ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್.. ತಮ್ಮ ಪ್ರತಿಭೆಯಿಂದ ಜನರಿಗೆ ಥ್ರಿಲ್​ಕೊಟ್ಟ ಮಹಿಳಾ ಮಣಿಗಳು

|

Updated on: Mar 22, 2021 | 8:38 AM

ಮೋಟಾರ್ ರೇಸಿಂಗ್ ಅಂದ್ರೇನೇ ಹಾಗೆ.. ಅಲ್ಲಿ ಥ್ರಿಲ್ ಇರುತ್ತೆ.. ಮೈ ಜುಮ್ಮೆನ್ನಿಸೋ ರೋಚಕತೆ ಇರುತ್ತೆ.. ಹೀಗಂತಾ ಬರೀ ಪುರುಷರು ಮಾತ್ರ ರೇಸಿಂಗ್ ಮಜಾ ಮಾಡ್ತಾರೆ ಅನ್ಕೋಬೇಡಿ. ಲೇಡಿ ಡ್ರೈವರ್​ಗಳು ಸಹ ತಮ್ಮ ಕೈ ಚಳಕ ತೋರಿಸ್ತಾರೆ.

ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್.. ತಮ್ಮ ಪ್ರತಿಭೆಯಿಂದ ಜನರಿಗೆ ಥ್ರಿಲ್​ಕೊಟ್ಟ ಮಹಿಳಾ ಮಣಿಗಳು
ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್
Follow us on

ಹಾಸನ: ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಮೊಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳು ಕಮಾಲ್ ಮಾಡಿದ್ದಾರೆ. ಸಕಲೇಶಪುರದಲ್ಲಿ ನಡೆದ ರಾಜ್ಯಮಟ್ಟದ ಕಾರ್ ಱಲಿಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಸ್ಪರ್ಧಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ರು.

ಕೊಡಗಿನ ಬೆಡಗಿಯರಾದ ಮೀನಾ, ನಿರ್ಮಲಾ, ಸಕಲೇಶಪುರದ ಜಾಸ್ಮಿನ್ ಮೊಟಾರ್ ರೇಸ್​ ಮೂಲಕ ಜನರನ್ನು ಸಖತ್ ರಂಜಿಸಿದ್ರು. ಡರ್ಟ್​ ಟ್ರ್ಯಾಕ್​ನಲ್ಲಿ ಕೊಡಗಿನ ಮೀನಾ ಮಿಂಚಿನ ವೇಗದಲ್ಲಿ ಕಾರು ಚಲಾಯಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ರೆ. ನಿರ್ಮಲಾ ಕೂಡ ತಮ್ಮ ಚಾಣಾಕ್ಷತೆಯಿಂದ ಕಮಾಲ್ ಮಾಡಿದ್ರು. ಮಾಮೂಲಿಯಾಗಿ ರೇಸ್ ನೋಡಿ ಖುಷಿ ಪಡ್ತಿದ್ದ ಮಹಿಳಾ ಮಣಿಗಳು ತಾವೇ ಖುದ್ದಾಗಿ ರೇಸಿಗಿಳಿದು ಗಮನಸೆಳೆದ್ರು.

ಮೋಟಾರ್ ಸ್ಪೋರ್ಟ್ಸ್​​ಗೆ ಉತ್ತೇಜನ ನೀಡೋ ಸಲುವಾಗಿ ಸಕಲೇಶಪುರದ ಮಲ್ನಾಡ್ ಬಾಯ್ಸ್ ಸಂಸ್ಥೆಯಿಂದ ಆಯೋಜನೆಗೊಂಡಿದ್ದ ಕಾರ್ ಱಲಿಯಲ್ಲಿ ಮೊದಲಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಿದ್ರು. ಡರ್ಟ್ ಟ್ರ್ಯಾಕ್​ನಲ್ಲಿ ರೇಸರ್​ಗಳು ಮಿಂಚಿನ ವೇಗದಲ್ಲಿ ಕಾರು ಚಲಾಯಿಸಿದ್ರು. ಱಲಿಗೆ ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 90 ಸ್ಪರ್ಧಿಗಳು ಆಗಮಿಸಿದ್ರು. ಕಳೆದ ಒಂದು ವರ್ಷ ಕೊರೊನಾ ಭೀತಿಯಿಂದ ಮನರಂಜನೆಯಿಲ್ಲದೆ ಮಂಕಾಗಿದ್ದ ಜನರಿಗೆ ಮೋಟಾರ್ ರೇಸ್ ರೋಮಾಂಚನಕಾರಿ ಅನುಭವ ನೀಡಿದೆ.

ಇದನ್ನೂ ಓದಿ: ರಾಕೆಟ್ ವೇಗದಲ್ಲಿ ಮಿಂಚಿ ಮಾಯವಾಗುವ ಕಾರುಗಳು: ರೋಚಕತೆ ಸೃಷ್ಟಿಸಿದ ಹೊಯ್ಸಳರ ನಾಡಿನ ಮೋಟಾರ್ ಸ್ಪೋರ್ಟ್ಸ್!