‘ಖಜಾನೆಗೆ ನಾವು ಹಣ ತುಂಬುತ್ತೇವೆ, ಆದರೆ ಮೊದ್ಲು ಮದ್ಯ ನಿಷೇಧಿಸಿ’

|

Updated on: May 22, 2020 | 4:10 PM

ಧಾರವಾಡದ ಮಹಿಳಾ ಲೋಕ ರಾಜ್ಯ ಸರ್ಕಾರಕ್ಕೆ ಬೊಂಬಾಟ್ ಸರ್ಕಾರಿ ಸವಾಲ್ ಎಸೆದಿದೆ. ಇದುವರೆಗೂ ಯಾರೂ ಹೀಗೆ ಛಲ/ಹಠಕ್ಕೆ ಬಿದ್ದು ಸರ್ಕಾರಕ್ಕೆ ಸವಾಲ್ ಹಾಕಿರಲಿಲ್ಲ. ಏನಾಯಿತೆಂದ್ರೆ ಒಂದೂವರೆ ತಿಂಗಳ ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿತ್ತು. ಈ ವೇಳೆ ಲಕ್ಷಾಂತರ ‌ಮದ್ಯ ವ್ಯಸನಿಗಳು ಚಟದಿಂದ ಮುಕ್ತರಾಗಿ, ತಾವು ಕೂಡ ಮದ್ಯವಿಲ್ಲದೇ ಬದುಕಬಹುದು ಅನ್ನೋದನ್ನು ಮನಗಂಡಿದ್ದರು. ಇದರಿಂದಾಗಿ ಅವರವರ ಮನೆಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಿತ್ತು. ಈ ದಿನಗಳಲ್ಲಿ ಮಹಿಳೆಯರು, ಮಕ್ಕಳು ಹಿಂಸೆಯಲ್ಲದ ದಿನಗಳನ್ನು ಕಾಣಲು ಸಾಧ್ಯವಾಗಿತ್ತು. ಆದರೆ […]

‘ಖಜಾನೆಗೆ ನಾವು ಹಣ ತುಂಬುತ್ತೇವೆ, ಆದರೆ ಮೊದ್ಲು ಮದ್ಯ ನಿಷೇಧಿಸಿ’
Follow us on

ಧಾರವಾಡದ ಮಹಿಳಾ ಲೋಕ ರಾಜ್ಯ ಸರ್ಕಾರಕ್ಕೆ ಬೊಂಬಾಟ್ ಸರ್ಕಾರಿ ಸವಾಲ್ ಎಸೆದಿದೆ. ಇದುವರೆಗೂ ಯಾರೂ ಹೀಗೆ ಛಲ/ಹಠಕ್ಕೆ ಬಿದ್ದು ಸರ್ಕಾರಕ್ಕೆ ಸವಾಲ್ ಹಾಕಿರಲಿಲ್ಲ. ಏನಾಯಿತೆಂದ್ರೆ ಒಂದೂವರೆ ತಿಂಗಳ ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿತ್ತು. ಈ ವೇಳೆ ಲಕ್ಷಾಂತರ ‌ಮದ್ಯ ವ್ಯಸನಿಗಳು ಚಟದಿಂದ ಮುಕ್ತರಾಗಿ, ತಾವು ಕೂಡ ಮದ್ಯವಿಲ್ಲದೇ ಬದುಕಬಹುದು ಅನ್ನೋದನ್ನು ಮನಗಂಡಿದ್ದರು. ಇದರಿಂದಾಗಿ ಅವರವರ ಮನೆಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಿತ್ತು. ಈ ದಿನಗಳಲ್ಲಿ ಮಹಿಳೆಯರು, ಮಕ್ಕಳು ಹಿಂಸೆಯಲ್ಲದ ದಿನಗಳನ್ನು ಕಾಣಲು ಸಾಧ್ಯವಾಗಿತ್ತು.

ಆದರೆ ಸರಕಾರ ಮತ್ತೆ ಮದ್ಯ ಮಾರಾಟಕ್ಕೆ ಅನುಮತಿ ನೀಡುತ್ತಿದ್ದಂತೆಯೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಏಕೆಂದರೆ ಎಷ್ಟೋ ಮದ್ಯವ್ಯಸನಿಗಳು ಈ ದುಶ್ಚಟದಿಂದ ದೂರವಾಗಿ ನೆಮ್ಮದಿಯ ಬದುಕನ್ನು ಕಂಡುಕೊಂಡಾಗ ಮತ್ತೆ ಮದ್ಯ ಮಾರಾಟ ಆರಂಭವಾದರೆ ಮತ್ತೆ ಅವರು ದುಶ್ಚಟದ ದಾಸರಾಗುತ್ತಾರೆ ಅನ್ನೋದೇ ಈ ವಿರೋಧಕ್ಕೆ ಕಾರಣವಾಗಿತ್ತು. ಆದರೆ ಸರಕಾರ ಇದ್ಯಾವುದರ ಬಗ್ಗೆ ತಲೆನಕೆಡಿಸಿಕೊಳ್ಳದೇ ಮತ್ತೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿತು.

ಆದಾಯದ ನೆಪ ಹೇಳಿ ಹೀಗೆ ಮದ್ಯ ಮಾರಾಟ ಆರಂಭಿಸಿದ ಸರಕಾರದ ವಿರುದ್ಧ ಇದೀಗ ಧಾರವಾಡದಲ್ಲಿ ಹೊಸ ಬಗೆಯ ಅಭಿಯಾನ ಆರಂಭವಾಗಿದೆ. ಒಂದೆಡೆ ಉದ್ಯೋಗ ಇಲ್ಲ, ಕೂಲಿ ಇಲ್ಲ, ಕೈಯಲ್ಲಿ ಹಣ ಇಲ್ಲ. ಮದ್ಯ ವ್ಯಸನಿಗಳು ಮನೆಯಲ್ಲಿದ್ದ ಅಳಿದುಳಿದ ಸಾಮಾನುಗಳನ್ನೆಲ್ಲ ಮದ್ಯದ ಅಂಗಡಿಗಳಿಗೆ ಅಡವು ಇಡುತ್ತಿದ್ದಾರೆ.

ಆಹಾರ ಭದ್ರತೆಗಾಗಿ‌ ನೀಡಿದ ಆಹಾರ ಧಾನ್ಯ, ಜೀವನ ನಿರ್ವಹಣೆಗಾಗಿ ಜನ ಧನ್- ಕಾರ್ಮಿಕ ಕಾರ್ಡುಗಳಿಗೆ ಜಮಾ ಆದ ಹಣವೆಲ್ಲ ಮದ್ಯದ ಅಂಗಡಿಗಳ ಮೂಲಕ ಸರಕಾರದ ಖಜಾನೆ ಸೇರುತ್ತಿದೆ ಅಂತಾ ಆರೋಪಿಸಿರೋ ಧಾರವಾಡದ ಮದ್ಯ ನಿಷೇಧ ಆಂದೋಲನ ಸದಸ್ಯರು ಸರಕಾರಕ್ಕೆ ಮದ್ಯದ ಬದಲು ತಾವೇ ಆದಾಯವನ್ನು ತಂದು ಕೊಡುತ್ತೇವೆ ಅಂತಾ ವಿನೂತನವಗಾಗಿ ಪ್ರತಿಭಟನೆ ನಡೆಸಿದರು.

ಆದಾಯಕ್ಕಾಗಿ ಬಾಯ್ಬಿಡುತ್ತಿರುವ ಸರಕಾರಕ್ಕೆ ನಾವೇ ಹಣ ಕಟ್ಟುತ್ತೇವೆ. ಆದ್ರೆ..


ಧಾರವಾಡ ನಗರದ ಮುರಘಾಮಠ ಹತ್ತಿರದ‌ ಪೋಸ್ಟ್ ಆಫೀಸ್‌ ಬಳಿ ವಿನೂತನ ಪ್ರತಿಭಟನೆ ನಡೆಸಿದ ಸದಸ್ಯರು, ರಾಜ್ಯ ಸರಕಾರಕ್ಕೆ ಹಣ ತುಂಬೋ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. “ಆದಾಯಕ್ಕಾಗಿ ಹಾತೊರೆಯುತ್ತಿರುವ ಸರಕಾರದ ಖಜಾನೆಗೆ ನಾವು ಹಣ ತುಂಬುತ್ತೇವೆ. ಆದರೆ ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಮಾಡಿಕೊಡಿ” ಎಂದು ಸರಕಾರಕ್ಕೆ ಸಂದೇಶ ರವಾನೆ ಮಾಡಿದರು.

ಮಹಿಳೆಯರು ಮುಖ್ಯಮಂತ್ರಿಗಳಿಗೆ 10, 20 ರೂಪಾಯಿಗಳನ್ನು ಮನಿ‌ ಆರ್ಡರ್ ಮಾಡಿ, ಗಮನ ಸೆಳೆದರು. ಈ ಅಂದೋಲನದಲ್ಲಿ ಬಸವರಾಜ ಜಾಧವ, ಗೌರಮ್ಮ ನಾಡಗೌಡರ, ಮಾದೇವಿ ಬ್ಯಾಳಿ, ಶಶಿಕಲಾ ಚಿಕ್ಕಮಠ, ಶಾರದಾ ಬಳ್ಳೊರ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು -ನರಸಿಂಹಮೂರ್ತಿ ಪ್ಯಾಟಿ.

Published On - 4:08 pm, Fri, 22 May 20