ಸಾಂದರ್ಭಿಕ ಚಿತ್ರ
Image Credit source: vecteezy
ಹಿಂದೂ ಧರ್ಮದಲ್ಲಿ, ತುಳಸಿಯನ್ನು (Tulsi) ವಿಷ್ಣುವಿಗೆ ಅತ್ಯಂತ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅನೇಕರು ದೇವರ ಕೋಣೆಯಲ್ಲಿ ತುಳಸಿ ಎಲೆ ಅಥವಾ ತುಳಸಿ ಹೂವುಗಳನ್ನು ಇಡುತ್ತಾರೆ. ಮರುದಿನ ಆ ತುಳಸಿ ಹೂವುಗಳನ್ನು ಎಸೆದು ಬಿಡುತ್ತಾರೆ. ಇನ್ನೂ ಅನೇಕರು ತುಳಸಿ ಗಿಡದಲ್ಲಿ ಬೆಳೆದ ಹೂವುಗಳನ್ನು ಯಾವುದೇ ಉಪಯೋಗವಿಲ್ಲವೆಂದು ಕಿತ್ತು ಎಸೆದುಬಿಡುತ್ತಾರೆ. ಈ ರೀತಿ ತುಳಸಿ ಹೂವನ್ನು ಎಸೆಯುವ ಬದಲು ಅದರಿಂದ ಧೂಪವನ್ನು ತಯಾರಿಸಬಹುದು. ಹೌದು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಧೂಪ ಅಥವಾ ಸಾಂಬ್ರಾಣಿಯನ್ನು ಬಳಸುವ ಬದಲು ಒಣಗಿದ ತುಳಸಿ ಹೂವುಗಳಿಂದ ತಯಾರಿಸಿದ ಕೆಮಿಕಲ್ ಫ್ರೀ ಧೂಪವನ್ನು ಬಳಸಹುದು. ಈ ಹೋಮ್‌ಮೇಡ್ ಧೂಪವನ್ನು ತಯಾರಿಸುವುದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ.
ತುಳಸಿ ಹೂವುಗಳಿಂದ ತಯಾರಿಸಿ ಧೂಪ:
ನೀವು ಮಾರುಕಟ್ಟೆಯಿಂದ ಯಾವುದೇ ವಿಶೇಷ ಪದಾರ್ಥಗಳನ್ನು ಖರೀದಿಸುವ ಅಗತ್ಯವಿಲ್ಲ. ಒಣಗಿದ ತುಳಸಿ ಹೂವುಗಳು ಮತ್ತು ಕೆಲವು ಅಡುಗೆಮನೆಯ ಪದಾರ್ಥಗಳನ್ನು ಬಳಸಿ ನೀವು ಸುಲಭವಾಗಿ ಧೂಪವನ್ನು ತಯಾರಿಸಬಹುದು.
Loading...
{{{html}}}
ತುಳಸಿ ಹೂವಿನ ಧೂಪ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:
- ಒಣಗಿದ ತುಳಸಿ ಹೂವು
- ಪಲಾವ್ ಎಲೆ 5 ರಿಂದ 6
- ಲವಂಗ
- ಕರ್ಪೂರ 12 ರಿಂದ 13
- ಅರಶಿನ ಪುಡಿ
- ರೋಸ್ ವಾಟರ್
- ಹಸುವಿನ ತುಪ್ಪ
ತುಳಸಿ ಹೂವಿನ ಧೂಪ ತಯಾರಿಸುವ ವಿಧಾನ:
- ಮೊದಲಿಗೆ ತುಳಸಿ ಹೂವನ್ನು ಎರಡರಿಂದ ಮೂರು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಬಳಿಕ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದರ ಜೊತೆಗೆ ನೀವು ಪಲಾವ್ ಎಲೆ, ಲವಂಗ, ಕರ್ಪೂರ, ಅರಶಿನ ಪುಡಿ ಇವೆಲ್ಲವನ್ನೂ ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಸುವಾಸನೆಗಾಗಿ ನೀವು ಸ್ವಲ್ಪ ಹವನ ಸಾಮಗ್ರಿ, ಶ್ರೀಗಂಧವನ್ನು ಕೂಡ ಸೇರಿಸಬಹುದು.
- ಈಗ, ತಯಾರಾದ ಈ ಪುಡಿಯನ್ನು ಒಂದು ಪ್ಲೇಟ್‌ಗೆ ವರ್ಗಾಯಿಸಿ, ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮೃದುವಾದ ಉಂಡೆಯನ್ನು ತಯಾರಿಸಿಕೊಳ್ಳಿ. ನಂತರ ಒಂದೊಂದೇ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಕೋನ್ ಆಕಾರದಲ್ಲಿ ಧೂಪವನ್ನು ತಯಾರಿಸಿಕೊಳ್ಳಿ.
- ತಯಾರಾದ ತುಳಸಿ ಹೂವಿನ ಧೂಪವನ್ನು ಸ್ವಚ್ಛವಾದ ಬಟ್ಟೆ ಅಥವಾ ತಟ್ಟೆಯ ಮೇಲೆ ಇರಿಸಿ ನೆರಳಿರುವ ಹಾಗೂ ಚೆನ್ನಾಗಿ ಗಾಳಿ ಬೀಸುವ ಪ್ರದೇಶದಲ್ಲಿ ಇಟ್ಟು 2 ರಿಂದ 3 ದಿನಗಳ ಕಾಲ ಒಣಗಲು ಬಿಡಿ. ನೀವು ಧೂಪವನ್ನು ಒಣಗಲು ಫ್ಯಾನ್ ಅಡಿಯಲ್ಲೂ ಇಡಬಹುದು. ಧೂಪ ತೇವಾಂಶವನ್ನು ಉಳಿಸಿಕೊಳ್ಳದಂತೆ ಚೆನ್ನಾಗಿ ಒಣಗಲು ಬಿಡುವುದು ಮುಖ್ಯ. ಆದರೆ ಧೂಪವನ್ನು ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬಾರದು. ಏಕೆಂದರೆ ಇದು ಸುವಾಸನೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಕಿತ್ತಳೆ ಸಿಪ್ಪೆಯ ಸಾಬೂನು; ಈ ಕೆಮಿಕಲ್ ಫ್ರೀ ಸೋಪ್ ತಯಾರಿಸೋದು ಬಲು ಸುಲಭ
ತುಳಸಿ ಧೂಪದ ಬಳಕೆ:
ಹಿಂದೂ ಧರ್ಮದಲ್ಲಿ, ತುಳಸಿಯನ್ನು ವಿಷ್ಣುವಿಗೆ ಅತ್ಯಂತ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನೀವು ಪೂಜೆಯ ಸಮಯದಲ್ಲಿ ಈ ತುಳಸಿ ಹೂವಿನ ಪರಿಮಳಯುಕ್ತ ಧೂಪವನ್ನು ಬಳಸಿ. ಇನ್ನು ಮುಂದೆ ತುಳಸಿ ಹೂವುಗಳನ್ನು ಎಸೆಯುವ ಬದಲು, ನೀವು ಈ ರೀತಿ ಧೂಪವನ್ನು ತಯಾರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ