ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು.. ಎಲ್ಲಿ?

ನೆಲಮಂಗಲ: ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಬಳಿ ಇರುವ ನಿಡವಂದದ ಟಾಪ್ ಶ್ಯಾಕ್ ಕಾರ್ಖಾನೆಯಲ್ಲಿ ನಡೆದಿದೆ. ಲಕ್ಷ್ಮಿ ವೆಂಕಟೇಶ್ವರ ಬಡಾವಣೆ ನಿವಾಸಿ ಕೃಷ್ಣಪ್ಪ(40)ಮೃತ ದುರ್ದೈವಿ. ಕಾರ್ಯನಿರ್ವಹಿಸುವ ವೇಳೆ ಆಯತಪ್ಪಿ ಘಟನೆ ಸಂಭವಿಸಿದೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದೇ ರೀತಿಯ ಪ್ರಕರಣ ನಿನ್ನೆ ಮೈಸೂರಿನಲ್ಲಿ ಜರುಗಿತ್ತು. ಕಬ್ಬು ಅರೆಯುವ ಯಂತ್ರಕ್ಕೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟಿದ್ದರು. ಇಂದು ಇದೇ ಮಾದರಿಯ ಘಟನೆ […]

ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು.. ಎಲ್ಲಿ?
ದಾಬಸ್‌ಪೇಟೆ ಪೊಲೀಸ್ ಠಾಣೆ

Updated on: Aug 18, 2020 | 8:13 AM

ನೆಲಮಂಗಲ: ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಬಳಿ ಇರುವ ನಿಡವಂದದ ಟಾಪ್ ಶ್ಯಾಕ್ ಕಾರ್ಖಾನೆಯಲ್ಲಿ ನಡೆದಿದೆ.

ಲಕ್ಷ್ಮಿ ವೆಂಕಟೇಶ್ವರ ಬಡಾವಣೆ ನಿವಾಸಿ ಕೃಷ್ಣಪ್ಪ(40)ಮೃತ ದುರ್ದೈವಿ. ಕಾರ್ಯನಿರ್ವಹಿಸುವ ವೇಳೆ ಆಯತಪ್ಪಿ ಘಟನೆ ಸಂಭವಿಸಿದೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದೇ ರೀತಿಯ ಪ್ರಕರಣ ನಿನ್ನೆ ಮೈಸೂರಿನಲ್ಲಿ ಜರುಗಿತ್ತು.

ಕಬ್ಬು ಅರೆಯುವ ಯಂತ್ರಕ್ಕೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟಿದ್ದರು. ಇಂದು ಇದೇ ಮಾದರಿಯ ಘಟನೆ ನೆಲಮಂಗಲದಲ್ಲಿ ಮರು ಕಳಿಸಿದೆ. ಕಾರ್ಮಿಕರು ತಾವು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ಸಾಯುತ್ತಿದ್ದಾರೆ. ಚಿಕ್ಕ ಎಡವಟ್ಟಿನಿಂದ ತಮ್ಮ ಅಮೂಲ್ಯವಾದ ಜೀವವನ್ನು ಬಲಿಕೊಡುತ್ತಿದ್ದಾರೆ.