ದಾಖಲೆ ಇಲ್ಲದ 2 ಕೋಟಿ ನಗದು ಚುನಾವಣಾಧಿಕಾರಿಗಳ ವಶಕ್ಕೆ

|

Updated on: Nov 27, 2019 | 9:44 AM

ಮೈಸೂರು: ಮನುಗನಹಳ್ಳಿ ಬಳಿಯ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂಪಾಯಿಯನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಎಂಡಿಸಿಸಿ ಬ್ಯಾಂಕ್​ನ ಇಬ್ಬರು ನೌಕರರು ಬೊಲೆರೋ ವಾಹನದಲ್ಲಿ 3 ಚೀಲದಲ್ಲಿ 2ಕೋಟಿ ಹಣ ಸಾಗಾಟ ಮಾಡುತ್ತಿದ್ದರು. ಚುನಾವಣಾಧಿಕಾರಿಗಳ ವಿಚಾರಣೆ ವೇಳೆ ಪಿರಿಯಾಪಟ್ಟಣ ಬ್ಯಾಂಕ್​ಗೆ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದ್ರೆ, ಹಣ ಸಾಗಿಸುವ ಮುನ್ನ ಬ್ಯಾಂಕ್ ಚುನಾವಣಾಧಿಕಾರಿಗಳ ಅನುಮತಿ ಪಡೆದಿಲ್ಲ. ಅಲ್ಲದೆ, ಗನ್ ಮನ್ ಇಲ್ಲದೆ ಅಪಾರ ಪ್ರಮಾಣದ ಹಣ ಸಾಗಾಟ ಮಾಡಿದ್ದಾರೆ. ಸೂಕ್ತ ದಾಖಲೆ ನೀಡುವಂತೆ ನೋಟಿಸ್: ಬ್ಯಾಂಕ್​ಗೆ […]

ದಾಖಲೆ ಇಲ್ಲದ 2 ಕೋಟಿ ನಗದು ಚುನಾವಣಾಧಿಕಾರಿಗಳ ವಶಕ್ಕೆ
Follow us on

ಮೈಸೂರು: ಮನುಗನಹಳ್ಳಿ ಬಳಿಯ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂಪಾಯಿಯನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಎಂಡಿಸಿಸಿ ಬ್ಯಾಂಕ್​ನ ಇಬ್ಬರು ನೌಕರರು ಬೊಲೆರೋ ವಾಹನದಲ್ಲಿ 3 ಚೀಲದಲ್ಲಿ 2ಕೋಟಿ ಹಣ ಸಾಗಾಟ ಮಾಡುತ್ತಿದ್ದರು. ಚುನಾವಣಾಧಿಕಾರಿಗಳ ವಿಚಾರಣೆ ವೇಳೆ ಪಿರಿಯಾಪಟ್ಟಣ ಬ್ಯಾಂಕ್​ಗೆ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದ್ರೆ, ಹಣ ಸಾಗಿಸುವ ಮುನ್ನ ಬ್ಯಾಂಕ್ ಚುನಾವಣಾಧಿಕಾರಿಗಳ ಅನುಮತಿ ಪಡೆದಿಲ್ಲ. ಅಲ್ಲದೆ, ಗನ್ ಮನ್ ಇಲ್ಲದೆ ಅಪಾರ ಪ್ರಮಾಣದ ಹಣ ಸಾಗಾಟ ಮಾಡಿದ್ದಾರೆ.

ಸೂಕ್ತ ದಾಖಲೆ ನೀಡುವಂತೆ ನೋಟಿಸ್:
ಬ್ಯಾಂಕ್​ಗೆ ಸೇರಿದ ಹಣ ಚೀಲದಲ್ಲಿ ಸಾಗಿಸುವ ಅವಶ್ಯಕತೆ ಏನು ಎಂಬ ಬಗ್ಗೆ ಚುನಾವಣಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಸೂಕ್ತ ದಾಖಲೆ ಒದಗಿಸುವಂತೆ ಎಂಡಿಸಿಸಿ ಬ್ಯಾಂಕ್​ನ ನೌಕರರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

Published On - 9:39 am, Wed, 27 November 19