ಹೆತ್ತವರಿದ್ರೂ ಅನಾಥನಂತೆ ನಡೆದು ಹೋಯ್ತು ಕಂದಮ್ಮನ ಅಂತ್ಯಕ್ರಿಯೆ

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ತಂದೊಡ್ಡಿರುವ ಸಂಕಷ್ಟಗಳು ಒಂದಲ್ಲ ಎರಡಲ್ಲ. ಒಂದೆಡೆ ಸೋಂಕಿನಿಂದ ಮೃತಪಟ್ಟ ತಂದೆಯ ಮುಖವನ್ನು ಕೊನೇ ಬಾರಿ ನೋಡಲಾಗದೆ ರೋದಿಸಿದ ಮಗನೊಬ್ಬನ ಕಥೆಯಾದರೆ ಇತ್ತ 17 ದಿನದ ಕಂದಮ್ಮನನ್ನ ಕಳೆದುಕೊಂಡ ಸೋಂಕಿತ ದಂಪತಿಯ ನೋವಿನ ಕಥೆ. ಹೌದು, ಕೊರೊನಾದಿಂದ ಆಸ್ಪತ್ರೆ ಸೇರಿದ್ದ ದಂಪತಿಯೊಬ್ಬರ ಮಗುವಿಗೂ ಸೋಂಕು ದೃಢಪಟ್ಟಿತ್ತು. ಹಾಗಾಗಿ ಬೆಳ್ಳಂದೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ದಿನದ ಕೂಸು ಕೊನೆಗೆ ಜುಲೈ 1ರಂದು ಸೋಂಕಿಗೆ ಬಲಿಯಾಗಿತ್ತು. ಆದರೆ, ದಂಪತಿಗೆ ಸೋಂಕಿದ್ದ ಕಾರಣದಿಂದ ಕರುಳಬಳ್ಳಿಯ ಅಂತಿಮ […]

ಹೆತ್ತವರಿದ್ರೂ ಅನಾಥನಂತೆ ನಡೆದು ಹೋಯ್ತು ಕಂದಮ್ಮನ ಅಂತ್ಯಕ್ರಿಯೆ

Updated on: Jul 05, 2020 | 1:07 PM

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ತಂದೊಡ್ಡಿರುವ ಸಂಕಷ್ಟಗಳು ಒಂದಲ್ಲ ಎರಡಲ್ಲ. ಒಂದೆಡೆ ಸೋಂಕಿನಿಂದ ಮೃತಪಟ್ಟ ತಂದೆಯ ಮುಖವನ್ನು ಕೊನೇ ಬಾರಿ ನೋಡಲಾಗದೆ ರೋದಿಸಿದ ಮಗನೊಬ್ಬನ ಕಥೆಯಾದರೆ ಇತ್ತ 17 ದಿನದ ಕಂದಮ್ಮನನ್ನ ಕಳೆದುಕೊಂಡ ಸೋಂಕಿತ ದಂಪತಿಯ ನೋವಿನ ಕಥೆ.

ಹೌದು, ಕೊರೊನಾದಿಂದ ಆಸ್ಪತ್ರೆ ಸೇರಿದ್ದ ದಂಪತಿಯೊಬ್ಬರ ಮಗುವಿಗೂ ಸೋಂಕು ದೃಢಪಟ್ಟಿತ್ತು. ಹಾಗಾಗಿ ಬೆಳ್ಳಂದೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ದಿನದ ಕೂಸು ಕೊನೆಗೆ ಜುಲೈ 1ರಂದು ಸೋಂಕಿಗೆ ಬಲಿಯಾಗಿತ್ತು.

ಆದರೆ, ದಂಪತಿಗೆ ಸೋಂಕಿದ್ದ ಕಾರಣದಿಂದ ಕರುಳಬಳ್ಳಿಯ ಅಂತಿಮ ಪಯಣದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲೇ ಮರುಗುವ ಪರಿಸ್ಥಿತಿ ಎದುರಾಯ್ತು. ಅಂತಿಮವಾಗಿ ಮಗುವಿನ ಅಂತ್ಯ ಸಂಸ್ಕಾರವನ್ನ ಆಸ್ಪತ್ರೆಯ ಌಂಬುಲೆನ್ಸ್​ ಸಿಬ್ಬಂದಿ ಹೆಬ್ಬಾಳದ ಚಿತಾಗಾರದಲ್ಲಿ ನೆರವೇರಿಸಿದರು. ಕವರ್​ನಲ್ಲಿ ಸುತ್ತಿಕೊಂಡು ಕೊಂಡೊಯ್ದಿದ್ದ ಹಸುಗೂಸನ್ನು ಕಂಡ ಸಿಬ್ಬಂದಿಯ ಕಣ್ಣಾಲಿಗಳು ತುಂಬಿಬಂದವು. ಕಂದನ ಮೃತದೇಹ ಕಂಡ ಚಿತಾಗಾರದ ಸಿಬ್ಬಂದಿಗೂ ನೋವುಂಟಾಗಿ ಕೊನೆಗೆ ಸರ್ಕಾರಿ ಶುಲ್ಕವನ್ನು ಸಹ ಪಡೆಯಲಿಲ್ಲವಂತೆ.

Published On - 1:01 pm, Sun, 5 July 20