ಕೊಪ್ಪಳ: ಸಿದ್ದರಾಮಯ್ಯ ಸಾಹೇಬರು ಒಂದು ಸಮಾಜದ ಲೀಡರ್ ಅಲ್ಲ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು. ಸಿದ್ದರಾಮಯ್ಯನವರು ಕಾರ್ಯಕ್ರಮ ಮುಂದುವರಿಸಿದ್ರೆ ಸಾಕಾಗಿತ್ತು. BJPಯವರು ಸಿದ್ದರಾಮಯ್ಯನವರ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಕುರುಬರ ST ಮೀಸಲಾತಿ ಹೋರಾಟದ ಹಿಂದೆ RSS ಇದೆ. RSSನವರೇ ಮೀಸಲಾತಿ ಹೋರಾಟ ಆರಂಭಿಸಿದ್ದಾರೆ ಎಂದು ಶಾಸಕ ಹಿಟ್ನಾಳ್ ಹೇಳಿದರು. ಜೊತೆಗೆ, ಈ ಹೋರಾಟ ಆರಂಭಿಸಿದ RSSಗೆ ಮುಳುವಾಗುತ್ತೆ ಎಂದು ಸಹ ಹೇಳಿದರು.
‘ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ’
ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ ಎಂದು ST ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪನಿಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಟಾಂಗ್ ಕೊಟ್ಟರು. ಏನೋ ವಯಸ್ಸಾಗಿದೆ ಕಂಟ್ರೋಲ್ ತಪ್ಪುತ್ತಾರೆ ಎಂದ ಹಿಟ್ನಾಳ್ ಸಿದ್ದರಾಮಯ್ಯ ಕೊಪ್ಪಳಕ್ಕೆ ಬಂದರೆ ನಾನು ಕ್ಷೇತ್ರ ಬಿಟ್ಟುಕೊಡುವೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ಇದನ್ನೂ ಓದಿ: Shivaraj Tangadagi ನಮ್ಮ ಸಂಸದರಿಗೆ ತಾಕತ್ ಇದ್ರೆ.. ಮೋದಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲಿ -ಶಿವರಾಜ್ ತಂಗಡಗಿ ಸವಾಲ್
Published On - 5:50 pm, Sun, 14 February 21