ಮಂಗಳೂರಲ್ಲಿ 2 ಗಂಟೆ ಕಾಲ ಕರ್ಫ್ಯೂ ಸಡಿಲಿಕೆ, ದಿನನಿತ್ಯ ವಸ್ತು ಸಿಗದೆ ಜನ ಪರದಾಟ

|

Updated on: Dec 21, 2019 | 10:43 AM

ಮಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಪೊಲೀಸರ ಗುಂಡಿನ ದಾಳಿಗೆ ಇಬ್ಬರು ಮೃತಪಟ್ಟಿದ್ದರು. ಪರಿಸ್ಥಿತಿ ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದ್ರೂ ಸಹ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿ ಮಾಡಿ ಪೊಲೀಸ್ ಕಮಿಷನರ್ ಆದೇಶಿಸಿದ್ರು. ಜಿಲ್ಲೆಯಾದ್ಯಂತ ಇಂದೂ ಸಹ 144 ಸೆಕ್ಷನ್ ಜಾರಿ ಮುಂದುವರಿದಿದೆ. ಆದ್ರೆ, ಮಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ. ದಿನ ಬಳಕೆಯ […]

ಮಂಗಳೂರಲ್ಲಿ  2 ಗಂಟೆ ಕಾಲ ಕರ್ಫ್ಯೂ ಸಡಿಲಿಕೆ, ದಿನನಿತ್ಯ ವಸ್ತು ಸಿಗದೆ ಜನ ಪರದಾಟ
Follow us on

ಮಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಪೊಲೀಸರ ಗುಂಡಿನ ದಾಳಿಗೆ ಇಬ್ಬರು ಮೃತಪಟ್ಟಿದ್ದರು. ಪರಿಸ್ಥಿತಿ ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದ್ರೂ ಸಹ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿ ಮಾಡಿ ಪೊಲೀಸ್ ಕಮಿಷನರ್ ಆದೇಶಿಸಿದ್ರು.

ಜಿಲ್ಲೆಯಾದ್ಯಂತ ಇಂದೂ ಸಹ 144 ಸೆಕ್ಷನ್ ಜಾರಿ ಮುಂದುವರಿದಿದೆ. ಆದ್ರೆ, ಮಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ. ದಿನ ಬಳಕೆಯ ವಸ್ತುಗಳನ್ನು ಖರೀದಿಸಲು 2 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಕೆ ಮಾಡಿದ್ದಾರೆ. ಆದ್ರೆ, ಕರ್ಫ್ಯೂ ಸಡಿಲಿಕೆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಮಾಲೀಕರು ಅಂಗಡಿಗಳನ್ನು ತೆರೆದಿಲ್ಲ. ಹೀಗಾಗಿ ಹಾಲು ಸೇರಿದಂತೆ ದಿನನಿತ್ಯದ ವಸ್ತುಗಳು ಸಿಗದೆ ಸಾರ್ವಜನಿಕರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Published On - 7:36 am, Sat, 21 December 19