ಡ್ರೈನೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು
ಆನೇಕಲ್: ಡ್ರೈನೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರ ಮೃತಪಟ್ಟಿರುವ ಘಟನೆ ಚಂದಾಪುರ ಬಳಿ ಪಲೋಮ ಟರ್ನಿಂಗ್ ಕಂಪನಿಯಲ್ಲಿ ನಡೆದಿದೆ. ಜೇಮ್ಸ್(26), ಆನಂದ(32) ಮೃತ ದುರ್ದೈವಿಗಳು. ಡ್ರೈನೇಜ್ ಸ್ವಚ್ಛಗೊಳಿಸಲು ಮುಂದಾದಾಗ ಮೂರು ಜನರು ಸೆಪ್ಟಿಕ್ ಟ್ಯಾಂಕಿನಲ್ಲಿ ಬಿದ್ದಿದ್ದಾರೆ. ಚಂದ್ರಶೇಖರ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆನಂದ ಹಾಗೂ ಜೇಮ್ಸ್ನನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಂಚನಹಳ್ಳಿಯ ಜೇಮ್ಸ್, ಹೊಸೂರಿನ ಆನಂದ ಮೃತಪಟ್ಟಿದ್ದಾರೆ.
ಆನೇಕಲ್: ಡ್ರೈನೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರ ಮೃತಪಟ್ಟಿರುವ ಘಟನೆ ಚಂದಾಪುರ ಬಳಿ ಪಲೋಮ ಟರ್ನಿಂಗ್ ಕಂಪನಿಯಲ್ಲಿ ನಡೆದಿದೆ. ಜೇಮ್ಸ್(26), ಆನಂದ(32) ಮೃತ ದುರ್ದೈವಿಗಳು.
ಡ್ರೈನೇಜ್ ಸ್ವಚ್ಛಗೊಳಿಸಲು ಮುಂದಾದಾಗ ಮೂರು ಜನರು ಸೆಪ್ಟಿಕ್ ಟ್ಯಾಂಕಿನಲ್ಲಿ ಬಿದ್ದಿದ್ದಾರೆ. ಚಂದ್ರಶೇಖರ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆನಂದ ಹಾಗೂ ಜೇಮ್ಸ್ನನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಂಚನಹಳ್ಳಿಯ ಜೇಮ್ಸ್, ಹೊಸೂರಿನ ಆನಂದ ಮೃತಪಟ್ಟಿದ್ದಾರೆ.
Published On - 7:12 pm, Mon, 8 June 20