ದತ್ತಾತ್ರೇಯ ದೇಗುಲಕ್ಕೆ ನುಗ್ಗಿದ ರಾಜಕಾಲುವೆ ನೀರು: ದೇವರ ವಿಗ್ರಹಗಳು ಸ್ಥಳಾಂತರ

|

Updated on: Oct 24, 2020 | 8:06 AM

ಬೆಂಗಳೂರು: ರಾತ್ರಿಯೆಲ್ಲಾ ಸುರಿದ ಭಾರಿ ಮಳೆಯಿಂದ ನಗರದ ಹೊಸಕೆರೆಹಳ್ಳಿಯಲ್ಲಿ 200 ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಓವರ್ ಫ್ಲೋ ಆಗಿ ಅವಾಂತರ ಸೃಷ್ಟಿಸಿದೆ. ಹಾಗಾಗಿ, ಇಡೀ ರಾತ್ರಿ ತಮ್ಮ ಮನೆಗಳಿಗೆ ನುಗ್ಗಿದ ಮಳೆ ನೀರನ್ನು ಹೊರತೆಗೆಯಲು ನಿವಾಸಿಗಳು ಪರದಾಡುವ ಸ್ಥಿತಿ ಎದುರಾಯ್ತು. ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಸಹ ನೀರಿನಿಂದ ಹಾಳಾಗಿವೆ. ಇತ್ತ ಬಡಾವಣೆಯ ಪ್ರಸಿದ್ಧ ದತ್ತಾತ್ರೇಯ ದೇಗುಲಕ್ಕೆ ಸಹ ರಾಜಕಾಲುವೆಯ ನೀರು ನುಗ್ಗಿದೆ. ದೇಗುಲದ ಕಲ್ಯಾಣ ಮಂಟಪದ ಕೆಳ […]

ದತ್ತಾತ್ರೇಯ ದೇಗುಲಕ್ಕೆ ನುಗ್ಗಿದ ರಾಜಕಾಲುವೆ ನೀರು: ದೇವರ ವಿಗ್ರಹಗಳು ಸ್ಥಳಾಂತರ
Follow us on

ಬೆಂಗಳೂರು: ರಾತ್ರಿಯೆಲ್ಲಾ ಸುರಿದ ಭಾರಿ ಮಳೆಯಿಂದ ನಗರದ ಹೊಸಕೆರೆಹಳ್ಳಿಯಲ್ಲಿ 200 ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಓವರ್ ಫ್ಲೋ ಆಗಿ ಅವಾಂತರ ಸೃಷ್ಟಿಸಿದೆ. ಹಾಗಾಗಿ, ಇಡೀ ರಾತ್ರಿ ತಮ್ಮ ಮನೆಗಳಿಗೆ ನುಗ್ಗಿದ ಮಳೆ ನೀರನ್ನು ಹೊರತೆಗೆಯಲು ನಿವಾಸಿಗಳು ಪರದಾಡುವ ಸ್ಥಿತಿ ಎದುರಾಯ್ತು. ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಸಹ ನೀರಿನಿಂದ ಹಾಳಾಗಿವೆ.

ಇತ್ತ ಬಡಾವಣೆಯ ಪ್ರಸಿದ್ಧ ದತ್ತಾತ್ರೇಯ ದೇಗುಲಕ್ಕೆ ಸಹ ರಾಜಕಾಲುವೆಯ ನೀರು ನುಗ್ಗಿದೆ. ದೇಗುಲದ ಕಲ್ಯಾಣ ಮಂಟಪದ ಕೆಳ ಮಹಡಿಗೂ ನೀರು ನುಗ್ಗಿದೆ. ಹೀಗಾಗಿ, ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಯಿತು. ಇದೀಗ, ಕಲ್ಯಾಣ ಮಂಟಪದಲ್ಲಿಯೇ ವಿಗ್ರಹಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.