ಬೆಂಗಳೂರು: ರಾಮಮಂದಿರದಲ್ಲಿ ಕೆಲಸ ಮಾಡುತ್ತಿದ್ದ 60 ವರ್ಷದ ವೃದ್ಧನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಜಾಜಿನಗರದ ರಾಮಮಂದಿರವನ್ನು ಸೀಲ್ಡೌನ್ ಮಾಡಲಾಗಿದೆ. 7 ದಿನಗಳ ಕಾಲ ದೇವಾಲಯವನ್ನು ಸೀಲ್ಡೌನ್ ಮಾಡಲಾಗಿದ್ದು, ಪುರೋಹಿತರು ಸೇರಿದಂತೆ ಒಟ್ಟು 10 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ರಾಮಮಂದಿರದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧ ವಾಸವಾಗಿದ್ದ. ಆತನಿಗೆ ನಿನ್ನೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಈಗಾಗಲೇ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 6 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಈಗಾಗಲೇ ದೇವಾಲಯದ ಸುತ್ತಲೂ ಬಿಬಿಎಂಪಿ ಸಿಬ್ಬಂದಿ ಕೆಮಿಕಲ್ ಸ್ಪ್ರೇ ಮಾಡಿ, ದೇಗುಲದ ಎದುರಿಗಿದ್ದ ಅಂಗಡಿಗಳನ್ನು ಕ್ಲೋಸ್ ಮಾಡಿಸಿದ್ದಾರೆ. ಅಲ್ಲದೆ ಸೋಂಕಿತ ವ್ಯಕ್ತಿ ರಾಮಮಂದಿರದ ದ್ವಾರದಲ್ಲಿ ಹೂವಿನ ವ್ಯಾಪಾರ ಮಾಡ್ತಿದ್ರಂತೆ. ಹೀಗಾಗಿ ಸೋಂಕಿತನ ಬಳಿ ಹೂವು ಖರೀದಿ ಮಾಡಿದವರಿಗೆ ಆತಂಕ ಶುರುವಾಗಿದೆ.