ನೆಲಮಂಗಲ: ಮಹಾನವಮಿ ಹಬ್ಬದ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿಗರು ನಗರ ಬಿಟ್ಟು ತಮ್ಮೂರುಗಳತ್ತ ತೆರಳುತ್ತಿದ್ದಾರೆ. ಇಂದು ಮುಂಜಾನೆಯಿಂದ ಸಾಗರೋಪಾದಿಯಲ್ಲಿ ಜನ ಬೆಂಗಳೂರು ಬಿಡುತ್ತಿರುವ ಹಿನ್ನೆಲೆ 8ನೇ ಮೈಲಿ ನವಯುಗ ಟೋಲ್ ಬಳಿ ಸಂಚಾರ ದಟ್ಟಣೆ ಉಂಟಾಗಿದೆ.
ಎನ್ಹೆಚ್4, ಎನ್ಹೆಚ್75ರಲ್ಲಿ ಹೆಚ್ಚು ವಾಹನ ಸಂಚಾರ
ಹಿಂದೂಗಳ ಪ್ರಮುಖ ಹಬ್ಬ ಹಾಗೂ ನಾಡಿನ ಹಬ್ಬದ ದಸರಾ ವಿಜಯದಶಮಿ ಹಿನ್ನೆಲೆ, ಕುಟುಂಬ ಸಮೇತರಾಗಿ ಜನ ಬೆಂಗಳೂರು ಬಿಡುತ್ತಿದ್ದಾರೆ. ಬೆಂಗಳೂರಿನ ಗೇಟ್ ವೇ ಬೆಂಗಳೂರು-ತುಮಕೂರು ರಸ್ತೆ, ರಾಷ್ಟ್ರೀಯ ಹೆದ್ದಾರಿ 4 ರಾಜ್ಯದ 23ಕ್ಕು ಹೆಚ್ಚು ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲಿದ್ದು, 8ನೇ ಮೈಲಿ ನವಯುಗ ಟೋಲ್ ಮುಖಾಂತರವೇ ಎಲ್ಲಾ ವಾಹನಗಳು ಹೋಗಬೇಕಾದ ಹಿನ್ನೆಲೆ ಸಂಚಾರದ ದಟ್ಟಣೆ ಅಧಿಕವಾಗಿದೆ.
ಎಲ್ಲಿ ಹೋದ್ರು ಪೀಣ್ಯಾ ಸಂಚಾರಿ ಪೊಲೀಸರು?
ಟ್ರಾಫಿಕ್ ಜಾಮ್ನಲ್ಲಿ ಆಂಬುಲೆನ್ಸ್ ಸಹ ಸಿಲುಕಿ ಪರದಾಡುವ ಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಚಾರ ದಟ್ಟಣೆಯಿದ್ದರೂ, ಪೀಣ್ಯ ಸಂಚಾರಿ ಹಾಗೂ ನೆಲಮಂಗಲ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ರು.
Published On - 10:31 am, Sat, 24 October 20