ಮೆಕ್ಕೆಜೋಳ ಬೆಳೆಯುವವರಿಗೆ ಮಾತ್ರ ಪರಿಹಾರ, ಭಕ್ತ ಬೆಳೆಯುವವರಿಗ್ಯಾಕಿಲ್ಲ?

|

Updated on: Jun 01, 2020 | 3:01 PM

ದಾವಣಗೆರೆ: ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ದಾವಣಗೆರೆ ಕೂಡಾ ಒಂದು. ಇಲ್ಲಿ 1.50 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಾರೆ. ಎಕರೆಗೆ ಅಂದಾಜು ಮೂವತ್ತು ಕ್ವಿಂಟಾಲ್ ಅಂದ್ರೆ ಪ್ರತಿ ಬೆಳೆಗೆ ಅಂದಾಜು 52 ಸಾವಿರ ಟನ್ ಭತ್ತ ಬೆಳೆಯಲಾಗುತ್ತಿದೆ. ವರ್ಷಕ್ಕೆ ಒಂದು ಲಕ್ಷ ಟನ್ ಕೇವಲ ದಾವಣಣಗೆರೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಆದ್ರೆ ಈಗ ಭತ್ತಕ್ಕೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ 1830 ರೂಪಾಯಿ ದರ ನಿಗದಿ ಮಾಡಿ […]

ಮೆಕ್ಕೆಜೋಳ ಬೆಳೆಯುವವರಿಗೆ ಮಾತ್ರ ಪರಿಹಾರ, ಭಕ್ತ ಬೆಳೆಯುವವರಿಗ್ಯಾಕಿಲ್ಲ?
Follow us on

ದಾವಣಗೆರೆ: ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ದಾವಣಗೆರೆ ಕೂಡಾ ಒಂದು. ಇಲ್ಲಿ 1.50 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಾರೆ. ಎಕರೆಗೆ ಅಂದಾಜು ಮೂವತ್ತು ಕ್ವಿಂಟಾಲ್ ಅಂದ್ರೆ ಪ್ರತಿ ಬೆಳೆಗೆ ಅಂದಾಜು 52 ಸಾವಿರ ಟನ್ ಭತ್ತ ಬೆಳೆಯಲಾಗುತ್ತಿದೆ. ವರ್ಷಕ್ಕೆ ಒಂದು ಲಕ್ಷ ಟನ್ ಕೇವಲ ದಾವಣಣಗೆರೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಆದ್ರೆ ಈಗ ಭತ್ತಕ್ಕೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ 1830 ರೂಪಾಯಿ ದರ ನಿಗದಿ ಮಾಡಿ ಖರೀದಿ ಕೇಂದ್ರ ಆರಂಭಿಸಿದೆ.

ಆದ್ರೆ ಅಲ್ಲಿ ಹತ್ತಾರು ನಿಮಯಗಳಿವೆ. ಫ್ರೂಟ್ ಐಡಿ ತರಬೇಕು. ಇದನ್ನ ಕೃಷಿ ಇಲಾಖೆ ಕೊಡುತ್ತದೆ. ಅದರಲ್ಲಿ ನೀವು ಬೆಳೆದ ಬೆಳೆ ಭತ್ತ ಅಂತಾ ದಾಖಲಾಗಿರಬೇಕು. ಆಧಾರ ಕಾರ್ಡ ನಂಬರ್ ಲಿಂಕ್ ಮಾಡಿರಬೇಕು. ಇದೇ ಕಾರಣಕ್ಕೆ ದಾವಣಗೆರೆ ಖರೀದಿ ಕೇಂದ್ರಕ್ಕೆ ಕೇವಲ 17 ಜನ ರೈತರು ಭತ್ತ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಕೇವಲ ಐದು ಜನ ರೈತರು ಮಾತ್ರ ಮಾರಾಟ ಮಾಡಿದ್ದಾರೆ. ಒಬ್ಬ ರೈತನಿಂದ 40 ಕ್ವಿಂಟಾಲ್ ಮಾತ್ರ ಖರೀದಿಯಾಗಿದೆ. ಓಪನ್ ಮಾರುಕಟ್ಟೆಯಲ್ಲಿ 1200 ರಿಂದ 1400 ವರೆಗೆ ದರಕುಸಿದೆ.

ಹತ್ತು ವರ್ಷದಲ್ಲಿ ಇದೆ ಮೊದಲ ಬಾರಿಗೆ ಇಷ್ಟು ಕಡಿಮೆ ದರ ಇದೆ. ಅಲ್ಲದೆ ದಾವಣಗೆರೆಯಲ್ಲಿ ಬೆಳೆಯುವುದು ಸೋನಾ ಮಸೂರಿ ಭತ್ತ. ಕನಿಷ್ಟ 2000 ರೂಪಾಯಿ ಕ್ವಿಂಟಾಲ್ ದರ ಇರಬೇಕಿತ್ತು. ಆದ್ರೆ ಈ ಸಲ ಬೆಳೆಗಾರ ಕಣ್ಣೀರು ಹಾಕುವಂತಾಗಿದೆ. ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ರೈತನಿಗೆ ಮೂರು ಸಾವಿರ ರೂಪಾಯಿ ಪರಿಹಾರ ನೀಡುತ್ತಿದೆ.

ಆದ್ರೆ ಭತ್ತದ ಬೆಳೆಗಾರಿಗೆ ಮಾತ್ರ ಯಾವುದೇ ರೀತಿಯ ಪರಿಹಾರನೀಡಿಲ್ಲ. ಮೇಲಾಗಿ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಸಕಾಲಕ್ಕೆ ರೈತರ ಸಂಕಷ್ಟಕ್ಕೆ ಸ್ಪಂಧಿಸಬೇಕಾಗಿದ್ದು ಸರ್ಕಾರದ ಆಧ್ಯತೆ ಆಗಬೇಕು. ಲಾಕ್​ಡೌನ್​ನಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಈಗ ಮಳೆ ಬೇರೆ ಆರಂಭವಾಗಿದೆ. ಭತ್ತ ಮನೆಯಲ್ಲೇ ಇಟ್ಟು ಕೊಳ್ಳುವಷ್ಟು ಸ್ಥಿತಿವಂತ ರೈತರಿಲ್ಲ. ಇದೇ ಕಾರಣಕ್ಕೆ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘದ ಹುಚ್ಚವನಳ್ಳಿ ಮಂಜುನಾಥ ನೇತ್ರತ್ವದಲ್ಲಿ ಹೋರಾಟ ಶುರುವಾಗಿದೆ. ಕಿತ್ತಾಟದಲ್ಲಿ ತೊಡಗಿರುವ ಜನ ಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಸ್ಪಂಧಿಸುವರೇ ಎಂಬುದು ಸದ್ಯದ ಪ್ರಶ್ನೆ.

Published On - 2:26 pm, Mon, 1 June 20