ಕಾವೇರಿ ನದಿ ನೀರಿಗಾಗಿ ಮುಂದುವರಿದ ಹೋರಾಟ, ಇಂದು ಮಂಡ್ಯ ಬಂದ್, ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸಿದ ಪ್ರತಿಭಟನಾಕಾರರು

|

Updated on: Sep 23, 2023 | 10:39 AM

ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಬಂದ್ ಜಾರಿಯಲ್ಲಿರುತ್ತದೆ. ಸಮಿತಿಯ ಸದಸ್ಯರು ನಗರದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿರುವದನ್ನು ಇಲ್ಲಿ ನೋಡಬಹುದು. ಎಂದಿನಂತೆ ಅಂಗಡಿ ಓಪನ್ ಮಾಡಿ ವ್ಯಾಪಾರ ಮಾಡುತ್ತಿದ್ದ ಬೇಕರಿಯೊಂದರ ಮಾಲೀಕನಿಗೆ ಪ್ರತಿಭಟನೆನಕಾರರು ನೀನು ಮಂಡ್ಯದೋನು ಅಲ್ವೇನಯ್ಯ ಅಂತ ಗದರಿ ಬಾಗಿಲು ಹಾಕಿಸುತ್ತಿದ್ದಾರೆ.

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಸೂಚನೆಯನ್ನು ಪಾಲಿಸುವಂತೆ ಶುಕ್ರವಾರ ಸುಪ್ರೀಮ್ ಕೋರ್ಟ್ (Supreme Court) ಆದೇಶ ನೀಡಿದ್ದು ಕನ್ನಡಿಗರಿಗೆ ಅದರಲ್ಲೂ ವಿಶೇಷವಾಗಿ ಮೈಸೂರು, ಮಂಡ್ಯ ಮತ್ತು ಬೆಂಗಳೂರು ನಗರ ಜಿಲ್ಲೆಗಳ ನಿವಾಸಿಗಳಿಗೆ ಬರಸಿಡಿಲೆರಗಿದಂತಾಗಿದೆ. ಪ್ರಾಧಿಕಾರ ಸೂಚನೆ ಮತ್ತು ಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ (Raita Hitha Rakshana Samiti) ಇಂದು ಮಂಡ್ಯ ಬಂದ್ ಗೆ (Mandya Bandh) ಕರೆ ನೀಡಿದೆ. ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಬಂದ್ ಜಾರಿಯಲ್ಲಿರುತ್ತದೆ. ಸಮಿತಿಯ ಸದಸ್ಯರು ನಗರದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿರುವದನ್ನು ಇಲ್ಲಿ ನೋಡಬಹುದು. ಎಂದಿನಂತೆ ಅಂಗಡಿ ಓಪನ್ ಮಾಡಿ ವ್ಯಾಪಾರ ಮಾಡುತ್ತಿದ್ದ ಬೇಕರಿಯೊಂದರ ಮಾಲೀಕನಿಗೆ ಪ್ರತಿಭಟನೆನಕಾರರು ನೀನು ಮಂಡ್ಯದೋನು ಅಲ್ವೇನಯ್ಯ ಅಂತ ಗದರಿ ಬಾಗಿಲು ಹಾಕಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ