ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!

| Updated By:

Updated on: Jun 20, 2020 | 3:11 PM

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು. ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​ ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ […]

ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!
Follow us on

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು.

ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​
ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ ಏರಿಯಾದಲ್ಲೇ ಫೇಮಸ್​. ನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಕಬಾಬ್ ಸೆಂಟರ್. ಹಾಗಾಗಿ ಇದೀಗ ಇಲ್ಲಿಗೆ ಭೇಟಿಕೊಟ್ಟ ಗ್ರಾಹಕರಿಗೆ ಈಗ ಸೋಂಕಿನ ಭೀತಿ ಶುರುವಾಗಿದೆ.

ಕಬಾಬ್​ ಸೆಂಟರ್​ ಮಾಲೀಕ ಆಸ್ಪತ್ರೆಗೆ ಶಿಫ್ಟ್​:
ಸದ್ಯಕ್ಕೆ ಕಬಾಬ್ ಸೆಂಟರ್ ಮಾಲೀಕನನ್ನ ಕೆಸಿ ಜನರಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಅವರ ಪತ್ನಿ ಹಾಗೂ ಮಗನನ್ನೂ ಸಹ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸೋಂಕಿನ ಭೀತಿಯಿಂದ ಅಕ್ಕಪಕ್ಕದ ಅಂಗಡಿಗಳು ಸೀಲ್​ಡೌನ್ ಮಾಡಲಾಗಿದೆ. ಹೀಗಾಗಿ ಇಲ್ಲಿ ಕಬಾಬ್ ತಿಂದವರು ಒಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳೋದು ಉತ್ತಮ.