ಬಿಜೆಪಿ ಮುಖಂಡನ ಕೆಸರಿನಾಟಕ್ಕೆ ಗೃಹಿಣಿ ಬಲಿ

ಧಾರವಾಡ: ಬಿಜೆಪಿ‌ ಮುಖಂಡನೊಬ್ಬನ ಎರಡನೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಸ್ವಾಗತ ಕಾಲೋನಿಯಲ್ಲಿ ನಡೆದಿದೆ. ಅನಿತಾ ರೇವಣಕರ್ ನೇಣಿಗೆ ಶರಣಾದ ಮಹಿಳೆ. ಹಣದಾಸೆಗೆ ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ ಅನಿತಾರನ್ನ ಮದುವೆಯಾಗಿ ನಂತರ ಆಕೆಗೆ ಕೈಕೊಟ್ಟಿದ್ದಕ್ಕೆ ಮಹಿಳೆ ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ ವಿಧವೆಯಾಗಿದ್ದ ಅನಿತಾಳಿಗೆ ಬಾಳು ಕೊಡುವ ನೆಪದಲ್ಲಿ ಆಕೆಯನ್ನು ವರಿಸಿದ್ದನಂತೆ. ತನ್ನ ಮೊದಲ ಪತ್ನಿ ಮತ್ತು ಮಕ್ಕಳು ಇನ್ನೂ ಬದುಕಿದ್ದರೂ ಬಸವರಾಜ್ ಅನಿತಾಳನ್ನು […]

ಬಿಜೆಪಿ ಮುಖಂಡನ ಕೆಸರಿನಾಟಕ್ಕೆ ಗೃಹಿಣಿ ಬಲಿ

Updated on: Sep 26, 2020 | 3:56 PM

ಧಾರವಾಡ: ಬಿಜೆಪಿ‌ ಮುಖಂಡನೊಬ್ಬನ ಎರಡನೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಸ್ವಾಗತ ಕಾಲೋನಿಯಲ್ಲಿ ನಡೆದಿದೆ. ಅನಿತಾ ರೇವಣಕರ್ ನೇಣಿಗೆ ಶರಣಾದ ಮಹಿಳೆ. ಹಣದಾಸೆಗೆ ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ ಅನಿತಾರನ್ನ ಮದುವೆಯಾಗಿ ನಂತರ ಆಕೆಗೆ ಕೈಕೊಟ್ಟಿದ್ದಕ್ಕೆ ಮಹಿಳೆ ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಬಿಜೆಪಿ‌ ಮುಖಂಡ ಬಸವರಾಜ್ ಕೆಲಗಾರ ವಿಧವೆಯಾಗಿದ್ದ ಅನಿತಾಳಿಗೆ ಬಾಳು ಕೊಡುವ ನೆಪದಲ್ಲಿ ಆಕೆಯನ್ನು ವರಿಸಿದ್ದನಂತೆ. ತನ್ನ ಮೊದಲ ಪತ್ನಿ ಮತ್ತು ಮಕ್ಕಳು ಇನ್ನೂ ಬದುಕಿದ್ದರೂ ಬಸವರಾಜ್ ಅನಿತಾಳನ್ನು ಮದುವೆಯಾಗಿದ್ದ. ಆದರೆ, ಆಕೆಯನ್ನು ಪ್ರೀತಿಸಿ ಮದುವೆಯಾದ ನಂತರ ಅನಿತಾಳಿಗೆ ಬಿಜೆಪಿ ಮುಖಂಡ ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಅನಿತಾ ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾದ ಬಳಿಕ ಆಕೆಯನ್ನು ತೊರೆದಿದ್ದಾನೆ ಎಂದು ಹೇಳಲಾಗಿದೆ.

ಇದಲ್ಲದೆ, ಅನಿತಾ ತನ್ನ ಹಣ ವಾಪಸ್​ ಕೇಳಿದಕ್ಕೆ ಬಸವರಾಜ್ ಆಕೆಯನ್ನು​ ಮನಬಂದಂತೆ ಥಳಿಸಿದ್ದನಂತೆ. ಕಳೆದ ಕೆಲವು ದಿನಗಳ ಹಿಂದೆ ನಡುರಸ್ತೆಯಲ್ಲಿ ಹೋಗುತ್ತಿದ್ದ ಅನಿತಾ ಹಾಗೂ ಆಕೆಯ ಮಕ್ಕಳ ಮೇಲೆ ಬಿಜೆಪಿ ಮುಖಂಡ ಬಸವರಾಜ್ ಕೆಲಗಾರ ಹಲ್ಲೆ ನಡೆಸಿದ್ದಾನೆ. ಇದರಿಂದ ಮನನೊಂದು ಅನಿತಾ ನೇಣಿಗೆ ಶರಣಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಇದೀಗ, ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ‌ ಬಸವರಾಜ್ ವಿರುದ್ಧ ದೂರು ದಾಖಲಾಗಿದೆ.

 

Published On - 3:52 pm, Sat, 26 September 20