ಕರುನಾಡು ಅನ್ಲಾಕ್ ಆದ್ರೂ ಕಂಟೇನ್ಮೆಂಟ್ ಜೋನ್‌ಗಳಲ್ಲಿ ಖಡಕ್ ರೂಲ್ಸ್ ಜಾರಿ
ಬೆಂಗಳೂರು: ಮಹಾಮಾರಿಯನ್ನ ಓಡಿಸಲು ಮಾಸ್ಕೇ ಮದ್ದು.. ಕ್ರೂರಿ ಕೊರೊನಾವನ್ನ ಒದ್ದೋಡಿಸೋಕೆ ಅಂತರವೇ ಔಷಧ. ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರೋ ಸೋಂಕನ್ನ ತೊಲಗಿಸೋಕೆ ಲಾಕ್‌ಡೌನ್ ಒಂದೇ ಬ್ರಹ್ಮಾಸ್ತ್ರವಲ್ಲ. ಇದೆಲ್ಲವನ್ನ ಹೇಳಿರೋದು ರಾಜ್ಯದ ಮುಖ್ಯಮಂತ್ರಿಗಳು. ಯಾಕಂದ್ರೆ ಸೋಂಕಿನ ರಣಕೇಕೆ ಏರ್ತಿರೋವಾಗೆಲ್ಲಾ ಲಾಕ್‌ಡೌನ್ ಅಂತಿದ್ದ ರಾಜ್ಯ ಸರ್ಕಾರ ಅದನ್ನ ಬದಿಗಿಟ್ಟು ಹೋರಾಟಕ್ಕೆ ನಿಂತಿದೆ. ಕರುನಾಡು ಇನ್ಮುಂದೆ ಕಂಪ್ಲೀಟ್ ಅನ್ಲಾಕ್! ಯೆಸ್.. ಬೆಂಗಳೂರಿಗೆ ಬಿದ್ದಿದ್ದ ಬೀಗ ಕಂಪ್ಲೀಟ್ ಓಪನ್ ಆಗ್ತಿದೆ. ಇದ್ರ ಜೊತೆ ಜೊತೆಗೆ ರಾಜ್ಯದ ಪ್ರತಿಯೊಂದು ಗಲ್ಲಿಗಳಿಗೆ ಬಿದ್ದಿರೋ ಲಾಕ್ ಇಂದಿನಿಂದಲೇ ತೆರೆಯಲಿದೆ. […]

ಬೆಂಗಳೂರು: ಮಹಾಮಾರಿಯನ್ನ ಓಡಿಸಲು ಮಾಸ್ಕೇ ಮದ್ದು.. ಕ್ರೂರಿ ಕೊರೊನಾವನ್ನ ಒದ್ದೋಡಿಸೋಕೆ ಅಂತರವೇ ಔಷಧ. ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರೋ ಸೋಂಕನ್ನ ತೊಲಗಿಸೋಕೆ ಲಾಕ್‌ಡೌನ್ ಒಂದೇ ಬ್ರಹ್ಮಾಸ್ತ್ರವಲ್ಲ. ಇದೆಲ್ಲವನ್ನ ಹೇಳಿರೋದು ರಾಜ್ಯದ ಮುಖ್ಯಮಂತ್ರಿಗಳು. ಯಾಕಂದ್ರೆ ಸೋಂಕಿನ ರಣಕೇಕೆ ಏರ್ತಿರೋವಾಗೆಲ್ಲಾ ಲಾಕ್‌ಡೌನ್ ಅಂತಿದ್ದ ರಾಜ್ಯ ಸರ್ಕಾರ ಅದನ್ನ ಬದಿಗಿಟ್ಟು ಹೋರಾಟಕ್ಕೆ ನಿಂತಿದೆ.
ಕರುನಾಡು ಇನ್ಮುಂದೆ ಕಂಪ್ಲೀಟ್ ಅನ್ಲಾಕ್! ಯೆಸ್.. ಬೆಂಗಳೂರಿಗೆ ಬಿದ್ದಿದ್ದ ಬೀಗ ಕಂಪ್ಲೀಟ್ ಓಪನ್ ಆಗ್ತಿದೆ. ಇದ್ರ ಜೊತೆ ಜೊತೆಗೆ ರಾಜ್ಯದ ಪ್ರತಿಯೊಂದು ಗಲ್ಲಿಗಳಿಗೆ ಬಿದ್ದಿರೋ ಲಾಕ್ ಇಂದಿನಿಂದಲೇ ತೆರೆಯಲಿದೆ. ಪ್ರತಿಯೊಂದು ಏರಿಯಾ.. ಪ್ರತಿಯೊಂದು ಕೇರಿ ಕಂಪ್ಲೀಟ್ ಫ್ರೀ.. ಫ್ರೀ.. ಇನ್ಮುಂದೆ ಎಲ್ಲೆಲ್ಲೂ ನಾರ್ಮಲ್ ಲೈಫ್. ಸಿಎಂ ಬಿಎಸ್‌ವೈ ಕೂಡ ಇನ್ಮುಂದೆ ರಾಜ್ಯದ ಯಾವ ಭಾಗದಲ್ಲೂ ಲಾಕ್‌ಡೌನ್ ಇರಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾರೆ. ಆದ್ರೆ, ಕೊರೊನಾ ಅರ್ಭಟಿಸ್ತಿರೋ ಕಂಟೇನ್ಮೆಂಟ್ ಜೋನ್‌ಗಳಲ್ಲಿ ಮಾತ್ರ ಬಿಗಿ ಕ್ರಮ ಅನ್ನೋದನ್ನ ಖಡಕ್ ಆಗೇ ಹೇಳಿದ್ದಾರೆ.
ಸಿಎಂ ಸಾಹೇಬ್ರು ಹೇಳಿದಂತೆ ರಾಜ್ಯದ ಹಲವೆಡೆ ಅಂಗಡಿಗಳು, ಮಾಲ್ಗಳು ಸೇರಿದಂತೆ ಎಲ್ಲದಕ್ಕೂ ಬಿದ್ದಿದ್ದ ಬೀಗ ಓಪನ್ ಆಗಲಿದೆ. ಇದರ ಜೊತೆ ಜೊತೆಗೆ ಹೊಸ ಮಾರ್ಗಸೂಚಿ ಕೂಡ ರಿಲೀಸ್ ಮಾಡಲಾಗಿದೆ.
ಅನ್ಲಾಕ್ ಮಾರ್ಗಸೂಚಿ..! ರಾಜ್ಯದಲ್ಲಿ ಲಾಕ್‌ಡೌನ್ ತೆರವು ಹಿನ್ನೆಲೆತಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನ ರಿಲೀಸ್ ಮಾಡಿದೆ. ರಾತ್ರಿ 9ರಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಪ್ರತಿ ಸಂಡೇ ಲಾಕ್‌ಡೌನ್ ಮುಂದುವರಿಯಲಿದೆ. ಎಲ್ಲಾ ಅಂಗಡಿಗಳನ್ನ ರಾತ್ರಿ 9 ಗಂಟೆಗೆ ಬಂದ್ ಮಾಡ್ಬೇಕು ಅನ್ನೋ ಖಡಕ್ ಆದೇಶ ಹೊರಡಿಸಲಾಗಿದೆ. ಜನಸಂದಣಿ ತಡೆಗಟ್ಟಲು ಮಾರ್ಕೆಟ್ಗಳನ್ನ ಎಪಿಎಂಸಿ ಅಥವಾ ವಿಶಾಲ ಪ್ರದೇಶಗಳಿಗೆ ಸ್ಥಳಾಂತರ ಸೂಚಿಸಲಾಗಿದೆ.
ಅದ್ರಲ್ಲೂ ಇಂಪಾರ್ಟೆಂಟ್ ಅಂದ್ರೆ ಪಾರ್ಕ್ಗಳಲ್ಲಿ ಜಿಮ್ ಸಲಕರಣೆಗಳ ಬಳಕೆಗೆ ಅವಕಾಶವಿಲ್ಲ. ಜೊತೆಗೆ ಪಾರ್ಕ್ಗಳಲ್ಲಿ ಕುಳಿತುಕೊಳ್ಳುವ ಬೆಂಚ್ಗಳ ಬಳಕೆ ನಿಷೇಧ ವಿಧಿಸಲಾಗಿದೆ. ಇನ್ನು ಜುಲೈ 31ರವರೆಗೆ ಪ್ರಸ್ತುತ ಮಾರ್ಗಸೂಚಿ ಜಾರಿಯಲ್ಲಿರಲಿದೆ ಅನ್ನೋದನ್ನ ಹೇಳಲಾಗಿದೆ. ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲು ಜಿಲ್ಲಾಡಳಿತದ ವಿವೇಚನೆ ಬಿಡಲಾಗಿದೆ.
ಸಿಎಂ ಸಾಹೇಬ್ರೇ ಲಾಕ್‌ಡೌನ್ ಕ್ಯಾನ್ಸಲ್ ಅನ್ನೋ ಆದೇಶ ಹೊರಡಿಸ್ತಿದ್ದಂತೆ ಲಾಕ್ ಆಗಿದ್ದ ಜಿಲ್ಲೆಗಳು ಇಂದಿನಿಂದಲೇ ಓಪನ್ ಆಗ್ತಿವೆ. ಲಾಕ್ ಆಗಿದ್ದ ಜನರ ಲೈಫ್ ನಾರ್ಮಲ್ ಆಗರಲಿದೆ..
ಲಾಕ್‌ಡೌನ್ ತೆರವು ಬಗ್ಗೆ ಹಲವು ಜಿಲ್ಲೆಯಲ್ಲಿ ಗೊಂದಲ! ಎಲ್ಲೂ ಲಾಕ್‌ಡೌನ್ ಮಾಡಂಗೇ ಇಲ್ಲ ಅಂಥಾ ಸಿಎಂ ಆದೇಶಿಸಿದ್ರೆ ಈಗಾಗಲೇ ಲಾಕ್ ಆಗಿರೋ ಹಲವು ಜಿಲ್ಲೆಗಳಲ್ಲಿ ಇನ್ನೂ ಗೊಂದಲ ಇದೆ. ಇದ್ರ ಜೊತೆಗೆ ಸಿಎಂ ಬಿಎಸ್‌ವೈ ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ನಿರ್ಧಾರ ಕೈಗೊಳ್ಳೋಕೆ ಜಿಲ್ಲಾಡಳಿತಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಹಲವು ಜಿಲ್ಲೆಗಳಲ್ಲಿ ಜಾರಿಯಲ್ಲಿರೋ ಲಾಕ್‌ಡೌನ್ ತೆರವಿನ ಬಗ್ಗೆ ಇಂದು ನಿರ್ಧಾರ ಹೊರ ಬೀಳೋ ಸಾಧ್ಯತೆ ಹೆಚ್ಚಿದೆ.
ಒಟ್ನಲ್ಲಿ ಬೆಂಗಳೂರಿನಲ್ಲಿ ಮಾತ್ರವಲ್ಲ.. ಇಂದಿನಿಂದ ಇಡೀ ಕರುನಾಡಿಗೆ ಬಿದ್ದಿದ್ದ ಲಾಕ್ ಓಪನ್ ಆಗ್ತಿದೆ. ಆರ್ಥಿಕತೆ ಜವಬ್ದಾರಿ, ಖಜಾನೆ ಕೀಲಿ ಕೈ ಹೊಂದಿರೋ ಸಿಎಂ ಬಿಎಸ್‌ವೈ ಲಾಕ್‌ಡೌನ್ ಬೇಡ್ವೇ ಬೇಡ ಎಂದಿದ್ದಾರೆ. ಇತ್ತ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಿ ಸೋಂಕನ್ನ ನಿಯಂತ್ರಿಸಬೇಕು ಅಂತಾ ಜಿಲ್ಲಾಡಳಿತಗಳು ಸಜ್ಜಾಗಿರೋ ಹೊತ್ತಲ್ಲೇ ಸಿಎಂ ಅನ್ಲಾಕ್ ಆದೇಶ ಹೊರಡಿಸಿದ್ದಾರೆ.
ಆದ್ರೆ, ಕೊರೊನಾ ಹೇಗೆ ಕಟ್ಟಿ ಹಾಕೋದು ಅನ್ನೋದು ಮುಂದಿರೋ ಸವಾಲು. ಕೊರೊನಾ ಈಗ್ಲೇ ಕಂಟ್ರೋಲ್ಗೆ ಸಿಗ್ತಿಲ್ಲ. ಇನ್ನು ಫುಲ್ ಫ್ರೀ ಬಿಟ್ಟು, ಜನರು ಬೇಕಾಬಿಟ್ಟಿ ಓಡಾಡಿದ್ರೆ ಮುಂದೇನ್ ಗತಿ ಆಗುತ್ತೋ ಆ ದೇವರೇ ಬಲ್ಲ. ಯಾವುದಕ್ಕೂ ಜೀವ.. ಜೀವನದ ಬಗ್ಗೆ ತುಂಬಾ ಎಚ್ಚರ ವಹಿಸಿ. ಹೆಚ್ಚು ಕಮ್ಮಿಯಾದ್ರೆ ಆ ದೇವರು ಬಂದ್ರೂ ಕಾಪಾಡೋದು ಕಷ್ಟ.
Published On - 6:55 am, Wed, 22 July 20