ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯುವುದು ಒಳ್ಳೇದು ಎಂದು ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಪಂಚಮಸಾಲಿಗರಿಗೆ ಮೀಸಲಾತಿ ಬಗ್ಗೆ ಸಿಎಂ ನೀಡಿದ ಗೊಂದಲದ ಹೇಳಿಕೆ ಹಿನ್ನೆಲೆಯಲ್ಲಿ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ. ವಯಸ್ಸಿನ ಕಾರಣ ಸಿಎಂ ಬಿಎಸ್ವೈ ಗೊಂದಲದ ಹೇಳಿಕೆ ಕೊಟ್ಟಿದ್ದಾರೆ. ಸಿಎಂ ಗೊಂದಲದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಸಿಎಂ ಬೆಳಗ್ಗೆ ಒಂದು ಸಂಜೆ ಒಂದು ಹೇಳಿಕೆ ನೀಡುತ್ತಾರೆ. ಸಿಎಂ ಯಡಿಯೂರಪ್ಪಗೆ ಆಯಾಸ, ದಣಿವು ಆಗಿದೆ ಎಂದು ಯತ್ನಾಳ್ ಹೇಳಿದರು.
‘BSY ಕುಟುಂಬದಿಂದ ಕರ್ನಾಟಕ ಮುಕ್ತ ಆಗಬೇಕು’
ಬೆಳಗ್ಗೆಯೇ ಈ ಆದೇಶ ನೀಡಿದ್ರೆ ಆಕ್ರೋಶ ಭುಗಿಲೇಳ್ತಿರಲಿಲ್ಲ. ಸಿಎಂ ಬಿಎಸ್ವೈ ಬದಲು ಕುಟುಂಬದವರಿಂದ ಆಡಳಿತ ನಡೆಸಲಾಗುತ್ತಿದೆ. ವಿಜಯೇಂದ್ರ ಮತ್ತು ಕುಟುಂಬ ಸರ್ಕಾರ ನಡೆಸುತ್ತಿದೆ. ಪ್ರಧಾನಿಗೆ ಕುಟುಂಬ ರಾಜಕಾರಣ ಮುಕ್ತ ಕನಸಿದೆ. BSY ಕುಟುಂಬದಿಂದ ಕರ್ನಾಟಕ ಮುಕ್ತ ಆಗಬೇಕು ಎಂದು ಶಾಶಕರು ಹೇಳಿದರು.
ಹೈಕಮಾಂಡ್ ಗೌರವಯುತ ಬೇಡಿಕೆಗೆ ಸಜ್ಜಾಗಿದೆ. BSY ಉಳಿಯಬೇಕು, ಕುಟುಂಬ ಉದ್ಧಾರ ಮಾಡಬೇಕು. BSY ತಮ್ಮ ಕುಟುಂಬವನ್ನು ಉದ್ಧಾರ ಮಾಡಬೇಕೆಂದುಕೊಂಡಿದ್ದಾರೆ. ವಿಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಸದನಕ್ಕೆ ಬರಲಿಲ್ಲ. ಸಿದ್ದರಾಮಯ್ಯ ಬೇಕು ಬೇಡ ಮಾತಾಡಿದರು ಎಂದು ಯತ್ನಾಳ್ ಹೇಳಿದರು. ಫೆ.10ರಂದು ಸಮುದಾಯದ ಶಾಸಕರು ಮುಖಂಡರ ಸಭೆ ನಡೆಸುತ್ತೇವೆ. ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಶಾಸಕ ಯತ್ನಾಳ್ ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ: ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಿಎಂ BSY ಸೂಚನೆ