ಧಾರವಾಡ: ಜಗತ್ತಿನಾದ್ಯಂತ ಇಂದು ಲವರ್ಸ್ಗೆ ಸ್ಪೆಷಲ್ ದಿನ. ಹೌದು, ಇವತ್ತು ವ್ಯಾಲೆಂಟೈನ್ಸ್ ಡೇ. ವರ್ಷದ ಯಾವುದೇ ದಿನ ಬಂದರೆ ಅಷ್ಟು ಕೇರ್ ಮಾಡದ ಪ್ರೇಮಿಗಳು ಇವತ್ತಿನ ದಿನವನ್ನು ಮಾತ್ರ ಮಿಸ್ ಮಾಡೋದೇ ಇಲ್ಲ. ಸದಾ ತಮ್ಮ ಪ್ರೇಯಸಿ ಅಥವಾ ಪ್ರಿಯತಮನ ಗುಂಗಿನಲ್ಲಿರುವ ಲವ ಬರ್ಡ್ಸ್ಗಳು ಇಂದು ಏಕಾಂತದಲ್ಲಿ ಇರಲು ಬಯಸುತ್ತಾರೆ. ಈ ನಡುವೆ, ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ (ಅದು Actually ಕರಡಿಗೆ ಬಿಟ್ಟ ಹಾಗೆ ಅಂತಾ but ಈಗ ಕರಡಿ ಆಗಿಬಿಟ್ಟಿದೆ) ಕೆಲ ಸಂಘಟನೆಗಳಿಗೂ ಎಂಟ್ರಿ ಕೊಟ್ಟು ಪಾಪ ಇವರಿಗೆ ಡಿಸ್ಟರ್ಬ್ ಮಾಡ್ತಾರೆ.
ಅಂತೆಯೇ, ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಶ್ರೀರಾಮ ಸೇನೆಯಿಂದ ವಿರೋಧ ವ್ಯಕ್ತವಾಗಿದೆ. ಹಾಗಾಗಿ, ಇಂದು ನಗರದ ಹಲವು ಪಾರ್ಕ್ಗಳಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಭೇಟಿಕೊಟ್ಟರು. ಕೆ.ಸಿ.ಪಾರ್ಕ್, ಸಾಧನಕೆರೆ ಪಾರ್ಕ್ ಮೇಲೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ದಾಳಿ ನಡೆಸಿದರು.
ಪಾರ್ಕ್ನಲ್ಲಿ ಆರಾಮಾಗಿ ಎಂಜಾಯ್ ಮಾಡ್ತಿದ್ದ ಪ್ರೇಮಿಗಳಿಗೆ ಕರಪತ್ರ ನೀಡಿ ಕಾರ್ಯಕರ್ತರು ಪ್ರೇಮಿಗಳ ದಿನ ಆಚರಿಸದಂತೆ ಮನವಿ ಮಾಡಿದರು. ದಯವಿಟ್ಟು ಪ್ರೇಮಿಗಳ ದಿನ ಆಚರಿಸಬೇಡಿ ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: Siddaramaiah ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ -ಶಾಸಕ ರಾಘವೇಂದ್ರ ಹಿಟ್ನಾಳ್ ಖಡಕ್ ಬಾತ್