ನೆಲಮಂಗಲದಲ್ಲಿ ಕಾಡುಪಾಪ ಕಂಡು ಪುಳಕಿತಗೊಂಡ ಮಾನವ ಪಾಪಾಗಳು!

|

Updated on: May 07, 2020 | 3:05 PM

ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತೇ ಸ್ತಬ್ಧಗೊಂಡಿದೆ. ಮನುಷ್ಯ ಪ್ರಾಣಿಯಂತು ಗಪ್​ಚುಪ್​ ಆಗಿಬಿಟ್ಟಿದ್ದಾನೆ. ವನ್ಯಜೀವಿ-ಮಾನವ ಸಂಘರ್ಷದ ಹೆಸರಿನಲ್ಲಿ ತಮ್ಮ ಮೇಲೆ ಮನುಕುಲ ಅವ್ಯಾಹತವಾಗಿ ದಂಡೆತ್ತಿಬರುವುದರಿಂದ ಬಸವಳಿದಿದ್ದ ಪ್ರಾಣಿ ಸಂಕುಲ ಈಗ ಸಾಕಷ್ಟು ನಿರಾಳಗೊಂಡಿದೆ. ಮನುಷ್ಯ ಸೈಲೆಂಟಾಗಿರುವುದನ್ನು ನೋಡಿ ಪ್ರಾಣಿಗಳಿಗೂ ಕನ್​ಫ್ಯೂಸ್​ ಆದಂಗಿದೆ. ಹಾಗಾಗಿ ಪ್ರಾಣಿಗಳು ನಗರ-ಪಟ್ಟಣಗಳತ್ತ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿವೆ. ನೆಲಮಂಗಲದಲ್ಲೂ ಹೀಗೇ ಆಗಿದೆ. ಮುದ್ದಾದ ಕಾಡುಪಾಪ ಸೀದಾ ನೆಲಮಂಗಲಕ್ಕೆ ಬಂದು, ಒಬ್ಬರ ಮನೆಯಲ್ಲಿ ಗಿಡ-ಪೊದೆಗಳಲ್ಲಿ ಠಳಾಯಿಸಿ ಹೋಗಿದೆ. ಕಾಡುಪಾಪ ಕಂಡು ಮಾನವ ಪಾಪಗಳೂ ಪುಳಿಕಿತಗೊಂಡಿವೆ! ಖುಷಿಯೂ ಆಯ್ತು […]

ನೆಲಮಂಗಲದಲ್ಲಿ ಕಾಡುಪಾಪ ಕಂಡು ಪುಳಕಿತಗೊಂಡ ಮಾನವ ಪಾಪಾಗಳು!
Follow us on

ಕೊರೊನಾ ಹೆಮ್ಮಾರಿಯಿಂದ ಇಡೀ ಜಗತ್ತೇ ಸ್ತಬ್ಧಗೊಂಡಿದೆ. ಮನುಷ್ಯ ಪ್ರಾಣಿಯಂತು ಗಪ್​ಚುಪ್​ ಆಗಿಬಿಟ್ಟಿದ್ದಾನೆ. ವನ್ಯಜೀವಿ-ಮಾನವ ಸಂಘರ್ಷದ ಹೆಸರಿನಲ್ಲಿ ತಮ್ಮ ಮೇಲೆ ಮನುಕುಲ ಅವ್ಯಾಹತವಾಗಿ ದಂಡೆತ್ತಿಬರುವುದರಿಂದ ಬಸವಳಿದಿದ್ದ ಪ್ರಾಣಿ ಸಂಕುಲ ಈಗ ಸಾಕಷ್ಟು ನಿರಾಳಗೊಂಡಿದೆ.
ಮನುಷ್ಯ ಸೈಲೆಂಟಾಗಿರುವುದನ್ನು ನೋಡಿ ಪ್ರಾಣಿಗಳಿಗೂ ಕನ್​ಫ್ಯೂಸ್​ ಆದಂಗಿದೆ. ಹಾಗಾಗಿ ಪ್ರಾಣಿಗಳು ನಗರ-ಪಟ್ಟಣಗಳತ್ತ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿವೆ.

ನೆಲಮಂಗಲದಲ್ಲೂ ಹೀಗೇ ಆಗಿದೆ. ಮುದ್ದಾದ ಕಾಡುಪಾಪ ಸೀದಾ ನೆಲಮಂಗಲಕ್ಕೆ ಬಂದು, ಒಬ್ಬರ ಮನೆಯಲ್ಲಿ ಗಿಡ-ಪೊದೆಗಳಲ್ಲಿ ಠಳಾಯಿಸಿ ಹೋಗಿದೆ. ಕಾಡುಪಾಪ ಕಂಡು ಮಾನವ ಪಾಪಗಳೂ ಪುಳಿಕಿತಗೊಂಡಿವೆ!

ಖುಷಿಯೂ ಆಯ್ತು ಅದಕ್ಕಿಂತ ಮೊದಲು ಭಯವೂ ಆಯ್ತು!

ವಕೀಲರಾದ ಮಂಜಪ್ಪ ಅವರ ಮನೆಯಲ್ಲಿ ಈ ಕಾಡುಪಾಪ ಮನೆ ಮಾಡಿತ್ತು. ಮಂಜಪ್ಪ ಕುಟುಂಬ ಊರಿಗೆ ಹೋಗಿದ್ದಾಗ ಕಾಡುಪಾಪ ಅವರ ಕೈತೋಟವಿರುವ ಮನೆಗೆ ಬಂದಿದೆ. ಕಾಡುಪಾಪ ನೋಡಿ ಖುಷಿಯೂ ಆಯ್ತು ಅದಕ್ಕಿಂತ ಮೊದಲು ಭಯವೂ ಆಯ್ತು.

ಅದು ಕಾಡುಪಾಪ ಎಂಬುದು ಖಚಿತಪಟ್ಟ ಮೇಲೆ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿ ತಿಳಿಸಿದೆವು. ಇಲಾಖೆ ಸಿಬ್ಬಂದಿ ಬಂದು ನಮ್ಮ ಮನೆ ಕಾಡುಪಾಪವನ್ನು ಕರೆದುಕೊಂಡು ಹೋದರು ಎಂದು ಮಂಜಪ್ಪ ಟಿವಿ9 ಗೆ ತಿಳಿಸಿದ್ದಾರೆ.

Published On - 2:09 pm, Thu, 7 May 20