ಮೈಸೂರು: ಆರಂಭದಲ್ಲಿ ಅರಮನೆ ನಗರಿಯಲ್ಲಿ ಕ್ರೂರಿ ಕೊರೊನಾ ಅಬ್ಬರಿಸಿತ್ತು. ನಂತರ ಫುಲ್ ಸೈಲೆಂಟ್ ಆಗಿದ್ದ ಹೆಮ್ಮಾರಿ ಮತ್ತೆ ಬಾಲ ಬಿಚ್ಚೋಕೆ ಶುರುಮಾಡಿದೆ. ಹೊರ ರಾಜ್ಯದ ನಂಟು ಸಾಂಸ್ಕೃತಿಕ ನಗರಿಯನ್ನ ಕಾಡುತ್ತಿದೆ. ಹೀಗಾಗಿ ಅಲ್ಲಿನ ವರ್ತಕರು ಕೊರೊನಾ ವಿರುದ್ಧ ಹೋರಾಡಲು ಸರ್ಕಾರದ ಜೊತೆ ಕೈಜೋಡಿಸಿದ್ದಾರೆ.
ಅಂಗಡಿಗಳು ಬಂದ್ ಆಗಿವೆ. ಜನರಿಂದ ತುಂಬಿ ತುಳುಕುತ್ತಿದ್ದ ಏರಿಯಾಗಳು ಫುಲ್ ಸೈಲೆಂಟ್ ಆಗಿವೆ. ಇದು ಮೈಸೂರಿನ ಹೃದಯಭಾಗದಲ್ಲಿರುವ ಶಿವರಾಂಪೇಟೆ ಹಾಗೂ ಸಂತೇಪೇಟೆ. ಮೈಸೂರಿನ ಎರಡು ಪ್ರಮುಖ ವಾಣಿಜ್ಯ ಅಂಗಡಿಗಳಿರುವ ಎರಡು ಪ್ರಮುಖ ಮಾರುಕಟ್ಟೆಗಳ ಪರಿಸ್ಥಿತಿ. ಇದೀಗ ಈ ಎರಡು ಮಾರುಕಟ್ಟೆಗಳನ್ನು ಪ್ರತಿ ಭಾನುವಾರ ಬಂದ್ ಮಾಡಲು ಇಲ್ಲಿನ ವರ್ತಕರು ನಿರ್ಧರಿಸಿದ್ದಾರೆ.
ಸದ್ಯ, ಮೈಸೂರಿನಲ್ಲಿ 94 ಜನರು ಮಹಾಮಾರಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 20 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಪ್ರತಿದಿನ ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮೈಸೂರಿನ ವರ್ತಕರು ಭಾನುವಾರದ ತಮ್ಮ ವ್ಯಾಪಾರಕ್ಕೆ ಬ್ರೇಕ್ ಹಾಕಿದ್ದಾರೆ. ಆದ್ರೆ, ಒಂದು ದಿನದ ಲಾಕ್‌ಡೌನ್‌ನಿಂದ ಕೊರೊನಾ ಕಂಟ್ರೋಲ್‌ಗೆ ಬರುತ್ತಾ ಅನ್ನೋದೆ ಯಕ್ಷ ಪ್ರಶ್ನೆ.
Published On - 6:48 am, Mon, 15 June 20