ಸೀಲ್​ಡೌನ್ ಮುಕ್ತವಾಯ್ತು ಶಿವಾಜಿನಗರ, KR ಮಾರುಕಟ್ಟೆ ಖಾಲಿ ಖಾಲಿ..

|

Updated on: Jun 20, 2020 | 9:38 AM

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್ ಆಗಿದ್ದ ಶಿವಾಜಿನಗರ ಸಹಜ ಜೀವನದತ್ತ ಮರಳುತ್ತಿದೆ. ಜನರ ಓಡಾಟ ಎಲ್ಲವೂ ಸುಧಾರಿಸುತ್ತಿದೆ. ಹಲವು ದಿನಗಳಿಂದ ಶಿವಾಜಿನಗರದ ಚಾಂದಿನಿ ಚೌಕ್ ಸೀಲ್​ಡೌನ್ ಅಗಿತ್ತು. ಈಗ ಕೊರೊನಾ ಕೇಸ್ ಕಡಿಮೆಯಾದ ಹಾಗೂ ಸೀಲ್​ಡೌನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಟೋ, ಬೈಕ್, ಕಾರು ಸೇರಿದಂತೆ ಹಿಂದಿನಂತೆ ಜನ ಜೀವನ ಸಂಚಾರ ಶುರುವಾಗಿದೆ. ಇತಿಹಾಸ ಪ್ರಸಿದ್ಧ ರಸಲ್ ಮಾರ್ಕೆಟ್ ಕೂಡ ಓಪನ್ ಆಗಿದೆ. ಸದಾ ಜನರಿಂದ ತುಂಬಿರುತಿದ್ದ ರಸಲ್ ಮಾರ್ಕೆಟ್ ಖಾಲಿ ಖಾಲಿಯಾಗಿದೆ. ಶಿವಾಜಿನಗರ ಜನರು ಸಾಮಾಜಿಕ ಅಂತರ […]

ಸೀಲ್​ಡೌನ್ ಮುಕ್ತವಾಯ್ತು ಶಿವಾಜಿನಗರ, KR ಮಾರುಕಟ್ಟೆ ಖಾಲಿ ಖಾಲಿ..
Follow us on

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್ ಆಗಿದ್ದ ಶಿವಾಜಿನಗರ ಸಹಜ ಜೀವನದತ್ತ ಮರಳುತ್ತಿದೆ. ಜನರ ಓಡಾಟ ಎಲ್ಲವೂ ಸುಧಾರಿಸುತ್ತಿದೆ. ಹಲವು ದಿನಗಳಿಂದ ಶಿವಾಜಿನಗರದ ಚಾಂದಿನಿ ಚೌಕ್ ಸೀಲ್​ಡೌನ್ ಅಗಿತ್ತು.

ಈಗ ಕೊರೊನಾ ಕೇಸ್ ಕಡಿಮೆಯಾದ ಹಾಗೂ ಸೀಲ್​ಡೌನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಟೋ, ಬೈಕ್, ಕಾರು ಸೇರಿದಂತೆ ಹಿಂದಿನಂತೆ ಜನ ಜೀವನ ಸಂಚಾರ ಶುರುವಾಗಿದೆ. ಇತಿಹಾಸ ಪ್ರಸಿದ್ಧ ರಸಲ್ ಮಾರ್ಕೆಟ್ ಕೂಡ ಓಪನ್ ಆಗಿದೆ. ಸದಾ ಜನರಿಂದ ತುಂಬಿರುತಿದ್ದ ರಸಲ್ ಮಾರ್ಕೆಟ್ ಖಾಲಿ ಖಾಲಿಯಾಗಿದೆ. ಶಿವಾಜಿನಗರ ಜನರು ಸಾಮಾಜಿಕ ಅಂತರ ಮರೆತು ಓಡಾಡುತ್ತಿದ್ದಾರೆ.

ಜನರಿಂದ ಗಿಜಿಗುಡುತ್ತಿದ್ದ ಮಾರ್ಕೆಟ್ ಖಾಲಿ ಖಾಲಿ
ಕೊರೊನಾ ಅಟ್ಟಹಾಸಕ್ಕೆ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ. ಕೆ.ಆರ್‌. ಮಾರುಕಟ್ಟೆಯ ಹೂವಿನ ಅಂಗಡಿ, ತರಕಾರಿ ಮಳಿಗೆಗಳು ಖಾಲಿ ಖಾಲಿಯಾಗಿವೆ. ನಿನ್ನೆಯಿಂದ ಕೆ.ಆರ್.ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡೋಕೆ ಅನುಮತಿ ಸಿಕ್ಕಿದೆ. ಆದ್ರೂ ಸಹ ಹೂ, ತರಕಾರಿ ಕೊಳ್ಳೋಕೆ ಗ್ರಾಹಕರು ಮಾರುಕಟ್ಟೆ ಕಡೆ ಮುಖ ಮಾಡಿಲ್ಲ.

ಸಾವಿರಾರು ಜನರಿಂದ ಗಿಜಿಗುಡುಗುತ್ತಿದ್ದ ಸಿಟಿ ಮಾರ್ಕೆಟ್ ಗ್ರಾಹಕರಿಲ್ಲದೇ ಖಾಲಿ ಖಾಲಿಯಾಗಿದೆ. ಮೊದಲಿನಂತೆ ವ್ಯಾಪಾರ ಆಗ್ತಿಲ್ಲ ಅಂತ ವ್ಯಾಪಾರಿಗಳು ತಮ್ಮ ಅಳಲನ್ನ ವ್ಯಕ್ತಪಡಿಸಿದ್ದಾರೆ.