
ಬೆಂಗಳೂರು: ಪಾದರಾಯನಪುರದಲ್ಲಿ ಮತ್ತೆ ಕಿಲ್ಲರ್ ಸೋಂಕಿನ ಬಾಂಬ್ ಸ್ಫೋಟಗೊಂಡಿದೆ. ಪಾದರಾಯನಪುರದಲ್ಲಿ ಮತ್ತೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಱಂಡಮ್ ಟೆಸ್ಟ್ ವೇಳೆ 29 ವರ್ಷದ ವ್ಯಕ್ತಿಗೆ ಸೋಂಕು ಇರುವುದು ಗೊತ್ತಾಗಿದೆ.
7 ನೇ ತಾರೀಖಿ ಒಟ್ಟು 26 ಜನರಿಗೆ ಱಂಡಮ್ ಟೆಸ್ಟ್ ನಡೆಸಲಾಗಿತ್ತು. ಇದರ ವರದಿ ಬಂದಿದ್ದು, ಪಾದರಾಯನಪುರದ 11 ನೇ ಕ್ರಾಸ್ನ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಕಂಟೈನ್ ಮೆಂಟ್ ಜೋನ್ ಪಕ್ಕದ ರಸ್ತೆಗಳನ್ನೂ ಕೂಡ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ಗಳನ್ನ ಹಾಕಿ ಸಂಚಾರ ಕ್ಲೋಸ್ ಮಾಡಿದ್ದಾರೆ.