ಎಚ್ಚರಾ! ಕೊರೊನಾ ಪಾಸಿಟಿವ್ ಶಂಕಿತ ವ್ಯಕ್ತಿ ಪರಾರಿಯಾಗಿದ್ದಾನೆ..

|

Updated on: May 15, 2020 | 6:18 PM

ಕೋಲಾರ: ನಗರದ ಗಾಂಧಿನಗರದಲ್ಲಿ ಕೊರೊನಾ ಪಾಸಿಟಿವ್ ಶಂಕಿತ ಪರಾರಿಯಾಗಿದ್ದಾನೆ. ಮಂಡ್ಯ ಮೂಲದ ಈ ವ್ಯಕ್ತಿ ಕೋಲಾರದ ಕೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. 11 ರಂದು ಮಂಡ್ಯದ ಮದ್ದೂರಿಂದ ಬಂದಿದ್ದರು. ಆಗ ಆ ವ್ಯಕ್ತಿಯ ಸ್ವಾಬ್ ಪಡೆದು ಪ್ರಯೋಗಾಲಯಕ್ಕೆ ಕಳಿಸಿ, ಹೋಂ ಕ್ವಾರಂಟೇನ್ ನಲ್ಲಿ ಇರಲು ತಿಳಿಸಲಾಗಿತ್ತು. ತಕ್ಷಣ ಶಂಕಿತ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗಿದೆ. ಸದ್ಯ ಕೋಲಾರದಲ್ಲಿ ಅವರು ವಾಸವಿದ್ದ ಮನೆಯ ಸುತ್ತಮುತ್ತಲ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಲಾಗಿದ್ದು, ಬ್ಯಾರಿಕೇಡ್ ಹಾಕಿ ಪೊಲೀಸರು ಸೀಲ್ ಮಾಡುತ್ತಿದ್ದಾರೆ.

ಎಚ್ಚರಾ! ಕೊರೊನಾ ಪಾಸಿಟಿವ್ ಶಂಕಿತ ವ್ಯಕ್ತಿ ಪರಾರಿಯಾಗಿದ್ದಾನೆ..
Follow us on

ಕೋಲಾರ: ನಗರದ ಗಾಂಧಿನಗರದಲ್ಲಿ ಕೊರೊನಾ ಪಾಸಿಟಿವ್ ಶಂಕಿತ ಪರಾರಿಯಾಗಿದ್ದಾನೆ. ಮಂಡ್ಯ ಮೂಲದ ಈ ವ್ಯಕ್ತಿ ಕೋಲಾರದ ಕೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. 11 ರಂದು ಮಂಡ್ಯದ ಮದ್ದೂರಿಂದ ಬಂದಿದ್ದರು. ಆಗ ಆ ವ್ಯಕ್ತಿಯ ಸ್ವಾಬ್ ಪಡೆದು ಪ್ರಯೋಗಾಲಯಕ್ಕೆ ಕಳಿಸಿ, ಹೋಂ ಕ್ವಾರಂಟೇನ್ ನಲ್ಲಿ ಇರಲು ತಿಳಿಸಲಾಗಿತ್ತು.

ತಕ್ಷಣ ಶಂಕಿತ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗಿದೆ. ಸದ್ಯ ಕೋಲಾರದಲ್ಲಿ ಅವರು ವಾಸವಿದ್ದ ಮನೆಯ ಸುತ್ತಮುತ್ತಲ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಲಾಗಿದ್ದು, ಬ್ಯಾರಿಕೇಡ್ ಹಾಕಿ ಪೊಲೀಸರು ಸೀಲ್ ಮಾಡುತ್ತಿದ್ದಾರೆ.

Published On - 6:18 pm, Fri, 15 May 20