ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪುಷ್ಪರಥದ ಬದಲಿಗೆ ಚಿನ್ನದ ರಥದಲ್ಲಿ ಮೆರವಣಿಗೆ ನಡೆಸಲಾದ ಹಿನ್ನೆಲೆಯಲ್ಲಿ ಹಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಸುಕುಮಾರ ಶೆಟ್ಟಿ ಈ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಶಾಸಕರ ಕಾಲದಲ್ಲಿ ಚಿನ್ನದ ರಥವೊಂದು ದೇವಾಲಯಕ್ಕೆ ಅರ್ಪಣೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಚಿನ್ನದ ರಥವನ್ನು ಬಳಸಲು ಶಾಸಕರು ಸೂಚನೆ ನೀಡಿದ್ದರು. ಹಾಗಾಗಿ, ಸಂಪ್ರದಾಯ ಬದಲಾಯಿಸಿದ ಬಗ್ಗೆ ಹಲವರು ಬೇಸರಗೊಂಡಿದ್ದರು. ಆದರೆ, ಇದೆಲ್ಲದರ ನಡುವೆಯೂ ಚಿನ್ನದ ರಥೋತ್ಸವ ಸುಸೂತ್ರವಾಗಿ ನೆರವೇರಿತು ಎಂದು ಹೇಳಲಾಗಿದೆ.