ಚಿಕ್ಕಬಳ್ಳಾಪುರ: ಮನುಷ್ಯ ಮಾಡೋ ಒಂದು ತಪ್ಪು ನಿರ್ಧಾರದಿಂದ ಅನೇಕರು ದುಃಖ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ಗೌರಿ ಗಣೇಶ ಹಬ್ಬಕ್ಕೆ ಗಂಡ ತವರು ಮನೆಗೆ ಕಳಿಸಿಲ್ಲವೆಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಪ್ರಭಾಕರ್ ಬಡಾವಣೆಯಲ್ಲಿ ನಡೆದಿದೆ.
KSRTC ಡಿಪೋ ನೌಕರ ಸಂಗಮೇಶ್ ಪತ್ನಿ ನಿಂಗಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂತಾಮಣಿ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಂಗಮೇಶ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಸಂಗಮೇಶ್ ತಬ್ಬಿಬ್ಬಾಗಿದ್ದಾರೆ. ದುಡುಕಿ ತಗೊಂಡ ತಪ್ಪು ನಿರ್ಧಾರದಿಂದ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ.
Published On - 11:04 am, Wed, 26 August 20