ಪ್ರವಾಸಿಗರಿಲ್ಲದೆ ಬನ್ನೇರುಘಟ್ಟ ಪಾರ್ಕ್​ಗೆ ಆದಾಯ ಖೋತಾ, ಶಾಸಕ ಕೃಷ್ಣಪ್ಪ ಏನ್ಮಾಡಿದ್ರು?

|

Updated on: May 09, 2020 | 2:24 PM

ಆನೇಕಲ್: ಹೆಮ್ಮಾರಿ ಕೊರೊನಾ ವೈರಸ್​ ಲಾಕ್​ಡೌನ್​ನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನ್ನು ಬಂದ್ ಮಾಡಲಾಗಿದೆ. ಮೃಗಾಲಯಕ್ಕೆ ಪ್ರವಾಸಿಗರೇ ಮೂಲ ಆದಾಯವಾಗಿತ್ತು. ಆದ್ರೀಗ ಬಂದ್ ಮಾಡಿರುವ ಕಾರಣ ಪ್ರವಾಸಿಗರಿಲ್ಲದೆ ಮೃಗಾಲಯ ಖಾಲಿ ಖಾಲಿಯಾಗಿದೆ. ಇದರಿಂದ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಆಹಾರ ನೀಡುವುದು ಕಷ್ಟವಾಗಿದೆ. ಇದರಿಂದ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಶಾಸಕ ಎಂ.ಕೃಷ್ಣಪ್ಪ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಿಸರ್ಗ ಹೆಸರಿನ ಆನೆ, ಹಿಮ ಹೆಸರಿನ ಹುಲಿಯನ್ನು ಶಾಸಕ […]

ಪ್ರವಾಸಿಗರಿಲ್ಲದೆ ಬನ್ನೇರುಘಟ್ಟ ಪಾರ್ಕ್​ಗೆ ಆದಾಯ ಖೋತಾ, ಶಾಸಕ ಕೃಷ್ಣಪ್ಪ ಏನ್ಮಾಡಿದ್ರು?
Follow us on

ಆನೇಕಲ್: ಹೆಮ್ಮಾರಿ ಕೊರೊನಾ ವೈರಸ್​ ಲಾಕ್​ಡೌನ್​ನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನ್ನು ಬಂದ್ ಮಾಡಲಾಗಿದೆ. ಮೃಗಾಲಯಕ್ಕೆ ಪ್ರವಾಸಿಗರೇ ಮೂಲ ಆದಾಯವಾಗಿತ್ತು. ಆದ್ರೀಗ ಬಂದ್ ಮಾಡಿರುವ ಕಾರಣ ಪ್ರವಾಸಿಗರಿಲ್ಲದೆ ಮೃಗಾಲಯ ಖಾಲಿ ಖಾಲಿಯಾಗಿದೆ. ಇದರಿಂದ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಆಹಾರ ನೀಡುವುದು ಕಷ್ಟವಾಗಿದೆ.

ಇದರಿಂದ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಶಾಸಕ ಎಂ.ಕೃಷ್ಣಪ್ಪ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಿಸರ್ಗ ಹೆಸರಿನ ಆನೆ, ಹಿಮ ಹೆಸರಿನ ಹುಲಿಯನ್ನು ಶಾಸಕ ಕೃಷ್ಣಪ್ಪ ದತ್ತು ಪಡೆದಿದ್ದಾರೆ.

ಕೃಷ್ಣಪ್ಪ ಅವರ ಸ್ನೇಹಿತರೂ ಸಹ ಎರಡು ಹುಲಿ, ಎರಡು ಚಿರತೆ ಮತ್ತು ಝೀಬ್ರಾಗಳ ದತ್ತು ಸ್ವೀಕರಿಸಿದ್ದಾರೆ. ಮೃಗಾಲಯ ಪ್ರಾಧಿಕಾರಕ್ಕೆ ಒಟ್ಟು 5.95 ಲಕ್ಷ ರೂಪಾಯಿ ಪಾವತಿಸಿ ದತ್ತು ಪಡೆದಿದ್ದಾರೆ.

Published On - 2:23 pm, Sat, 9 May 20