ತಂದೆ ಗುಜರಿ ಅಂಗಡಿ ಮಾಲೀಕ.. ಮಗ ಡೆಲಿವರಿ ಬಾಯ್.. ಬೆಂಗಳೂರಿನ ಕಥೆ ಅಷ್ಟೇ!

ಬೆಂಗಳೂರು: ಮಂಗಮ್ಮನಪಾಳ್ಯದಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ನಿನ್ನೆ ಮಂಗಮ್ಮನಪಾಳ್ಯದಲ್ಲಿ ಪತ್ತೆಯಾದ P-654ನೇ ಸೋಂಕಿತನಿಂದ ಪತ್ನಿ, ಮಗನಿಗೆ ಸೋಂಕು ತಗುಲಿದೆ. P-654ನೇ ಸೋಂಕಿತನ ಮಗ ಆನ್‌ಲೈನ್ ಡೆಲಿವರಿ ಬಾಯ್. ಹೀಗಾಗಿ ಯುವಕ ಓಡಾಡಿದ್ದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ರೋಗಿ ನಂಬರ್ 654 ಗುಜರಿ ಅಂಗಡಿ ಮಾಲೀಕ. ಹಾಗೂ ಸೋಂಕಿತ ಮಗ ಡೆಲಿವರಿ ಬಾಯ್ ಆಗಿದ್ದರಿಂದ ಮಂಗಮ್ಮನಪಾಳ್ಯದಲ್ಲಿ ಟೆನ್ಷನ್ ಹೆಚ್ಚಾಗಿದೆ. ಸೋಂಕಿತ ಮಗ ಹೋಗಿರುವ ಮನೆಗಳನ್ನು ಪತ್ತೆ ಹಚ್ಚಬೇಕಾಗಿದೆ. ಆನ್​ಲೈನ್ ಡೆಲಿವರಿ ಮಾಡ್ತಿದ್ದ ಯುವಕನಿಂದ […]

ತಂದೆ ಗುಜರಿ ಅಂಗಡಿ ಮಾಲೀಕ.. ಮಗ ಡೆಲಿವರಿ ಬಾಯ್.. ಬೆಂಗಳೂರಿನ ಕಥೆ ಅಷ್ಟೇ!

Updated on: May 06, 2020 | 2:46 PM

ಬೆಂಗಳೂರು: ಮಂಗಮ್ಮನಪಾಳ್ಯದಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ನಿನ್ನೆ ಮಂಗಮ್ಮನಪಾಳ್ಯದಲ್ಲಿ ಪತ್ತೆಯಾದ P-654ನೇ ಸೋಂಕಿತನಿಂದ ಪತ್ನಿ, ಮಗನಿಗೆ ಸೋಂಕು ತಗುಲಿದೆ. P-654ನೇ ಸೋಂಕಿತನ ಮಗ ಆನ್‌ಲೈನ್ ಡೆಲಿವರಿ ಬಾಯ್. ಹೀಗಾಗಿ ಯುವಕ ಓಡಾಡಿದ್ದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ರೋಗಿ ನಂಬರ್ 654 ಗುಜರಿ ಅಂಗಡಿ ಮಾಲೀಕ. ಹಾಗೂ ಸೋಂಕಿತ ಮಗ ಡೆಲಿವರಿ ಬಾಯ್ ಆಗಿದ್ದರಿಂದ ಮಂಗಮ್ಮನಪಾಳ್ಯದಲ್ಲಿ ಟೆನ್ಷನ್ ಹೆಚ್ಚಾಗಿದೆ. ಸೋಂಕಿತ ಮಗ ಹೋಗಿರುವ ಮನೆಗಳನ್ನು ಪತ್ತೆ ಹಚ್ಚಬೇಕಾಗಿದೆ. ಆನ್​ಲೈನ್ ಡೆಲಿವರಿ ಮಾಡ್ತಿದ್ದ ಯುವಕನಿಂದ ಮತ್ತಷ್ಟು ಜನರಿಗೆ ಹರಡುತ್ತಾ ಸೋಂಕು ಎಂಬ ಶಂಕೆ ವ್ಯಕ್ತವಾಗಿದೆ.

Published On - 10:10 am, Wed, 6 May 20