
ಕೊಲ್ಕತಾ ನೈಟ್ರೈಡರ್ಸ್ ವಿರುದ್ಧ ಇಂದು ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಮೈದಾನಕ್ಕಿಳಿದ ಪಂಜಾಬ್ ಕೊನೆವರೆಗೂ ಚೆನ್ನಾಗಿ ಆಡಿ ಜಯದ ಹೊಸ್ತಲಲ್ಲಿ ಬಂದು ಎಡವಿತು. ಟಾಸ್ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ ಕೊಲ್ಕತಾ ಕೆಟ್ಟ ಆರಂಭದ ಹೊರತಾಗಿಯೂ ಉತ್ತಮ ಎನ್ನಬಹುದಾದ 164/5 ಮೊತ್ತ ಗಳಿಸಿತು. ಮುಜೀಬ್ ಉರ್ ರಹೆಮಾನ್ ಮತ್ತು ಕ್ರಿಸ್ ಜೊರ್ಡನ್ ಅವರನ್ನು ಬಿಟ್ಟರೆ, ಪಂಜಾಬಿನ ಇತರ ಬೌಲರ್ಗಳು ನಿಯಂತ್ರಣ ಕಾಯ್ದುಕೊಂಡು ಕೊಲ್ಕತಾ ಬ್ಯಾ
ಬಹಳ ಸಮಯದ ನಂತರ ಬ್ಯಾಟಿಂಗ್ನಲ್ಲಿ ಮಿಂಚಿದ ದಿನೇಶ್ ಕಾರ್ತೀಕ್ ಇಂದು ಕೇವಲ 29 ಎಸೆತಗಳಲ್ಲಿ 58 ರನ್ (8X4 2X6) ಚಚ್ಚಿದರು. ಹಾಗೆಯೇ, ಮತ್ತೊಮ್ಮೆ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ 47 ಎಸೆತಗಳಲ್ಲಿ 57 (5X4) ಬಾರಿಸಿದರು.
ಇಂಪೋಸಿಂಗ್ ಅಲ್ಲದ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ನ ಆರಂಭ ಕೊಲ್ಕತಾದ ಆರಂಭಕ್ಕೆ ತದ್ವಿರುದ್ಧವಾಗಿತ್ತು. ರಾಹುಲ್ (74 58 6X4) ಹಾಗೂ ಮಾಯಾಂಕ್ ಅಗರ್ವಾಲ್(56 39 6X4 1X6)
ಮಧ್ಯಮ ವೇಗದ ಬೌಲರ್ ಕರ್ನಾಟಕದ ಪ್ರಸಿಧ್ ಕೃಷ್ಣ ತಮ್ಮ ನಿಖರವಾದ ಬೌಲಿಂಗ್ ಮೂಲಕ (3/29) ಪಂಜಾಬ್ ಸೋಲಿಗೆ ಕಾರಣರಾದರು. ಅವರಷ್ಟೇ ಉತ್ತಮವಾಗಿ ದಾಳಿ ನಡೆಸಿದ ಮತ್ತು ನಿರ್ಣಾಯಕ ಕೊನೆಯ ಓವರ್ ಬೌಲ್ ಮಾಡಿದ ಸುನಿಲ್ ನರೈನ್ 28ರನ್ ಮಾತ್ರ ನೀಡಿ 2 ವಿಕೆಟ್ ಪಡೆದರು.
ಅಂತಿಮ ಸ್ಕೋರ್ಗಳು
ಕೊಲ್ಕತಾ ನೈಟ್ ರೈಡರ್ಸ್: 164/5 (20 ಓವರ್)
ಕಿಂಗ್ಸ್ ಇಲೆವೆನ್ ಪಂಜಾಬ್: 162/5 (20 ಓವರ್)
ಫಲಿತಾಂಶ: ಕೊಲ್ಕತಾ ನೈಟ್ ರೈಡರ್ಸ್ಗೆ 2 ರನ್ಗಳ ಜಯ