ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ

ಜಪಾನಿನ ಜನರು ಆರೋಗ್ಯಕರ ಜೀವನಶೈಲಿಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ರಹಸ್ಯವನ್ನು ತುಂಬಾ ಚೆನ್ನಾಗಿ ತಿಳಿದಿದ್ದಾರೆ. ಈ ಹೆಲ್ತಿ ಜೀವನಶೈಲಿಯನ್ನು ಪಾಲಿಸುವ ಮೂಲಕ ಸಂತೋಷದಾಯಕ, ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ. ಜಪಾನೀಯರಂತೆ ನೀವು ಸಹ ಫಿಟ್‌ ಮತ್ತು ಹೆಲ್ತಿಯಾಗಿರಲು ಬಯಸಿದರೆ ಈ ಕೆಲವು ಸರಳ ಅಭ್ಯಾಸಗಳನ್ನು ದೈನಂದಿನ ಜೀವನದಲ್ಲಿ ತಪ್ಪದೇ ಪಾಲಿಸಿ.

ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 15, 2026 | 8:38 PM

ಜಪಾನ್‌ (Japan) ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ, ಶಾಂತಿ, ನೆಮ್ಮದಿಯ ಜೀವನಕ್ಕೆ ಹೆಸರುವಾಸಿಯಾಗಿರುವ ದೇಶ. ಇಲ್ಲಿನ ಜನರು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಆರೋಗ್ಯಕರ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಈ ಸಣ್ಣ ಮತ್ತು ಪರಿಣಾಮಕಾರಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಸಹ ನಿಮ್ಮ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸಬಹುದು. ಆರೋಗ್ಯವಂತರಾಗಿ ಬಾಳಲು ಜಪಾನೀಯರ ಯಾವೆಲ್ಲಾ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಉತ್ತಮ ಆರೋಗ್ಯ ನಿಮ್ಮದಾಗಲು ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸಿ:

ಪೌಷ್ಟಿದಾಯ ಆಹಾರ ಸೇವನೆ: ಜಪಾನಿನ ಜನರು ಯಾವಾಗಲೂ ಹೆಚ್ಚಿನ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಾರೆ. ಅವರ ಊಟದಲ್ಲಿ ಹೆಚ್ಚಾಗಿ ಅನ್ನ ಮತ್ತು ಹಸಿರು ತರಕಾರಿಗಳು, ಸುಟ್ಟ, ಆವಿಯಲ್ಲಿ ಬೇಯಿಸಿದ ಆಹಾರಗಳು ಇರುತ್ತವೆ. ಇಂತಹ ಆಹಾರಗಳು ಜೀರ್ಣವಾಗುತ್ತವೆ ಮತ್ತು ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತವೆ. ಇದಲ್ಲದೆ ಇಲ್ಲಿನ ಜನ ಸ್ಥಳೀಯ, ಮನೆಯಲ್ಲಿ ತಯಾರಿಸಿದ, ರಾಸಾಯನಿಕ ಮುಕ್ತ ಮತ್ತು ನೈಸರ್ಗಿಕ ಆಹಾರವನ್ನು ಹೆಚ್ಚು ಸೇವನೆ ಮಾಡುತ್ತಾರೆ.

ವಜ್ರಾಸನದಲ್ಲಿ ಕುಳಿತು ಆಹಾರ ಸೇವಿಸುವುದು: ಜಪಾನಿಯರ ವಿಶಿಷ್ಟ ಅಭ್ಯಾಸವೆಂದರೆ ವಜ್ರಾಸನದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು. ಇದು ಅವರ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಗ್ಯಾಸ್, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ. ಅಲ್ಲದೆ ವಜ್ರಾಸನವು ಬೆನ್ನುಮೂಳೆಯನ್ನು ನೇರವಾಗಿ ಇಡುತ್ತದೆ.

ರಾತ್ರಿಯ ಊಟವನ್ನು ಬೇಗ ಮಾಡುವುದು: ತಜ್ಞರು ಯಾವಾಗಲೂ ಬೇಗ ಊಟ ಮಾಡುವಂತೆ ಶಿಫಾರಸು ಮಾಡುತ್ತಾರೆ. ಇದು ಒಳ್ಳೆಯ ಅಭ್ಯಾಸ. ಜಪಾನ್‌ನಲ್ಲಿ ಹೆಚ್ಚಿನ ಜನರು ಈ ಅಭ್ಯಾಸವನ್ನು ಅನುಸರಿಸುತ್ತಾರೆ. ಅವರು ಸಂಜೆ 7 ಗಂಟೆಯೊಳಗೆ ತಮ್ಮ ಭೋಜನವನ್ನು ಮುಗಿಸುತ್ತಾರೆ, ಇದು ತುಂಬಾ ಆರೋಗ್ಯಕರ ವಿಧಾನವಾಗಿದೆ. ದೇಹವು ರಾತ್ರಿಯಲ್ಲಿ ವಿಷವನ್ನು ನಿರ್ವಿಷಗೊಳಿಸಲು ಮತ್ತು ದುರಸ್ತಿ ಮಾಡಿಕೊಳ್ಳಲು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ನೀವು ಆರೋಗ್ಯವಾಗಿರಲು ಸಹ ಸಹಾಯ ಮಾಡುತ್ತದೆ.

 ಗ್ರೀನ್ ಟೀ ಸೇವನೆ: ಜಪಾನ್‌ನಲ್ಲಿ ಗ್ರೀನ್ ಟೀ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ, ತೂಕ ನಿಯಂತ್ರಣದಲ್ಲಿಡುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ. ಆದ್ದರಿಂದ, ಗ್ರೀನ್ ಟೀಯನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು.

ಇದನ್ನೂ ಓದಿ: ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ವಾಕಿಂಗ್‌ ಮತ್ತು ಸೈಕ್ಲಿಂಗ್: ಜಪಾನಿನ ಜನರು ತಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ವಾಕಿಂಗ್‌ ಮತ್ತು ಸೈಕ್ಲಿಂಗ್ ಮಾಡುತ್ತಾರೆ. ಇದು ಅವರ ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರೋಗಗಳನ್ನು ದೂರವಿಡುತ್ತದೆ. ಇದಲ್ಲದೆ, ಇದು ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಯೋಗ, ಧ್ಯಾನ ಮತ್ತು ಉತ್ತಮ ನಿದ್ರೆ: ಪ್ರತಿದಿನ ಸ್ವಲ್ಪ ಯೋಗ, ಕೆಲವು ನಿಮಿಷಗಳ ಧ್ಯಾನ ಮಾಡಿ ಮತ್ತು ಸಾಕಷ್ಟು ನಿದ್ರೆ ಪಡೆಯಿರಿ ಈ ಅಭ್ಯಾಸಗಳು ನಿಮ್ಮನ್ನು ಒತ್ತಡ, ಖಿನ್ನತೆ ಮತ್ತು ಅನಾರೋಗ್ಯದಿಂದ ಅವರನ್ನು ದೂರವಿಡುತ್ತದೆ.

ಬಲವಾದ ಸಾಮಾಜಿಕ ಸಂಬಂಧಗಳು: ಭಾವನಾತ್ಮಕ ಆರೋಗ್ಯಕ್ಕೆ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಮುಖ್ಯವಾಗಿದೆ. ಇದು ಒಬ್ಬರಿಗೊಬ್ಬರು ಸೇರಿರುವ ಭಾವನೆಯನ್ನು ಬೆಳೆಸುತ್ತದೆ ಮತ್ತು ಸಾಮಾಜಿಕ ಬಂಧಗಳನ್ನು ಬಲಪಡಿಸುತ್ತದೆ, ಇದು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us