ಸೋಂಕಿನಿಂದ ಪತಿ ಆಸ್ಪತ್ರೆಯಲ್ಲಿ ಸಾವು, ಸುದ್ದಿ ತಿಳಿದ ಮಡದಿ ಮನೆಯಲ್ಲಿ ಕೊನೆಯುಸಿರು, ಎಲ್ಲಿ?

ಮೈಸೂರು: ಸೋಂಕಿನಿಂದ ನಿವೃತ್ತ ASIಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸಾವಿನ ಸುದ್ದಿ ಕೇಳಿ ಅವರ ಪತ್ನಿಯು ಸಹ ಮನೆಯಲ್ಲಿ ಅಸುನೀಗಿರುವ ಹೃದಯ ವಿದ್ರಾವಕ ಘಟನೆ ನಗರದ ಉತ್ತನಹಳ್ಳಿಯಲ್ಲಿ ಇಂದು ನಡೆದಿದೆ. ಕೊರೊನಾ ಪಾಸಿಟಿವ್ ಬಂಧ ನಂತರ ನಿವೃತ್ತ ASIರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ನಡುವೆ ವೃದ್ಧನ ಪತ್ನಿಗೂ ಸೋಂಕು ದೃಢಪಟ್ಟಿದ್ದು ಆಕೆಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ವೃದ್ಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಈ ವಿಚಾರ ತಿಳಿದ ಅವರ ಸೋಂಕಿತ ಮಡದಿಯೂ ದುಃಖದಿಂದ ಮನೆಯಲ್ಲಿ […]

ಸೋಂಕಿನಿಂದ ಪತಿ ಆಸ್ಪತ್ರೆಯಲ್ಲಿ ಸಾವು, ಸುದ್ದಿ ತಿಳಿದ ಮಡದಿ ಮನೆಯಲ್ಲಿ ಕೊನೆಯುಸಿರು, ಎಲ್ಲಿ?
ಮೈಸೂರು
ಸಾಧು ಶ್ರೀನಾಥ್​ Edited By:

Updated on: Jul 23, 2020 | 11:43 AM

ಮೈಸೂರು: ಸೋಂಕಿನಿಂದ ನಿವೃತ್ತ ASIಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸಾವಿನ ಸುದ್ದಿ ಕೇಳಿ ಅವರ ಪತ್ನಿಯು ಸಹ ಮನೆಯಲ್ಲಿ ಅಸುನೀಗಿರುವ ಹೃದಯ ವಿದ್ರಾವಕ ಘಟನೆ ನಗರದ ಉತ್ತನಹಳ್ಳಿಯಲ್ಲಿ ಇಂದು ನಡೆದಿದೆ.

ಕೊರೊನಾ ಪಾಸಿಟಿವ್ ಬಂಧ ನಂತರ ನಿವೃತ್ತ ASIರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ನಡುವೆ ವೃದ್ಧನ ಪತ್ನಿಗೂ ಸೋಂಕು ದೃಢಪಟ್ಟಿದ್ದು ಆಕೆಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ವೃದ್ಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಈ ವಿಚಾರ ತಿಳಿದ ಅವರ ಸೋಂಕಿತ ಮಡದಿಯೂ ದುಃಖದಿಂದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸರ್ಕಾರದ ನಿಯಮದಂತೆ ವೃದ್ಧ ದಂಪತಿಯ ಅಂತ್ಯಕ್ರಿಯೆಯನ್ನು ವಿಜಯನಗರದ ‌ಮುಕ್ತಿಧಾಮದಲ್ಲಿ ನೆರೆವೇರಿಸಲಾಗಿದೆ. ಇದೀಗ, ವೃದ್ಧ ದಂಪತಿಯ ಸಾವಿನಿಂದಾಗಿ ಉತ್ತನಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

Published On - 7:29 pm, Tue, 21 July 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us