ಈ ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂತೋಷದಾಯಕ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು

ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಆದರೆ ಇಂದಿನ ನಮ್ಮ ಕಾರ್ಯನಿರತ ಜೀವನದಲ್ಲಿ, ಅನೇಕರಿಗೆ ತಮಗಾಗಿ ಸಮಯವನ್ನು ಕಂಡುಕೊಳ್ಳಲು ಅಥವಾ ಸಂತೋಷವಾಗಿರಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ಅವರು ತೀರಾ ಒತ್ತಡಕ್ಕೊಳಗಾಗುತ್ತಿದ್ದಾರೆ. ಸಂತೋಷವನ್ನು ಕಂಡುಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಕೆಲವೊಂದು ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹ್ಯಾಪಿಯಾಗಿ ಜೀವನ ನಡೆಸಬಹುದು.

ಈ ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂತೋಷದಾಯಕ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು
ಸಾಂದರ್ಭಿಕ ಚಿತ್ರ
Image Credit source: Unsplash

Updated on: Nov 14, 2026 | 6:41 PM

ಪ್ರತಿಯೊಬ್ಬರೂ ಸಂತೋಷವನ್ನು (happy) ಬಯಸುತ್ತಾರೆ, ಆದರೆ ದೈನಂದಿನ ಜಂಜಾಟ, ಕೆಲಸದ ಒತ್ತಡಗಳು, ಕುಟುಂಬದ ಜವಾಬ್ದಾರಿಗಳು ಮತ್ತು ಸಣ್ಣ ಪುಟ್ಟ ಸಮಸ್ಯೆಗಳು ಇವೆಲ್ಲದರ ಕಾರಣದಿಂದ ಅನೇಕರಿಗೆ ಸಂತೋಷದಿಂದ ಜೀವನ ನಡೆಸಲು ಸಾಧ್ಯವೇ ಆಗೋದಿಲ್ಲ. ನಿತ್ಯವೂ ಒತ್ತಡದಲ್ಲಿಯೇ ಇರುತ್ತಾರೆ. ಹೀಗೆ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳುವುದು ಸವಾಲಿನದ್ದಾಗಿರಬಹುದು. ಆದರೆ ಏನ್‌ ಗೊತ್ತಾ? ಕೆಲವು ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಪ್ರತಿದಿನ ನಿಮ್ಮನ್ನು ಸಂತೋಷವಾಗಿರಿಸಿಕೊಳ್ಳಬಹುದು. ನಿಮ್ಮನ್ನು ಸಂತೋಷವಾಗಿಡಲು ನೀವು ಅಳವಡಿಸಿಕೊಳ್ಳಬೇಕಾದ ಆ ಅಭ್ಯಾಸಗಳು ಯಾವುವು ಎಂಬ ಪೂರ್ಣ ವಿವರ ಇಲ್ಲಿದೆ.

ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳಿ:

ಸಂತೋಷದ ಮೊದಲ ಹೆಜ್ಜೆ ನಿಮ್ಮ ಆಲೋಚನೆಯಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳುವುದು. ಪ್ರತಿಯೊಂದು ಸನ್ನಿವೇಶವೂ ನಿಮಗೆ ಏನಾದರೂ ಒಳ್ಳೆಯದನ್ನು ತರುತ್ತದೆ ಎಂದು ನೀವು ನಂಬಿದಾಗ, ನೀವು ಸ್ವಯಂಚಾಲಿತವಾಗಿ ಸಂತೋಷವಾಗಿರುತ್ತೀರಿ. ಕಷ್ಟದ ಸಮಯಗಳು ಅನಿವಾರ್ಯವಾಗಿ ಬರುತ್ತವೆ, ಆದರೆ ಅವುಗಳ ಬಗ್ಗೆ ಯೋಚಿಸುವ ಬದಲು, ಅವುಗಳಿಂದ ಕಲಿಯಿರಿ. ಆಗ ಮಾತ್ರ ನೀವು ಯಾವುದೇ ಚಿಂತೆಗಳಿಲ್ಲದೆ ಖುಷಿ ಖುಷಿಯಾಗಿರಬಹುದು.

Loading...

ನಿಮ್ಮಲ್ಲಿರುವ ಎಲ್ಲದಕ್ಕೂ ಕೃತಜ್ಞರಾಗಿರಿ:

ಅನೇಕರಿಗೆ ತೃಪ್ತಿ ಎನ್ನುವುದೇ ಇಲ್ಲ. ತಮ್ಮ ಸುಂದರವಾದ ಬದುಕಿಗೆ ಕೃತಜ್ಞರಾಗಿರದೆ, ಇನ್ನೊಬ್ಬರನ್ನು ನೋಡಿ, ನನಗೂ ಕೂಡ ಅವರಂತೆಯೇ ಬದುಕಬೇಕು ಎಂದು ಅತಿಯಾಸೆಪಡುತ್ತಾರೆ. ಇದು ಕೊನೆಗೆ ನೋವನ್ನೇ ಉಂಟು ಮಾಡುತ್ತದೆ. ಆದ್ದರಿಂದ ಅತಿಯಾಸೆಯನ್ನು ಬಿಟ್ಟು ನಿಮ್ಮಲ್ಲಿರುವ ಎಲ್ಲದಕ್ಕೂ ಕೃತಜ್ಞರಾಗಿರುವುದು ಅತ್ಯಂತ ಮುಖ್ಯ. ಇದು ನಿಮ್ಮ ಮನಸ್ಸನ್ನು ಸಕಾರಾತ್ಮಕವಾಗಿರಿಸುತ್ತದೆ.

ಸಮಯ ಸಿಕ್ಕಾಗೆಲ್ಲಾ ನೃತ್ಯ ಮಾಡಿ:

ನೃತ್ಯವು ಕೇವಲ ವ್ಯಾಯಾಮದ ಒಂದು ರೂಪವಲ್ಲ, ಅದು ನಿಮ್ಮ ಮನಸ್ಥಿತಿಯನ್ನು ಸಹ ಸುಧಾರಿಸುತ್ತದೆ. ನಿಮ್ಮನ್ನು ಸಂತೋಷವಾಗಿರಿಸುವುದರ ಜೊತೆಗೆ, ನೃತ್ಯವು ನಿಮ್ಮ ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ, ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಇದು ನಿಮ್ಮ ಹೃದಯವನ್ನು ಸಹ ಆರೋಗ್ಯವಾಗಿಡುತ್ತದೆ. ನೀವು ಪ್ರತಿದಿನ ನೃತ್ಯ ಮಾಡಿದರೆ, ನಿಮ್ಮ ಹೊಟ್ಟೆಯ ಕೊಬ್ಬು ಕೂಡ ಕಡಿಮೆಯಾಗುತ್ತದೆ.

ಸಂಬಂಧಗಳನ್ನು ಬಲಪಡಿಸಿ:

ಸಂತೋಷವಾಗಿರಲು, ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ, ಮ್ಮ ಆಲೋಚನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ನಿಮಗೆ ಅಪಾರ ಸಂತೋಷವನ್ನು ತರುತ್ತದೆ.

ಹೊಸ ಚಟುವಟಿಕೆಗಳನ್ನು ಮಾಡುತ್ತಿರಿ:

ನಾವೆಲ್ಲರೂ ಪ್ರತಿದಿನ ಹೊಸದನ್ನು ಕಲಿಯಬೇಕು. ಹೊಸ ಅನುಭವಗಳು ಮನಸ್ಸನ್ನು ರೋಮಾಂಚನಗೊಳಿಸುತ್ತವೆ ಮತ್ತು ಜೀವನಕ್ಕೆ ತಾಜಾತನವನ್ನು ತರುತ್ತವೆ. ಅದು ಹೊಸ ಪುಸ್ತಕಗಳನ್ನು ಓದುವುದಾಗಲಿ, ಹೊಸ ಸ್ಥಳಗಳಿಗೆ ಭೇಟಿ ನೀಡುವುದಾಗಲಿ ಅಥವಾ ಹೊಸ ಕೌಶಲ್ಯಗಳನ್ನು ಕಲಿಯುವುದಾಗಲಿ, ಇವೆಲ್ಲವೂ ನಿಮ್ಮ ಸಂತೋಷವನ್ನು ದ್ವಿಗುಣಗೊಳಿಸುತ್ತದೆ.

ಇದನ್ನೂ ಓದಿ: ಆರೋಗ್ಯಕರ ಜೀವನಕ್ಕಾಗಿ ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ನೀವು ಪಾಲಿಸಲೇಬೇಕು

ಮುಖ್ಯವಾಗಿ ನಿಮಗೆ ನೀವು ಸಮಯ ಕೊಡಿ:

ನೀವು ಎಷ್ಟೇ ಕಾರ್ಯನಿರತರಾಗಿದ್ದರೂ, ನಿಮಗಾಗಿ ಸಮಯ ತೆಗೆದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಹವ್ಯಾಸಗಳತ್ತ ಗಮನಹರಿಸಿ, ಧ್ಯಾನ ಮಾಡಿ ಅಥವಾ ಸ್ವಲ್ಪ ಸಮಯ ಒಂಟಿಯಾಗಿ ಕಳೆಯಿರಿ. ಇದು ನಿಮ್ಮ ಆಲೋಚನೆಗಳನ್ನು ಪ್ರಕ್ರಿಯೆಗೊಳಿಸಲು, ಹೆಚ್ಚು ಶಾಂತಿಯಿಂದಿರಲು ಮತ್ತು ಸಂತೋಷವಾಗಿರಲು ಸಹಾಯ ಮಾಡುತ್ತದೆ.

ನಕಾರಾತ್ಮಕ ವಿಷಯಗಳಿಂದ ದೂರವಿರಿ:

ನಿರಂತರವಾಗಿ ಕೆಟ್ಟ ಸುದ್ದಿಗಳನ್ನು ನೋಡುವುದು, ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಅಥವಾ ನಕಾರಾತ್ಮಕವಾಗಿ ಮಾತನಾಡುವ ಜನರೊಂದಿಗೆ ನಿರಂತರವಾಗಿ ಇರುವುದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ನೀವು ಯಾವಾಗಲೂ ಸಕಾರಾತ್ಮಕ ವಿಷಯಗಳ ಬಗ್ಗೆಯೇ ಯೋಚಿಸಿ, ಸಕಾರಾತ್ಮಕ ಮನಸ್ಥಿತಿಯ ಜನರೊಂದಿಗೆ ಬೆರೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us