀದಿಪಾಲಾಗಿದೆ’

| Updated By:

Updated on: Jul 11, 2020 | 4:11 PM

ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಹಾಗಾಗಿ, ಸೋಂಕಿತರು ಪತ್ತೆಯಾದ ನಗರದ ಹಲವಾರು ಏರಿಯಾಗಳನ್ನು ಸೀಲ್​ಡೌನ್​ ಮಾಡಲಾಗಿದೆ. ಇವುಗಳಲ್ಲಿ ನಗರದ ಹೃದಯ ಭಾಗವಾದ ಚಿಕ್ಕಪೇಟೆ, ಬಳೇಪೇಟೆ, ಮತ್ತು ಅಕ್ಕಿಪೇಟೆ ಏರಿಯಾಗಳು ಸಹ ಒಂದು. ಆದರೆ, ಇದೀಗ ಸೀಲ್​ಡೌನ್​ ಆಗಿರುವ ಏರಿಯಾದ ಜನರು ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಟಿವಿ9 ಜೊತೆ ಮಾತನಾಡಿದ ಸೀಲ್​ಡೌನ್ ಆದ ಏರಿಯಾದ ಜನರು ಮುಂದಿನ ದಿನಗಳಲ್ಲಿ ಜೀವನ ನಡೆಸೋದು ಭಾರಿ ಕಷ್ಟವಾಗಲಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. […]

‘ಸೀಲ್​ಡೌನ್​ನಿಂದಾಗಿ ಜೀವನ ಬೀದಿಪಾಲಾಗಿದೆ’
Follow us on

ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಹಾಗಾಗಿ, ಸೋಂಕಿತರು ಪತ್ತೆಯಾದ ನಗರದ ಹಲವಾರು ಏರಿಯಾಗಳನ್ನು ಸೀಲ್​ಡೌನ್​ ಮಾಡಲಾಗಿದೆ. ಇವುಗಳಲ್ಲಿ ನಗರದ ಹೃದಯ ಭಾಗವಾದ ಚಿಕ್ಕಪೇಟೆ, ಬಳೇಪೇಟೆ, ಮತ್ತು ಅಕ್ಕಿಪೇಟೆ ಏರಿಯಾಗಳು ಸಹ ಒಂದು.

ಆದರೆ, ಇದೀಗ ಸೀಲ್​ಡೌನ್​ ಆಗಿರುವ ಏರಿಯಾದ ಜನರು ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಟಿವಿ9 ಜೊತೆ ಮಾತನಾಡಿದ ಸೀಲ್​ಡೌನ್ ಆದ ಏರಿಯಾದ ಜನರು ಮುಂದಿನ ದಿನಗಳಲ್ಲಿ ಜೀವನ ನಡೆಸೋದು ಭಾರಿ ಕಷ್ಟವಾಗಲಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಸೀಲ್​ಡೌನ್ ಮಾಡಿದ ಸರ್ಕಾರ ನಮಗೆ ಏನೂ ಸಹಾಯ ಮಾಡಿಲ್ಲ. ನಮಗೆ ಸಹಾಯ ಮಾಡದೆ ನಮ್ಮನ್ನು ಬೀದಿಗೆ ತಳ್ಳಿದಂತಾಗಿದೆ. ಹೀಗಾಗಿ ಸೀಲ್​ಡೌನ್ ಮತ್ತು ಲಾಕ್​ಡೌನ್ ಬದಲು ಎಲ್ಲವೂ ಓಪನ್ ಆಗಬೇಕು ಎಂದು ಜನರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

Published On - 2:55 pm, Sat, 11 July 20