ಬೆಂಗಳೂರು: ಗೌರಿ ಲಂಕೇಶ್ ಹೆಸರಿನಲ್ಲಿ 7 ಕೋಟಿ ರೂ. ಚಂದಾ ವಸೂಲಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಗೌರಿ ಲಂಕೇಶ್ ಹತ್ಯೆ ನಂತರ, ಗೌರಿ ಹೆಸರಲ್ಲಿ ಟ್ರಸ್ಟ್ ಮಾಡಿಕೊಂಡು ಅವರ ಹೆಸರಲ್ಲಿ ಚಂದಾ ವಸೂಲಿ ಮಾಡಿದ್ದಾರೆ ಎಂದು ಟಿವಿ9 ಗೆ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಸುಮಾರು 7 ಕೋಟಿಯಷ್ಟು ಹಣ ಚಂದಾ ವಸೂಲಿ ಮಾಡಿಕೊಂಡು ದುರ್ಬಳಕೆ ಮಾಡಿದ್ದಾರೆ. ಗೌರಿ ಲಂಕೇಶ್ ಹೆಸರಲ್ಲಿ ಮಾಡಿರುವ ಟ್ರಸ್ಟ್ ನಲ್ಲಿ ನಾನು ಅಥವಾ ನಮ್ಮ ಕುಟುಂಬದವರು ಯಾರು ಇಲ್ಲ. ಯಾರೋ ಬೇರೆ ವ್ಯಕ್ತಿಗಳು ಟ್ರಸ್ಟ್ ಮಾಡಿ ದುಡ್ಡು ಮಾಡ್ತಿದ್ದಾರೆ. ದುಡ್ಡಿನಾಸೆಗೆ ಗೌರಿ ಲಂಕೇಶ್ ಹೆಸರಲ್ಲಿ ಟ್ರಸ್ಟ್ ಮಾಡಿಕೊಂಡಿದ್ದಾರೆ. ಯಾರು ಟ್ರಸ್ಟ್ ಮಾಡಿರೋದು..? ಯಾಕೆ ಮಾಡಿರೋದು ಅನ್ನೋದು ನಮ್ಮಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ.
ಇಂದ್ರಜಿತ್ ಆರೋಪಕ್ಕೆ ಕವಿತಾ ಲಂಕೇಶ್ ಸ್ಪಷ್ಟನೆ:
ಗೌರಿ ಲಂಕೇಶ್ ಹೆಸರಿನ ಟ್ರಸ್ಟ್ನಲ್ಲಿ ನಾನಿದ್ದೇನೆ. ಟ್ರಸ್ಟ್ಗೆ ಎಷ್ಟು ದುಡ್ಡು ಬಂದಿದೆ, ಎಷ್ಟು ಖರ್ಚಾಗಿದೆ ಅನ್ನೋದರ ಲೆಕ್ಕವಿದೆ. ಬೇರೆಯವರು ಬೇರೆ ಬೇರೆ ಟ್ರಸ್ಟ್ ಮಾಡಿಕೊಂಡಿರುವ ಬಗ್ಗೆ ಗೊತ್ತಿಲ್ಲ. ಇಂದ್ರಜಿತ್ ಯಾಕೆ ಹಾಗೆ ಹೇಳಿದ್ದಾರೆ ಅನ್ನೋದು ನಮಗೆ ಗೊತ್ತಿಲ್ಲ ಎಂದು ಕವಿತಾ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ.