ನಿಟ್ಟುಸಿರು ಬಿಟ್ಟ ಬಾಗಲಕೋಟೆ ಖಾಕಿ ಪಡೆ, ಕ್ವಾರಂಟೈನ್​ನಲ್ಲಿದ್ದ ಸಿಬ್ಬಂದಿ ಮರಳಿ ಕರ್ತವ್ಯಕ್ಕೆ

|

Updated on: Apr 26, 2020 | 9:10 AM

ಬಾಗಲಕೋಟೆ: ಮುಧೋಳ ತಾಲೂಕಿನಲ್ಲಿ ಲಾಠಿ ಚಾರ್ಚ್ ಮಾಡಿದ್ದ ಪೇದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪೇದೆಯ ಸಂಪರ್ಕದಲ್ಲಿದ್ದ ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ನೂರಕ್ಕೂ ಹೆಚ್ಚು ಪೊಲೀಸರ ಕ್ವಾರಂಟೈನ್ ಅವಧಿ ಅಂತ್ಯವಾಗಲಿದ್ದು, ಇನ್ನೆರಡು ದಿನದಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಖಾಕಿ ಪಡೆ ನಿಟ್ಟುಸಿರು ಬಿಟ್ಟಂತಾಗಿದೆ. 100ಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್ ಆದ ಹಿನ್ನೆಲೆಯಲ್ಲಿ ಪೊಲೀಸರಲ್ಲಿ ಆತಂಕ ಮನೆ ಮಾಡಿತ್ತು. ಜಿಲ್ಲೆಯ 80ಕ್ಕೂ ಹೆಚ್ಚು ಪೊಲೀಸರಿಗೆ ಥ್ರೋಟ್ ಸ್ವ್ಯಾಬ್, ರಕ್ತ ಪರೀಕ್ಷೆ ಮಾಡಲಾಗಿದ್ದು, ಕೊರೊನಾ ವರದಿ ನೆಗೆಟಿವ್ […]

ನಿಟ್ಟುಸಿರು ಬಿಟ್ಟ ಬಾಗಲಕೋಟೆ ಖಾಕಿ ಪಡೆ, ಕ್ವಾರಂಟೈನ್​ನಲ್ಲಿದ್ದ ಸಿಬ್ಬಂದಿ ಮರಳಿ ಕರ್ತವ್ಯಕ್ಕೆ
Follow us on

ಬಾಗಲಕೋಟೆ: ಮುಧೋಳ ತಾಲೂಕಿನಲ್ಲಿ ಲಾಠಿ ಚಾರ್ಚ್ ಮಾಡಿದ್ದ ಪೇದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪೇದೆಯ ಸಂಪರ್ಕದಲ್ಲಿದ್ದ ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ನೂರಕ್ಕೂ ಹೆಚ್ಚು ಪೊಲೀಸರ ಕ್ವಾರಂಟೈನ್ ಅವಧಿ ಅಂತ್ಯವಾಗಲಿದ್ದು, ಇನ್ನೆರಡು ದಿನದಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಖಾಕಿ ಪಡೆ ನಿಟ್ಟುಸಿರು ಬಿಟ್ಟಂತಾಗಿದೆ.

100ಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್ ಆದ ಹಿನ್ನೆಲೆಯಲ್ಲಿ ಪೊಲೀಸರಲ್ಲಿ ಆತಂಕ ಮನೆ ಮಾಡಿತ್ತು. ಜಿಲ್ಲೆಯ 80ಕ್ಕೂ ಹೆಚ್ಚು ಪೊಲೀಸರಿಗೆ ಥ್ರೋಟ್ ಸ್ವ್ಯಾಬ್, ರಕ್ತ ಪರೀಕ್ಷೆ ಮಾಡಲಾಗಿದ್ದು, ಕೊರೊನಾ ವರದಿ ನೆಗೆಟಿವ್ ಬಂದಿದೆ. ಮುಧೋಳ, ಜಮಖಂಡಿ ತಾಲೂಕಿನ ಪೊಲೀಸ್ ಠಾಣೆ ಸಿಬ್ಬಂದಿ ಸೇಫ್ ಆಗಿದ್ದಾರೆ.

Published On - 9:09 am, Sun, 26 April 20