ಆರೋಗ್ಯ ಸೇತು ಆಪ್​ನಿಂದ ಏನಾಗುತ್ತೆ ಅಂತಾ ಕೇಳಬೇಡಿ, ಇಲ್ಲೊಬ್ಬ ಸಿಕ್ಕಿ ಹಾಕಿಕೊಂಡ ನೋಡಿ

|

Updated on: Jun 23, 2020 | 12:38 PM

ಮಂಗಳೂರು: ಕೊರೊನಾ ಆತಂಕದಲ್ಲಿದ್ದ ಜನರಿಗೆ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆಪ್ ಸಮಾಧಾನ ನೀಡಿತ್ತು. ಆದರೆ ಅನೇಕರಿಗೆ ಇದು ಹೇಗೆ ಉಪಯೋಗವಾಗುತ್ತೆ ಎಂಬುವುದರ ಬಗ್ಗೆ ಅರಿವಿಲ್ಲ. ಆರೋಗ್ಯ ಸೇತು ಆಪ್​ನಿಂದ ಏನಾಗುತ್ತೆ ಅಂತಾ ಕೇಳುವವರೆ ಹೆಚ್ಚು. ಆದ್ರೆ ಇಲ್ಲೊಬ್ಬ ಈ ಆಪ್​ನಿಂದ ಸಿಕ್ಕಿ ಬಿದ್ದಿದ್ದಾನೆ. ಆರೋಗ್ಯ ಸೇತು ಆಪ್ ಕೊರೊನಾ ಸೋಂಕಿತರನ್ನು ಮೊದಲೇ ಪತ್ತೆ ಹಚ್ಚಿ ಬಳಕೆದಾರರಿಗೆ ತಿಳಿಸುತ್ತೆ. ಅದೇ ರೀತಿ ಮಂಗಳೂರಿನ ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಕೊರೊನಾ ಸೋಂಕು ಇತ್ತು. ಆರೋಗ್ಯ […]

ಆರೋಗ್ಯ ಸೇತು ಆಪ್​ನಿಂದ ಏನಾಗುತ್ತೆ ಅಂತಾ ಕೇಳಬೇಡಿ, ಇಲ್ಲೊಬ್ಬ ಸಿಕ್ಕಿ ಹಾಕಿಕೊಂಡ ನೋಡಿ
Follow us on

ಮಂಗಳೂರು: ಕೊರೊನಾ ಆತಂಕದಲ್ಲಿದ್ದ ಜನರಿಗೆ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆಪ್ ಸಮಾಧಾನ ನೀಡಿತ್ತು. ಆದರೆ ಅನೇಕರಿಗೆ ಇದು ಹೇಗೆ ಉಪಯೋಗವಾಗುತ್ತೆ ಎಂಬುವುದರ ಬಗ್ಗೆ ಅರಿವಿಲ್ಲ. ಆರೋಗ್ಯ ಸೇತು ಆಪ್​ನಿಂದ ಏನಾಗುತ್ತೆ ಅಂತಾ ಕೇಳುವವರೆ ಹೆಚ್ಚು. ಆದ್ರೆ ಇಲ್ಲೊಬ್ಬ ಈ ಆಪ್​ನಿಂದ ಸಿಕ್ಕಿ ಬಿದ್ದಿದ್ದಾನೆ.

ಆರೋಗ್ಯ ಸೇತು ಆಪ್ ಕೊರೊನಾ ಸೋಂಕಿತರನ್ನು ಮೊದಲೇ ಪತ್ತೆ ಹಚ್ಚಿ ಬಳಕೆದಾರರಿಗೆ ತಿಳಿಸುತ್ತೆ. ಅದೇ ರೀತಿ ಮಂಗಳೂರಿನ ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಕೊರೊನಾ ಸೋಂಕು ಇತ್ತು. ಆರೋಗ್ಯ ಸೇತು ಆಪ್ ಮೂಲಕ ಪಾಸಿಟಿವ್ ರೋಗಿ ಬಗ್ಗೆ ನೆರೆ ಮನೆಯವರಿಗೆ ಮಾಹಿತಿ ಸಿಕ್ಕಿದೆ. ಕೊವಿಡ್ ಲಕ್ಷಣದ ವ್ಯಕ್ತಿ ಸಮೀಪವಿರುವುದಾಗಿ ಆಪ್ ಎಚ್ಚರಿಕೆ ನೀಡಿದೆ. ನೆರೆಮನೆಯವರು ಯುವಕನನ್ನ ವಿಚಾರಿಸಿ ಪರೀಕ್ಷೆಗೊಳಪಡಿಸಿದಾಗ ಆತನಿಗೆ ಪಾಸಿಟಿವ್ ಬಂದಿದೆ. ಈ ರೀತಿ ಆರೋಗ್ಯ ಸೇತು ಆಪ್​ನಿಂದ ಕೊರೊನಾ ಸೋಂಕಿತ ರೋಗಿ ಸಿಕ್ಕಿಬಿದ್ದಿದ್ದಾನೆ.

ಸೋಂಕಿತ ಮಂಗಳೂರಿನಲ್ಲಿ ಸ್ಥಳೀಯ ಮನೆಗಳಿಗೆ ತೆರಳಿ ಮೀನು ಮಾರಾಟ ಮಾಡ್ತಿದ್ದ. ಬಂದರಿಗೆ ತೆರಳಿ ಮೀನು ತರುತ್ತಿದ್ದ ಹಿನ್ನೆಲೆಯಲ್ಲಿ ಆತನಿಗೆ ಸೋಂಕು ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರೋಗ್ಯ ಇಲಾಖೆ ಆತನ ಜೊತೆ ಸಂಪರ್ಕವಿದ್ದವರ ಪತ್ತೆಗೆ ಹುಡುಕಾಟ ನಡೆಸುತ್ತಿದೆ.