ಬೆಳಗಾವಿ: ಮಹಾರಾಷ್ಟ್ರದಿಂದ ಆಗಮಿಸಿ ಗೋಕಾಕ್‌ನ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದ 30 ವರ್ಷದ ಮಹಿಳೆ ಪರಾರಿಯಾಗಿರುವ ಘಟನೆ ನಡೆದಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಆತಂಕ ಹೆಚ್ಚಾಗಿದೆ.
ಮಹಾರಾಷ್ಟ್ರದ ನೂಲ್ ಗ್ರಾಮದಿಂದ ಗೋಕಾಕ್ ತಾಲೂಕಿನ ಪಂಜಾನಟ್ಟಿ ಗ್ರಾಮಕ್ಕೆ ಮಹಿಳೆ ಬಂದಿದ್ದರು.ಮಹಾರಾಷ್ಟ್ರದಿಂದ ಆಗಮಿಸಿದ್ದಳೆಂಬ ಕಾರಣಕ್ಕೆ ಗ್ರಾಮ ಪ್ರವೇಶಕ್ಕೆ ಪಂಜಾನಟ್ಟಿ ಗ್ರಾಮಸ್ಥರು ವಿರೋಧಿಸಿದ್ದರು. ಬಳಿಕ ಮಹಿಳೆಯನ್ನು ಗೋಕಾಕ್‌ನ ಆಶ್ರಯ ಕಾಲೋನಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಿನ್ನೆ ಕ್ವಾರಂಟೈನ್ ಕೇಂದ್ರದಿಂದ ಮಹಿಳೆ ಪರಾರಿಯಾಗಿದ್ದಾರೆ.
ಮೇಲ್ನೋಟಕ್ಕೆ ಪೆರೋಲ್ ಮೇಲೆ ಜೈಲಿನಿಂದ ಬಂದಿದ್ದ ಪತಿ ಜೊತೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಗೋಕಾಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದೊಮ್ಮೆ ಮಹಿಳೆಗೆ ಕೊರೊನಾ ದೃಢಪಟ್ಟರೆ ಇತರರಿಗೂ ಹರಡುವ ಸಾಧ್ಯತೆ ಹೆಚ್ಚಾಗಿದೆ.
Published On - 12:58 pm, Sun, 24 May 20