ಆಂಬುಲೆನ್ಸ್‌ನಲ್ಲೇ ಕಾಯ್ತಿರುವ ಸೋಂಕಿತ! ಬಾರದ ವೈದ್ಯ ಮಹಾಶಯ

| Updated By:

Updated on: Jul 06, 2020 | 4:51 PM

ಹಾವೇರಿ: ಎಲ್ಲೆಂದೆರಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗ್ತಾನೆ ಇವೆ. ಹಾಗೇನೇ ಸಮಸ್ಯೆಗಳು ಕೂಡಾ. ಇದುವರೆಗೆ ಬೆಂಗಳೂರಿನಲ್ಲಿದ್ದ ಬೆಡ್‌ಗಳ ಸಮಸ್ಯೆ ಈಗ ಹಾವೇರಿಗೂ ತಲುಪಿದೆ. ಬೆಡ್‌ ಇಲ್ಲಾ ಅಂತಾ ಕೋವಿಡ್‌ ಸೋಂಕಿತನನ್ನ ಕಾಯಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹೌದು, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಅಂದಲಗಿ ಗ್ರಾಮದ ಸೋಂಕಿತನ್ನ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರು ಗಂಟೆಗಟ್ಟಲೇ ಆಂಬುಲೆನ್ಸ್‌ನಲ್ಲಿಯೇ ಕಾಯಿಸಿದ್ದಾರೆ. ಗಂಟೆಗಳಿಂದ ಆಂಬುಲೆನ್ಸ್‌ನಲ್ಲಿಯೇ ಕಾಯುತ್ತಿರುವ ಸೋಂಕಿತನ ಜೊತೆ ಆಂಬುಲೆನ್ಸ್‌ ಸಿಬ್ಬಂದಿ ಕೂಡಾ ಪಿಪಿಇ ಕಿಟ್‌ ಹಾಕಿಕೊಂಡು ಕಾಯಬೇಕಾಗಿದೆ. ಸೋಂಕಿತನ ಕಡೆಯವರು ಯಾಕೆ ಕಾಯಿಸ್ತಿದ್ದಾರಾ […]

ಆಂಬುಲೆನ್ಸ್‌ನಲ್ಲೇ ಕಾಯ್ತಿರುವ ಸೋಂಕಿತ! ಬಾರದ ವೈದ್ಯ ಮಹಾಶಯ
Follow us on

ಹಾವೇರಿ: ಎಲ್ಲೆಂದೆರಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗ್ತಾನೆ ಇವೆ. ಹಾಗೇನೇ ಸಮಸ್ಯೆಗಳು ಕೂಡಾ. ಇದುವರೆಗೆ ಬೆಂಗಳೂರಿನಲ್ಲಿದ್ದ ಬೆಡ್‌ಗಳ ಸಮಸ್ಯೆ ಈಗ ಹಾವೇರಿಗೂ ತಲುಪಿದೆ. ಬೆಡ್‌ ಇಲ್ಲಾ ಅಂತಾ ಕೋವಿಡ್‌ ಸೋಂಕಿತನನ್ನ ಕಾಯಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹೌದು, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಅಂದಲಗಿ ಗ್ರಾಮದ ಸೋಂಕಿತನ್ನ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರು ಗಂಟೆಗಟ್ಟಲೇ ಆಂಬುಲೆನ್ಸ್‌ನಲ್ಲಿಯೇ ಕಾಯಿಸಿದ್ದಾರೆ. ಗಂಟೆಗಳಿಂದ ಆಂಬುಲೆನ್ಸ್‌ನಲ್ಲಿಯೇ ಕಾಯುತ್ತಿರುವ ಸೋಂಕಿತನ ಜೊತೆ ಆಂಬುಲೆನ್ಸ್‌ ಸಿಬ್ಬಂದಿ ಕೂಡಾ ಪಿಪಿಇ ಕಿಟ್‌ ಹಾಕಿಕೊಂಡು ಕಾಯಬೇಕಾಗಿದೆ.

ಸೋಂಕಿತನ ಕಡೆಯವರು ಯಾಕೆ ಕಾಯಿಸ್ತಿದ್ದಾರಾ ಅಂತ ಕೇಳಿದ್ರೆ, ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ ಖಾಲಿ ಇಲ್ಲ ಎನ್ನುವ ಸಬೂಬನ್ನ ವೈದ್ಯರು ನೀಡುತ್ತಿದ್ದಾರೆ. ಸೋಂಕಿತರೆಡೆಗಿನ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಜಿಲ್ಲಾಡಳಿತ ಹಿರೇಕೆರೂರು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ ನಡೆಸಿದೆ.

 

Published On - 4:42 pm, Mon, 6 July 20