PM Modi in Karnataka | ವಿದೇಶಿ ಬಂಡವಾಳ ಹೂಡಿಕೆದಾರರ ಮೊದಲ ಪ್ರಾಶಸ್ತ್ಯ ಈಗ ಕರ್ನಾಟಕ, ಡಬಲ್ ಎಂಜಿನ್ ಸರ್ಕಾರದಿಂದ ಇದು ಸಾಧ್ಯವಾಗಿದೆ: ಪ್ರಧಾನಿ ನರೇಂದ್ರ ಮೋದಿ

|

Updated on: Feb 06, 2023 | 7:21 PM

ತುಮಕೂರು ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಹೆಚ್ ಎ ಎಲ್ ಹೆಲಿಕಾಪ್ಟರ್ಘಟಕವನ್ನು ಲೋಕಾರ್ಪಣೆ ಮಾಡಿದ ಬಳಿಕ ತಮ್ಮ ಭಾಷಣವನ್ನು ಕನ್ನಡ ಭಾಷೆಯಲ್ಲಿ ಆರಂಭಿಸಿದರು.

ತುಮಕೂರು:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕಳೆದ ಬಾರಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾಡಿದ ಹಾಗೆ ತುಮಕೂರು ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಹೆಚ್ ಎ ಎಲ್ ಹೆಲಿಕಾಪ್ಟರ್ (HAL helicopter) ಘಟಕವನ್ನು ಲೋಕಾರ್ಪಣೆ ಮಾಡಿದ ಬಳಿಕ ತಮ್ಮ ಭಾಷಣವನ್ನು ಕನ್ನಡ ಭಾಷೆಯಲ್ಲಿ (Kannada language) ಆರಂಭಿಸಿದರು. ಕನ್ನಡದಲ್ಲಿ ಮಾತಾಡುವ ಭರದಲ್ಲಿ ಅವರು ನಿಟ್ಟೂರು ಗ್ರಾಮವನ್ನು ನಗರ ನಿಟ್ಟೂರು ನಗರ ಅಂದುಬಿಟ್ಟರು. 2016 ರಲ್ಲಿ ಹೆಚ್ ಎ ಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದ ಶಿಲಾನ್ಯಾಸ ಮಾಡುವ ಸೌಭಾಗ್ಯ ತಮಗೆ ಸಿಕ್ಕಿತ್ತು, ಆಗಲೇ ರಕ್ಷಣಾ ವ್ಯವಸ್ಥೆಯ ಸಾಮಗ್ರಿಗಳಿಗೆ ಭಾರತವು ಬೇರೆ ದೇಶಗಳ ಮೇಲೆ ಆತುಕೊಳ್ಳುವುದನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಬಬೇಕೆಂಬ ಸಂಕಲ್ಪ ಮಾಡಿಕೊಂಡಿದ್ದೆವು, ಆ ಸಂಕಲ್ಪ ಇವತ್ತು ಈಡೇರಿದೆ ಎಂದು ಪ್ರಧಾನಿಗಳು ಹೇಳಿದರು. ಅವರ ಪೂರ್ತಿ ಭಾಷಣ ಈ ವಿಡಿಯೋದಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 06, 2023 07:20 PM