ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರಿನ NGO ಸದಸ್ಯರ ಮೋಜು ಮಸ್ತಿ!
ಚಾಮರಾಜನಗರ: ಕೊರೊನಾ ಲಾಕ್ಡೌನ್ ಸಂದರ್ಭದಲ್ಲೂ ವೈಲ್ಡ್ ಲೈಫ್ ಹೆಸರಿನಲ್ಲಿ ಎನ್ಜಿಒ ಸದಸ್ಯರು ಮೋಜು ಮಸ್ತಿ ಮಾಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರು ಮೂಲದ ವ್ಯಕ್ತಿಗಳು ಕಾಟೇಜ್ನಲ್ಲಿ ತಂಗಿದ್ದಾರೆ. ಇಂಡಿಯನ್ ಕಂಜರ್ವೇಷನ್ ಫಾರ್ ವೈಲ್ಡ್ ಲೈಫ್ ಟ್ರಸ್ಟ್ನ ಏಳು ಮಂದಿ ಎರಡು ಕಾಟೇಜ್ ಪಡೆದು ವಾಸ್ತವ್ಯ ಹೂಡಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶಗಳಿಗೆ ಮಾಸ್ಕ್, ಸ್ಯಾನಿಟೈಸರ್ ಕೊಡುವ ನೆಪ ಹೇಳಿ ಸದಸ್ಯರು ತಂಗಿದ್ದಾರೆ. ಡೇಂಜರ್ ಝೋನ್ನಲ್ಲಿರುವ ಬೆಂಗಳೂರಿನಿಂದ ಬಂದಿರುವ ಕಾರಣ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
Follow us on
ಚಾಮರಾಜನಗರ: ಕೊರೊನಾ ಲಾಕ್ಡೌನ್ ಸಂದರ್ಭದಲ್ಲೂ ವೈಲ್ಡ್ ಲೈಫ್ ಹೆಸರಿನಲ್ಲಿ ಎನ್ಜಿಒ ಸದಸ್ಯರು ಮೋಜು ಮಸ್ತಿ ಮಾಡುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರು ಮೂಲದ ವ್ಯಕ್ತಿಗಳು ಕಾಟೇಜ್ನಲ್ಲಿ ತಂಗಿದ್ದಾರೆ.
ಇಂಡಿಯನ್ ಕಂಜರ್ವೇಷನ್ ಫಾರ್ ವೈಲ್ಡ್ ಲೈಫ್ ಟ್ರಸ್ಟ್ನ ಏಳು ಮಂದಿ ಎರಡು ಕಾಟೇಜ್ ಪಡೆದು ವಾಸ್ತವ್ಯ ಹೂಡಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶಗಳಿಗೆ ಮಾಸ್ಕ್, ಸ್ಯಾನಿಟೈಸರ್ ಕೊಡುವ ನೆಪ ಹೇಳಿ ಸದಸ್ಯರು ತಂಗಿದ್ದಾರೆ. ಡೇಂಜರ್ ಝೋನ್ನಲ್ಲಿರುವ ಬೆಂಗಳೂರಿನಿಂದ ಬಂದಿರುವ ಕಾರಣ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.