Career Advice: ಉದ್ಯೋಗ ಬಿಡುವ ಯೋಚನೆಯಲ್ಲಿದ್ದೀರಾ? ಹಾಗಿದ್ರೆ ಕೆಲಸ ಬಿಡುವ ಮುನ್ನ ಈ ವಿಷಯ ತಪ್ಪದೇ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ, 35 ರಿಂದ 50 ವರ್ಷ ವಯಸ್ಸಿನ ಅನೇಕ ಉದ್ಯೋಗಿಗಳು ತಮ್ಮ ಕೆಲಸವನ್ನು ಬಿಡುವ (Resign) ಬಗ್ಗೆ ತೀವ್ರವಾಗಿ ಆಲೋಚಿಸುತ್ತಿದ್ದಾರೆ. ಉದ್ಯೋಗ ಬದಲಾಯಿಸುವುದು ಅಥವಾ ಹೊಸ ಜೀವನ ಆರಂಭಿಸುವುದು ತಪ್ಪಲ್ಲ. ಆದರೆ ಯಾವುದೇ ನಿರ್ಧಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ. ಸರಿಯಾದ ಯೋಜನೆ, ಸಾಕಷ್ಟು ಉಳಿತಾಯ ಮತ್ತು ಕುಟುಂಬದ ಬೆಂಬಲದೊಂದಿಗೆ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ಯಾವುದೇ ಪಶ್ಚಾತ್ತಾಪ ಇರುವುದಿಲ್ಲ.

Career Advice: ಉದ್ಯೋಗ ಬಿಡುವ ಯೋಚನೆಯಲ್ಲಿದ್ದೀರಾ? ಹಾಗಿದ್ರೆ ಕೆಲಸ ಬಿಡುವ ಮುನ್ನ ಈ ವಿಷಯ ತಪ್ಪದೇ ತಿಳಿಯಿರಿ
ಉದ್ಯೋಗ ಬಿಡುವ ಯೋಚನೆಯಲ್ಲಿದ್ದೀರಾ?
Image Credit source: iStock/leremy

Updated on: Jul 30, 2026 | 11:24 AM

ಇತ್ತೀಚಿನ ದಿನಗಳಲ್ಲಿ ಹಲವು ಉದ್ಯೋಗಿಗಳು ಕೆಲಸದ ಒತ್ತಡ, ಕಡಿಮೆ ಸಂಬಳ, ವೃತ್ತಿಯಲ್ಲಿ ಬೆಳವಣಿಗೆಯ ಕೊರತೆ ಅಥವಾ ಸ್ವಂತ ಉದ್ಯಮ ಆರಂಭಿಸುವ ಕನಸಿನ ಕಾರಣದಿಂದ ಉದ್ಯೋಗಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಕೋಪದಲ್ಲಿ ಅಥವಾ ಆತುರದಲ್ಲಿ ಕೆಲಸ ಬಿಡುವುದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ರಾಜೀನಾಮೆ ನೀಡುವ ಮುನ್ನ ಈ ಪ್ರಮುಖ ವಿಷಯಗಳನ್ನು ಗಮನದಲ್ಲಿಡಿ.

6 ರಿಂದ 12 ತಿಂಗಳ ತುರ್ತು ನಿಧಿ ಇರಲಿ:

ಕೆಲಸ ಬಿಟ್ಟ ತಕ್ಷಣ ಹೊಸ ಉದ್ಯೋಗ ಅಥವಾ ಆದಾಯ ಸಿಗುತ್ತದೆ ಎನ್ನುವ ಖಾತರಿ ಇರುವುದಿಲ್ಲ. ಆದ್ದರಿಂದ ಕುಟುಂಬದ ಖರ್ಚುಗಳನ್ನು ನಿಭಾಯಿಸಲು ಕನಿಷ್ಠ 6 ರಿಂದ 12 ತಿಂಗಳ ತುರ್ತು ನಿಧಿಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. “ಮೊದಲು ಕೆಲಸ ಬಿಡೋಣ, ನಂತರ ನೋಡೋಣ” ಎಂಬ ಯೋಚನೆ ಒಳ್ಳೆಯದಲ್ಲ. ಕೆಲಸ ಬಿಟ್ಟ ನಂತರ ಏನು ಮಾಡಬೇಕು, ಎಲ್ಲಿಂದ ಆದಾಯ ಬರುತ್ತದೆ ಎಂಬ ಬಗ್ಗೆ ಸ್ಪಷ್ಟ ಯೋಜನೆ ಇರಬೇಕು.

ಸಾಲ ಮತ್ತು EMI ಬಗ್ಗೆ ಯೋಚಿಸಿ:

ಹೋಮ್ ಲೋನ್, ಕಾರ್ ಲೋನ್, ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಸಾಲ ಇದ್ದರೆ, ಕೆಲಸ ಬಿಡುವ ಮೊದಲು ಹಣಕಾಸಿನ ಪರಿಸ್ಥಿತಿಯನ್ನು ಸರಿಯಾಗಿ ಲೆಕ್ಕ ಹಾಕಿ. ಆದಾಯವಿಲ್ಲದ ಸಮಯದಲ್ಲೂ EMI ಪಾವತಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ. ರಾಜೀನಾಮೆ ನಿಮ್ಮೊಬ್ಬರ ನಿರ್ಧಾರ ಮಾತ್ರವಲ್ಲ. ಮಕ್ಕಳ ಶಿಕ್ಷಣ, ಮನೆಯ ಖರ್ಚು, ಪೋಷಕರ ಆರೋಗ್ಯ ಸೇರಿದಂತೆ ಹಲವು ಜವಾಬ್ದಾರಿಗಳಿರುತ್ತವೆ. ಆದ್ದರಿಂದ ಕುಟುಂಬದವರೊಂದಿಗೆ ಮಾತನಾಡಿ ಅವರ ಅಭಿಪ್ರಾಯವನ್ನೂ ತಿಳಿದುಕೊಳ್ಳಿ.

ಆರೋಗ್ಯ ವಿಮೆ ಮತ್ತು ಟರ್ಮ್ ಇನ್ಶೂರೆನ್ಸ್ ಇರಲಿ:

ಕಂಪನಿಯ ಆರೋಗ್ಯ ವಿಮೆ ಕೆಲಸ ಬಿಟ್ಟ ನಂತರ ನಿಲ್ಲಬಹುದು. ಆದ್ದರಿಂದ ಕೆಲಸ ಬಿಡುವ ಮುನ್ನ ವೈಯಕ್ತಿಕ ಆರೋಗ್ಯ ವಿಮೆ ಹಾಗೂ ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಉತ್ತಮ. ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಕೌಶಲ್ಯಗಳಿಗೆ ಹೆಚ್ಚು ಬೇಡಿಕೆ ಇದೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಕೌಶಲ್ಯ ಅಥವಾ ಪ್ರಮಾಣಪತ್ರಗಳನ್ನು ಪಡೆದುಕೊಂಡರೆ ಹೊಸ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ.

ಕೋಪದಲ್ಲಿ ರಾಜೀನಾಮೆ ನೀಡಬೇಡಿ:

ಬಾಸ್ ಜೊತೆಗಿನ ಭಿನ್ನಾಭಿಪ್ರಾಯ ಅಥವಾ ಕೆಲಸದ ಒತ್ತಡದಿಂದ ತಕ್ಷಣ ರಾಜೀನಾಮೆ ನೀಡುವುದು ಸರಿಯಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಶಾಂತವಾಗಿ ಯೋಚಿಸಿ ನಂತರ ನಿರ್ಧಾರ ಕೈಗೊಳ್ಳಿ. ಕೆಲಸ ಬಿಡುವುದರಿಂದ PF ಉಳಿತಾಯ ಮತ್ತು ನಿವೃತ್ತಿ ಯೋಜನೆ ಮೇಲೆ ಪರಿಣಾಮ ಬೀಳಬಹುದು. ಜೊತೆಗೆ ಉದ್ಯೋಗದಲ್ಲಿ ಉಂಟಾಗುವ Career Gap ಬಗ್ಗೆ ಮುಂದಿನ ಸಂದರ್ಶನಗಳಲ್ಲಿ ಪ್ರಶ್ನೆಗಳು ಬರಬಹುದು. ಆದ್ದರಿಂದ ಅದಕ್ಕೂ ಸಿದ್ಧರಾಗಿರಿ.

ರಾಜೀನಾಮೆಗೂ ಮುನ್ನ ಈ ಆಯ್ಕೆಗಳನ್ನೂ ಪರಿಶೀಲಿಸಿ:

ಕೆಲಸ ಬಿಡುವ ಮೊದಲು ಸಂಸ್ಥೆಯೊಳಗಿನ ಬೇರೆ ವಿಭಾಗಕ್ಕೆ ವರ್ಗಾವಣೆ, ಮನೆಯಿಂದ ಕೆಲಸ (Work From Home), ಕೆಲಸದ ಸಮಯದಲ್ಲಿ ಬದಲಾವಣೆ ಅಥವಾ ಕೆಲ ದಿನಗಳ ರಜೆ ಪಡೆಯುವ ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸಿ. ಕೆಲವೊಮ್ಮೆ ಇಂತಹ ಆಯ್ಕೆಗಳು ಕೆಲಸ ಬಿಡುವ ಅಗತ್ಯವನ್ನೇ ತಪ್ಪಿಸಬಹುದು.

ಉದ್ಯೋಗ ಬದಲಾಯಿಸುವುದು ಅಥವಾ ಹೊಸ ಜೀವನ ಆರಂಭಿಸುವುದು ತಪ್ಪಲ್ಲ. ಆದರೆ ಯಾವುದೇ ನಿರ್ಧಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ. ಸರಿಯಾದ ಯೋಜನೆ, ಸಾಕಷ್ಟು ಉಳಿತಾಯ ಮತ್ತು ಕುಟುಂಬದ ಬೆಂಬಲದೊಂದಿಗೆ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ಯಾವುದೇ ಪಶ್ಚಾತ್ತಾಪ ಇರುವುದಿಲ್ಲ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us