ಜನಾರ್ಧನ ರೆಡ್ಡಿ ಮತ್ತು ನಾನು ವಿರುದ್ಧ ದಿಕ್ಕುಗಳಲ್ಲಿ ಸಾಗುತ್ತಿದ್ದೇವೆ, ಈ ಬಾರಿ ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧಿಸುತ್ತೇನೆ: ಬಿ ಶ್ರೀರಾಮುಲು

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Feb 10, 2023 | 6:31 PM

ಕಳೆದ ಬಾರಿ ಮೊಣಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಈ ಬಾರಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಹೇಳಿದರು.

ಹುಬ್ಬಳ್ಳಿ: ಒಂದು ಕಾಲದಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಬಹಳ ಆತ್ಮೀಯರು. ರಾಜಕೀಯ ಬದಿಗಿಟ್ಟು ಮಾತಾಡುವುದಾದರೆ ಅವರ ನಡುವೆ ಈಗಲೂ ಅದೇ ಬಾಂಧವ್ಯ ಇರಬಹುದು. ಹುಬ್ಬಳ್ಳಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿ ಶ್ರೀರಾಮುಲು, ತಮ್ಮ ದಿಕ್ಕುಗಳು ಈಗ ಬೇರೆಯಾಗಿವೆ, ಜನಾರ್ಧನ ರೆಡ್ಡಿ ಅವರು ತಮ್ಮದೇ ಆದ ಪಕ್ಷ ಕಟ್ಟಿಕೊಂಡು ಮುಂಬರುವ ವಿಧಾನ ಸಭಾ ಚುನಾವಣೆಗಳಿಗೆ ಅಭ್ಯರ್ಥಿಗಳನ್ನೂ ಘೋಷಣೆ ಮಾಡಿದ್ದಾರೆ ಅಂತ ಹೇಳಿದರು. ಕಳೆದ ಬಾರಿ ಮೊಣಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಈ ಬಾರಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 10, 2023 06:24 PM
Loading...
Unable to load recommendations.
Follow Us
TV9 Web

TV9 Kannada

Read More