ಹುಬ್ಬಳ್ಳಿ: ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆಗಳು ಶುರು ಆಗಲಿವೆ. ಹೀಗಾಗಿ ಶಿಕ್ಷಣ ಇಲಾಖೆ ಒಂದು ಮಟ್ಟಿಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದ ಪಕ್ಕದ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ನಿಗದಿ ಮಾಡಲಾಗಿದೆ. ನಿನ್ನೆಯಷ್ಟೇ ಈ ಮಠ ಸೀಲ್‌ಡೌನ್ ಆಗಿದೆ. ಹೀಗಾಗಿ ಕಂಟೈನ್ಮೆಂಟ್ ಪ್ರದೇಶದ ಪಕ್ಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರ ನಿಗದಿಯಾಗಿರುವುದು ಗೊಂದಲಕ್ಕೆ ಕಾರಣವಾಗಿದೆ.
ಮೂರು ಸಾವಿರ ಮಠದ ಹತ್ತಿರದ ಬಡಾವಣೆಯ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಮಠದ ಸುತ್ತಾ ಸೀಲ್‌ಡೌನ್ ಮಾಡಲಾಗಿತ್ತು. ಆದ್ರೆ ನಾಳೆ ಮಠದ ಪಕ್ಕದ ಶಾಲೆಯಲ್ಲಿ 372 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹೀಗಾಗಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಇನ್ನು ಧಾರವಾಡದ ಮಳಮಡ್ಡಿ ಬಡಾವಣೆಯಲ್ಲಿರೋ ಕೆ.ಇ.ಬೋರ್ಡ್ ಶಾಲೆಯ ಪರೀಕ್ಷಾ ಕೇಂದ್ರದ ಪಕ್ಕದ ಗೋಪಾಲಪುರ ಬಡಾವಣೆ ಸೀಲ್‌ಡೌನ್ ಆಗಿದೆ. ಇಲ್ಲೂ ಅದೇ ಕಥೆ. ಇಲ್ಲಿ ಸುಮಾರು 336 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶಿಕ್ಷಕಿಯೊಬ್ಬರಿಗೆ ಕೊರೊನಾ ಬಂದಿದ್ದರಿಂದ ಸೀಲ್‌ಡೌನ್ ಆಗಿತ್ತು.
ಮೂರು ಸಾವಿರ ಮಠದ ಶಾಲೆಗೆ ಪೊಲೀಸರ ಆಗಮನ
ಟಿವಿ9ನಲ್ಲಿ ಈ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಮೂರು ಸಾವಿರ ಮಠದ ಶಾಲೆಗೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಸೀಲ್‌ಡೌನ್ ಪ್ರದೇಶ ಪಕ್ಕದಲ್ಲೇ SSLC ಎಕ್ಸಾಂ ಕೇಂದ್ರ ಇರುವುದರಿಂದ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ.
Published On - 10:43 am, Wed, 24 June 20