ಇಂದೇ ಅಬಕಾರಿ ಸಚಿವ ನಾಗೇಶ್ ರಾಜೀನಾಮೆ ಸಾಧ್ಯತೆ; ಬೆಂಬಲಿಗರಲ್ಲಿ ಭುಗಿಲೆದ್ದ ಆಕ್ರೋಶ

|

Updated on: Jan 12, 2021 | 7:28 PM

ಇಂದೇ ಅಬಕಾರಿ ಸಚಿವ ಹೆಚ್.ನಾಗೇಶ್ ರಾಜೀನಾಮೆ ಪಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ನಾಗೇಶ್​ ಸದ್ಯ ಅಬಕಾರಿ ಇಲಾಖೆ ಸಚಿವರಾಗಿದ್ದಾರೆ.

ಇಂದೇ ಅಬಕಾರಿ ಸಚಿವ ನಾಗೇಶ್ ರಾಜೀನಾಮೆ ಸಾಧ್ಯತೆ; ಬೆಂಬಲಿಗರಲ್ಲಿ ಭುಗಿಲೆದ್ದ ಆಕ್ರೋಶ
ಹೆಚ್.ನಾಗೇಶ್ (ಎಡ); ಬಿ.ಎಸ್​.ಯಡಿಯೂರಪ್ಪ (ಬಲ)
Follow us on

ಬೆಂಗಳೂರು: ಇಂದೇ ಅಬಕಾರಿ ಸಚಿವ ಹೆಚ್.ನಾಗೇಶ್ ರಾಜೀನಾಮೆ ಪಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ನಾಗೇಶ್​ ಸದ್ಯ ಅಬಕಾರಿ ಇಲಾಖೆ ಸಚಿವರಾಗಿದ್ದಾರೆ.

ಇತ್ತ, ಹೆಚ್.ನಾಗೇಶ್​ರನ್ನ ಸಂಪುಟದಿಂದ ಕೈಬಿಡುವ ವಂದತಿ ಹಿನ್ನೆಲೆಯಲ್ಲಿ ಸಿಎಂ ನಿವಾಸದ ಬಳಿ ಸಚಿವರ ಬೆಂಬಲಿಗರು ಆಗಮಿಸಿದರು.

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹೆಚ್.ನಾಗೇಶ್ ಮೈತ್ರಿ ಸರ್ಕಾರದಲ್ಲಿ ಮೊದಲು ರಾಜೀನಾಮೆ ಕೊಟ್ಟಿದ್ದರು. ಸಚಿವ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಟ್ಟಿದ್ದೇ ನಾಗೇಶ್. ಉಳಿದ 17 ಶಾಸಕರ ಜೊತೆ ಕೈಜೋಡಿಸಿ ಸರ್ಕಾರ ತಂದಿದ್ದಾರೆ. 3 ವರ್ಷ ನೀವು ಸಚಿವರಾಗಿ ಇರುತ್ತೀರಾ ಎಂದು ಹೇಳಿದ್ದರು. ಈಗ ನಾಗೇಶ್​ರನ್ನ ತೆಗೆಯುವ ಮಾತುಗಳು ಕೇಳಿ ಬರುತ್ತಿವೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.

ಬಲಗೈ ಸಮುದಾಯದಿಂದ ಪ್ರಮುಖ ನಾಯಕರಾಗಿದ್ದಾರೆ. ಇವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿದೆ. ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆದ್ದಿದೆ. ಒಂದು ವೇಳೆ ಹೆಚ್.ನಾಗೇಶ್​ರನ್ನ ಸಂಪುಟದಿಂದ ಕೈಬಿಟ್ಟರೆ, ಬಿಎಸ್​ವೈ ವಚನಭ್ರಷ್ಟ ಸಿಎಂ ಎಂದು ಪಟ್ಟ ಕಟ್ಟಬೇಕಾಗುತ್ತೆ. ಕೋಲಾರದಲ್ಲಿ ಮುಂದೆ ಬಿಜೆಪಿ ವಿರುದ್ಧ ಕೆಲಸ ಮಾಡುತ್ತೇವೆ ಎಂದು ಸಿಎಂ ನಿವಾಸದ ಬಳಿ ಹೆಚ್.ನಾಗೇಶ್ ಬೆಂಬಲಿಗರ ಎಚ್ಚರಿಕೆ ನೀಡಿದ್ದಾರೆ.

‘ಒಬ್ಬರನ್ನು ಕೈಬಿಡಬೇಕಾಗುತ್ತದೆ; ಸಣ್ಣಪುಟ್ಟ ವ್ಯತ್ಯಾಸಗಳಿವೆ; ಸಚಿವರ ಪಟ್ಟಿಯನ್ನು ರಾತ್ರಿ ಬಿಡುಗಡೆ ಮಾಡುವೆ: ಸಿಎಂ ಯಡಿಯೂರಪ್ಪ

Published On - 6:16 pm, Tue, 12 January 21