ಕೊವಿಡ್ ಟೆಸ್ಟ್ ಎಷ್ಟು ದಿನ ವ್ಯಾಲಿಡ್? ಸಭಾಪತಿಗೆ CM ಇಬ್ರಾಹಿಂ ವ್ಯಂಗ್ಯ ಪ್ರಶ್ನೆ

| Updated By: ಸಾಧು ಶ್ರೀನಾಥ್​

Updated on: Sep 21, 2020 | 3:11 PM

ಬೆಂಗಳೂರು: ವಿಧಾನಸೌಧದಲ್ಲಿ ಇಂದಿನಿಂದ ಆರಂಭವಾದ ವಿಧಾನ ಪರಿಷತ್​ ಅಧಿವೇಶನದಲ್ಲಿ ಸದಸ್ಯ CM ಇಬ್ರಾಹಿಂ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯಲ್ಲಿ ನಗೆ ಚಟಾಕಿಯೊಂದನ್ನು ಹಾರಿಸಿದ್ದಾರೆ. ಪರಿಷತ್ ಕಲಾಪದ ವೇಳೆ ಕೋವಿಡ್ ಟೆಸ್ಟ್​ನ ಎಷ್ಟು ಸಲ ಮಾಡಿಸಿಕೊಳ್ಳಬೇಕು? ಒಂದು ಸಲ ಬರುವ ರಿಪೋರ್ಟ್ ಎಷ್ಟು ದಿನ ವ್ಯಾಲಿಡ್ ಇರುತ್ತದೆ? ಎಂದು CM ಇಬ್ರಾಹಿಂ ಸಭಾಪತಿಯನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡದ ಸಭಾಪತಿ! ಪ್ರತಿ ಬಾರಿ ಬಾಯಿಗೆ ಮೂಗಿಗೆ ಚುಚ್ಚಿಸಿಕೊಳ್ಳಲು ಆಗುವುದಿಲ್ಲ ಎಂದು ವ್ಯಂಗ್ಯ ಮಿಶ್ರಿತವಾಗಿ ಸಭಾಪತಿಗಳನ್ನು CM ಇಬ್ರಾಹಿಂ […]

ಕೊವಿಡ್ ಟೆಸ್ಟ್ ಎಷ್ಟು ದಿನ ವ್ಯಾಲಿಡ್? ಸಭಾಪತಿಗೆ CM ಇಬ್ರಾಹಿಂ ವ್ಯಂಗ್ಯ ಪ್ರಶ್ನೆ
Follow us on

ಬೆಂಗಳೂರು: ವಿಧಾನಸೌಧದಲ್ಲಿ ಇಂದಿನಿಂದ ಆರಂಭವಾದ ವಿಧಾನ ಪರಿಷತ್​ ಅಧಿವೇಶನದಲ್ಲಿ ಸದಸ್ಯ CM ಇಬ್ರಾಹಿಂ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯಲ್ಲಿ ನಗೆ ಚಟಾಕಿಯೊಂದನ್ನು ಹಾರಿಸಿದ್ದಾರೆ.
ಪರಿಷತ್ ಕಲಾಪದ ವೇಳೆ ಕೋವಿಡ್ ಟೆಸ್ಟ್​ನ ಎಷ್ಟು ಸಲ ಮಾಡಿಸಿಕೊಳ್ಳಬೇಕು? ಒಂದು ಸಲ ಬರುವ ರಿಪೋರ್ಟ್ ಎಷ್ಟು ದಿನ ವ್ಯಾಲಿಡ್ ಇರುತ್ತದೆ? ಎಂದು CM ಇಬ್ರಾಹಿಂ ಸಭಾಪತಿಯನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಯಾವುದೇ ಪ್ರತಿಕ್ರಿಯೆ ನೀಡದ ಸಭಾಪತಿ!
ಪ್ರತಿ ಬಾರಿ ಬಾಯಿಗೆ ಮೂಗಿಗೆ ಚುಚ್ಚಿಸಿಕೊಳ್ಳಲು ಆಗುವುದಿಲ್ಲ ಎಂದು ವ್ಯಂಗ್ಯ ಮಿಶ್ರಿತವಾಗಿ ಸಭಾಪತಿಗಳನ್ನು CM ಇಬ್ರಾಹಿಂ ಪ್ರಶ್ನಿಸಿದರು. ಆದರೆ, ಇಬ್ರಾಹಿಂ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಸಭಾಪತಿಗಳು ಇಂದಿನ ಕಾರ್ಯಕಲಾಪಗಳನ್ನು ಕೈಗೆತ್ತಿಕೊಂಡರು.