ದಕ್ಷಿಣ ಇರಾಕ್‌ನ ಪುರಾತತ್ವಶಾಸ್ತ್ರಜ್ಞರ ತಂಡವು ಸುಮಾರು 5000 ವರ್ಷಗಳಷ್ಟು ಹಿಂದಿನ ಪುರಾತನ ಹೋಟೆಲಿನ ಅವಶೇಷಗಳನ್ನು ಕಂಡುಹಿಡಿದಿದೆ. ಸುಮೇರಿಯನ್ ನಾಗರಿಕತೆಯ ಪ್ರಮುಖ ಕೇಂದ್ರವಾದ ಪ್ರಾಚೀನ ಲಗಾಶ್‌ನ ಅವಶೇಷಗಳ ನಡುವೆ ಈ ಹೋಟೆಲು ಕಂಡುಬಂದಿದೆ. ಒಳಗೆ, ಪುರಾತತ್ತ್ವಜ್ಞರು ಒಲೆ, ಕೆಲವು ಬೆಂಚುಗಳು, “ಝೀರ್” ಎಂದು ಕರೆಯಲ್ಪಡುವ ಪುರಾತನ ಮಣ್ಣಿನ ರೆಫ್ರಿಜರೇಟರ್ ಮತ್ತು ಬಟ್ಟಲುಗಳು ಮತ್ತು ಇತರ ಪಾತ್ರೆಗಳಲ್ಲಿ ಉಳಿದ ಆಹಾರವನ್ನು ಪತ್ತೆಹಚ್ಚಿದ್ದಾರೆ.
ಬಟ್ಟಲುಗಳಲ್ಲಿ ಮೀನು ಮತ್ತು ಮೂಳೆಗಳು ಕಂಡುಬಂದಿವೆ, ಜೊತೆಗೆ ಬಿಯರ್ ಕುಡಿಯುವ ಪುರಾವೆಗಳು ಸುಮೇರಿಯನ್ನರಲ್ಲಿ ವ್ಯಾಪಕವಾಗಿ ಹರಡಿವೆ ಎಂದು ಎಎಫ್ಪಿ ವರದಿ ಮಾಡಿದೆ. ಈ ಆವಿಷ್ಕಾರಗಳನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮತ್ತು ಪಿಸಾ ವಿಶ್ವವಿದ್ಯಾಲಯದ ತಂಡಗಳ ಜಂಟಿಯಾಗಿ ನಡೆಸಿವೆ. ಈ ಸಂಶೋಧನೆಗಾಗಿ ಡ್ರೋನ್ ಫೋಟೋಗ್ರಫಿ, ಥರ್ಮಲ್ ಇಮೇಜಿಂಗ್, ಮ್ಯಾಗ್ನೆಟೋಮೆಟ್ರಿ ಮತ್ತು ಮೈಕ್ರೋ-ಸ್ಟ್ರಾಟಿಗ್ರಾಫಿಕ್ ಸ್ಯಾಂಪ್ಲಿಂಗ್‌ನಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಪತ್ತೆಯಾದ ವಸ್ತುಗಳು 4,700 ವರ್ಷಗಳ ಹಿಂದೆ ನಗರ ಕೇಂದ್ರಗಳಲ್ಲಿ ವಾಸಿಸುತ್ತಿದ್ದ ಸಾಮಾನ್ಯ ಜನರ ಜೀವನ ಹೇಗಿತ್ತು ಎಂಬುದನ್ನು ತಿಳಿಸುತ್ತದೆ. ಇರಾಕ್ನಂತಹ ಕೆಲವು ದೇಶಗಳಲ್ಲಿ ನೀರಿಗಿಂತ ಹೆಚ್ಚು ಬಿಯರ್ಗಳನ್ನು ಜನರು ಕುಡಿಯುವುದರಿಂದ ಬಿಯರ್ ರೆಸಿಪಿ ಕಂಡುಬಂದಿದೆ 5ಸಾವಿರ ವರ್ಷಗಳ ಹಿಂದಿನ ಬಿಯರ್ ರೆಸಿಪಿಗಳು ಕೂಡ ಇಲ್ಲಿ ಕಂಡು ಬಂದಿದೆ ಎಂದು ಸಂಶೋಧನೆ ತಿಳಿಸಿದೆ.
ಲಗಾಶ್, ಜವುಗು ದ್ವೀಪಗಳಿಂದ ಮಾಡಲ್ಪಟ್ಟ ಪುರಾತನ ನಗರ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಸೆಳೆದಿದೆ ಮತ್ತು ವಿವಿಧ ಸಂಶೋಧಕರ ತಂಡಗಳಿಂದ ವ್ಯಾಪಕವಾದ ಸಂಶೋಧನೆಗೆ ಒಳಪಟ್ಟಿದೆ ಎಂದು ತಿಳಿದು ಬಂದಿದೆ. ಲಗಾಶ್ ದಕ್ಷಿಣ ಇರಾಕ್‌ನ ಅತಿದೊಡ್ಡ ತಾಣಗಳಲ್ಲಿ ಒಂದಾಗಿದ್ದು, ಈ ಪ್ರದೇಶ ಪ್ರಮುಖ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪಿಟ್‌ಮನ್ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:59 am, Sun, 19 February 23