ಆನ್​ಲೈನ್​ ಟಿಕೆಟ್​ ಏಕಾಏಕಿ ರದ್ದು, ರಜೆಯ ಮೂಡ್​ನಲ್ಲಿದ್ದ ಪ್ರವಾಸಿಗರಿಗೆ ವಂಡರ್​ ‘ಲಾಸ್’

|

Updated on: Dec 13, 2020 | 4:01 PM

ಆಡಳಿತ ಮಂಡಳಿಯ ಇಂತಹ ಬೇಜವಾಬ್ದಾರಿ ನಡೆಯ ವಿರುದ್ಧ ಸಿಟ್ಟಾಗಿರುವ ಪ್ರವಾಸಿಗರು ಇದೀಗ ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ. ಆನ್​ಲೈನ್​ ಟಿಕೆಟ್​ ಬುಕ್​ ಮಾಡಿಸಿಕೊಂಡು ಹೀಗೆ ಮಾಡಿರುವುದು ಅನ್ಯಾಯ ಎಂದಿದ್ದಾರೆ.

ಆನ್​ಲೈನ್​ ಟಿಕೆಟ್​ ಏಕಾಏಕಿ ರದ್ದು, ರಜೆಯ ಮೂಡ್​ನಲ್ಲಿದ್ದ ಪ್ರವಾಸಿಗರಿಗೆ ವಂಡರ್​ ‘ಲಾಸ್’
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವಂಡರ್​ ಲಾ ಅಮ್ಯೂಸ್​​ಮೆಂಟ್ ಪಾರ್ಕ್​ ಇಂದು ಏಕಾಏಕಿ ಬಂದ್​ ಆಗಿರುವುದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ವಂಡರ್ ಲಾ ಅಮ್ಯೂಸ್​​ಮೆಂಟ್ ಪಾರ್ಕಿಗೆ ರಜೆಯ ಮಜಾ ಅನುಭವಿಸಲೆಂದು ದೂರದೂರಿನಿಂದ ಬಂದ ಪ್ರವಾಸಿಗರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು, ಮೈಸೂರು, ಮಡಿಕೇರಿ ಸೇರಿದಂತೆ ದೂರದ ಊರುಗಳಿಂದ ಬಂದಿರೋ ಪ್ರವಾಸಿಗರು ಆನ್​ಲೈನ್​ನಲ್ಲಿ ಮುಂಗಡ ಟಿಕೆಟ್​ ಕಾದಿರಿಸಿದ್ದರು. ಆದರೆ, ಮಧ್ಯರಾತ್ರಿಯ ವೇಳೆ ಏಕಾಏಕಿ ಟಿಕೆಟ್​ ರದ್ದು ಮಾಡಿದ ಆಡಳಿತ ಮಂಡಳಿ ಇಂದು ವಂಡರ್​ ಲಾ ಇರುವುದಿಲ್ಲ ಎಂದು ಹೇಳಿದೆ. ಒಟ್ಟು 12,000 ಮಂದಿಯಿಂದ ಬುಕಿಂಗ್ ಪಡೆದಿದ್ದ ವಂಡರ್​ ಲಾ ಈಗ 2,000 ಜನರನ್ನ ಮಾತ್ರ ಒಳಗೆ ಬಿಟ್ಟಿದೆ ಎನ್ನಲಾಗುತ್ತಿದೆ. ಉಳಿದ 10,000 ಮಂದಿಗೆ ಟಿಕೆಟ್​ಗೆ ಪಾವತಿಸಿದ್ದ ಹಣವನ್ನು ಸಹ ಹಿಂದಿರುಗಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಆಡಳಿತ ಮಂಡಳಿಯ ಇಂತಹ ಬೇಜವಾಬ್ದಾರಿ ನಡೆಯ ವಿರುದ್ಧ ಸಿಟ್ಟಾಗಿರುವ ಪ್ರವಾಸಿಗರು, ಹಣ ಹಿಂದಿರುಗಿಸುವಂತೆ ಪಟ್ಟುಹಿಡಿದಿದ್ದಾರೆ. ಆನ್​ಲೈನ್​ ಟಿಕೆಟ್​ ಬುಕ್​ ಮಾಡಿಸಿಕೊಂಡು ಹೀಗೆ ಮಾಡಿರುವುದು ಅನ್ಯಾಯ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೆಲಕಾಲ ಸ್ಥಳದಲ್ಲಿ ಬಿಗು ವಾತಾವರಣ ಸೃಷ್ಟಿಯಾಗಿದ್ದು ಪ್ರವಾಸಿಗರನ್ನು ನಿಯಂತ್ರಿಸಲು ಲಘು ಲಾಠಿ ಚಾರ್ಜ್​ ಮಾಡಲಾಗಿದೆ ಎಂದು ವರದಿಯಾಗಿದೆ.

ಹುಲಿಯನ್ನು ಅಟ್ಟಾಡಿಸಿಕೊಂಡು ಓಡಿಸಿದ ಆನೆ: ಪ್ರವಾಸಿಗರ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯ ಸೆರೆ

Published On - 12:50 pm, Sun, 13 December 20