ರಾಜಧಾನಿ ಗಲಾಟೆಗೆ Kerala Link, ಹಿಂಸಾಚಾರಕ್ಕೆ ವಾರದ ಹಿಂದೆಯೇ ಸ್ಕೆಚ್‌?

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಮೂಲಗಳ ಪ್ರಕಾರ ಈ ರೀತಿ ಗಲಾಟೆ ಮಾಡಲು ಒಂದು ವಾರದ ಹಿಂದೆಯೇ ಸ್ಕೆಚ್‌ ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಹೌದು ಮಧ್ಯರಾತ್ರಿ ಬೆಂಗಳೂರಿನ ಎರಡು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಒಂದು ವಾರದ ಹಿಂದೆಯೇ ಮಹಾ ಪ್ಲಾನ್ ನಡೆದಿತ್ತು ಎಂದು ತಿಳಿದು ಬಂದಿದೆ. ಕೇರಳದಿಂದ ಬಂದ ನೂರಾರು ಜನರು ಈ ಗಲಾಟೆಯಲ್ಲಿ ಭಾಗಿಯಾಗಿರುವ […]

ರಾಜಧಾನಿ ಗಲಾಟೆಗೆ Kerala Link, ಹಿಂಸಾಚಾರಕ್ಕೆ ವಾರದ ಹಿಂದೆಯೇ ಸ್ಕೆಚ್‌?

Updated on: Aug 12, 2020 | 3:55 PM

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಮೂಲಗಳ ಪ್ರಕಾರ ಈ ರೀತಿ ಗಲಾಟೆ ಮಾಡಲು ಒಂದು ವಾರದ ಹಿಂದೆಯೇ ಸ್ಕೆಚ್‌ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.

ಹೌದು ಮಧ್ಯರಾತ್ರಿ ಬೆಂಗಳೂರಿನ ಎರಡು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಒಂದು ವಾರದ ಹಿಂದೆಯೇ ಮಹಾ ಪ್ಲಾನ್ ನಡೆದಿತ್ತು ಎಂದು ತಿಳಿದು ಬಂದಿದೆ. ಕೇರಳದಿಂದ ಬಂದ ನೂರಾರು ಜನರು ಈ ಗಲಾಟೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಬೆಂಗಳೂರಿನ ಪಾದರಾಯನಪುರ ಮತ್ತು ಕೇರಳದ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈಗ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗ್ತಿದೆ. ಪೊಲೀಸರ ಈ ಅನುಮಾನಕ್ಕೆ ಕಾರಣ ರಾತ್ರಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ 40 ವರ್ಷದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗದಿರೋದು.

Published On - 2:44 pm, Wed, 12 August 20