
ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಕಾಂಪಿಟೇಶನ್ ಇದೆ. ವೃತ್ತಿ ಜೀವದಲ್ಲಿ ಯಶಸ್ಸನ್ನು ಸಾಧಿಸಲು, ಪ್ರಮೋಶನ್ ಗಿಟ್ಟಿಸಿಕೊಳ್ಳಲು ಕೆಲಸದ ಸ್ಥಳದಲ್ಲಿ ಸಹದ್ಯೋಗಿಗಳ (colleagues) ನಡುವೆ ಪರೋಕ್ಷವಾಗಿ ಸ್ಪರ್ಧೆಗಳು, ಜಿದ್ದಾಟಗಳು ನಡೆಯುತ್ತಲೇ ಇರುತ್ತವೆ. ಕೆಲಸದ ಸ್ಥಳದಲ್ಲಿ ಇಂತಹ ಪರಿಸ್ಥಿತಿ ಇರುವಾಗ ನಾವು ನಮ್ಮ ಸಹದ್ಯೋಗಿಗಳೊಂದಿಗೆ ಬಹಳ ಜಾಗರೂಕತೆಯಿಂದ ವರ್ತಿಸಬೇಕು. ಅದರಲ್ಲೂ ಅದರಲ್ಲೂ ಈ ಒಂದಷ್ಟು ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದು ನಿಮ್ಮ ವೃತ್ತಿ ಜೀವನದ ಬೆಳವಣಿಗೆಗೆ ಸಾಕಷ್ಟು ಅಡ್ಡಿಯನ್ನು ಉಂಟು ಮಾಡುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಹಂಬಲವಿದ್ದರೆ, ನೀವು ನಿಮ್ಮ ಕೊಲೀಗ್ಸ್ ಜೊತೆ ಈ ಪರ್ಸನಲ್ ಮಾಹಿತಿಗಳನ್ನು ಶೇರ್ ಮಾಡುವುದನ್ನು ತಪ್ಪಿಸಿ.
ನಿಮ್ಮ ಆರ್ಥಿಕ ಪರಿಸ್ಥಿತಿ, ಸಾಲಗಳು, ಕೌಟುಂಬಿಕ ಕಲಹಗಳು ಅಥವಾ ಆರೋಗ್ಯ ಸಮಸ್ಯೆಗಳ ಬಗ್ಗೆ ಸಹದ್ಯೋಗಿಗಳ ಬಳಿ ಹೇಳಿಕೊಳ್ಳಬೇಡಿ. ಏಕೆಂದರೆ ಇದು ನಿಮ್ಮ ವೃತ್ತಿಪರ ಇಮೇಜ್‌ಗೆ ಹಾನಿಯಾಗುತ್ತದೆ. ಇದಲ್ಲದೆ ನಿಮ್ಮ ಮುಂದೆ ನಿಮ್ಮ ಸಮಸ್ಯೆಗಳ ಬಗ್ಗೆ ಶಾಂತ ರೀತಿಯಲ್ಲಿ ಆಲಿಸುವ ಸಹದ್ಯೋಗಿಗಳು ಬೆನ್ನ ಹಿಂದೆ ನಿಮ್ಮನ್ನು ಗೇಲಿ ಮಾಡಬಹುದು. ಆದ್ದರಿಂದ, ಅಂತಹ ವೈಯಕ್ತಿಕ ವಿಷಯಗಳನ್ನು ಕಚೇರಿಯಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸುವುದು ಉತ್ತಮ.
ನಿಮ್ಮ ವೃತ್ತಿಜೀವನದ ಯೋಜನೆಗಳು ಮತ್ತು ಭವಿಷ್ಯದ ಗುರಿಗಳು ಯಾವಾಗಲೂ ರಹಸ್ಯವಾಗಿರಬೇಕು. ನೀವೇನಾದರೂ ಇದನ್ನು ಸಹದ್ಯೋಗಿಗಳೊಂದಿಗೆ ಶೇರ್ ಮಾಡಿದರೆ, ಕೆಲವರು ಇದರ ಸದುಪಯೋಗವನ್ನು ಪಡಿಸಿಕೊಳ್ಳುತ್ತಾರೆ. ಇಲ್ಲವೇ ನಿಮ್ಮ ಯೋಜನೆಗಳನ್ನು ಹಾಳು ಮಾಡುವ ಸಾಧ್ಯತೆಯೂ ಇರುತ್ತದೆ. ಇದು ನಿಮ್ಮ ವೃತ್ತಿ ಜೀವನದ ಇಮೇಜ್‌ಗೆ ಹಾನಿಯನ್ನು ಉಂಟುಮಾಡಬಹುದು. ಆದ್ದರಿಂದ ಎಷ್ಟೇ ಕ್ಲೋಸ್ ಆಗಿದ್ರೂ ಸರಿ ಯಾವ ಸಹದ್ಯೋಗಿಯೊಂದಿಗೂ ಸಹ ನಿಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಹಂಚಿಕೊಳ್ಳಬೇಡಿ.
ಇದನ್ನೂ ಓದಿ: ಹಣಕಾಸಿನ ಸಮಸ್ಯೆಯಿಂದ ಪಾರಾಗಲು ಸಂಬಳವಾದ ತಕ್ಷಣವೇ ಈ ಕೆಲಸಗಳನ್ನು ಮಾಡಬೇಕು
ನೀವು ಉದ್ಯೋಗ ಬದಲಾವಣೆ ಮಾಡುತ್ತಿದ್ದರೇ ಅಥವಾ ಬೇರೆ ಬೇರೆ ಕಡೆ ಇಂಟರ್ವ್ಯೂ ಕೊಡುತ್ತಿದ್ದರೆ ಅದನ್ನು ಕೊಲೀಗ್ಸ್ ಜೊತೆ ಹಂಚಿಕೊಳ್ಳಬಾರದು. ನಿರ್ಧಾರ ಅಂತಿಮವಾಗುವವರೆಗೆ ಅಂತಹ ವೈಯಕ್ತಿಕ ಮಾಹಿತಿಯನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಕೆಲವು ಹೊಟ್ಟೆಕಿಚ್ಚಿನ ಸಹದ್ಯೋಗಿಗಳು ನಿಮ್ಮ ಈ ಯೋಜನೆಗಳನ್ನು ಹಾಳುಗೆಡವುವ ಸಾಧ್ಯತೆ ಇರುತ್ತದೆ.
ನೀವು ನಿಮ್ಮ ಸಹದ್ಯೋಗಿಗಳೊಂದಿಗೆ ಎಷ್ಟೇ ಆಪ್ತವಾಗಿದ್ದರೂ ಸರಿ ನಿಮಗೆಷ್ಟು ಸಂಬಳ ಬರುತ್ತೆ, ನಿಮಗೆಷ್ಟು ಬೋನಸ್ ಮೊತ್ತು ಸಿಕ್ತು ಎಂಬ ತೀರಾ ಪರ್ಸನಲ್ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಡಿ. ಈ ರೀತಿ ಸಂಬಳ ಮತ್ತು ಬೋನಸ್ ಮಾಹಿತಿಯನ್ನು ಹಂಚಿಕೊಳ್ಳುವುದು ಅನಗತ್ಯ ಹೋಲಿಕೆಗಳು ಮತ್ತು ಉದ್ವಿಗ್ನತೆಗೆ ಕಾರಣವಾಗಬಹುದು. ಆದ್ದರಿಂದ, ನಿಖರವಾದ ಗಳಿಕೆಯ ಮಾಹಿತಿಯನ್ನು ಖಾಸಗಿಯಾಗಿ ಇಡುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ