Monsoon Home Clean Tips : ಮಳೆಗಾಲದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಮನೆಯನ್ನು ಎಲ್ಲಾ ಋತುವಿನಲ್ಲಿಯೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದರೆ ಈ ಮಳೆಗಾಲದಲ್ಲಿ ಮನೆಯ ನಿರ್ವಹಣೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಶುಚಿಯಾಗಿ ಇಟ್ಟುಕೊಳ್ಳದೇ ಹೋದರೆ ಆರೊಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಈ ವೇಳೆಯಲ್ಲಿ ಮನೆ ಸ್ವಚ್ಛತೆಯ ಕಡೆಗೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ. ಹಾಗಾದ್ರೆ ಈ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Monsoon Home Clean Tips
Follow us on
ಮಳೆಗಾಲದಲ್ಲಿ ಹಚ್ಚ ಹಸಿರಿನ ತಂಪಾದ ವಾತಾವರಣಗಳಿಂದ ಮನಸ್ಸಿಗೇನು ಹಿತವೆನಿಸುತ್ತದೆ. ಆದರೆ ಬಿಡದೇ ಸುರಿಯುವ ಮಳೆಯಿಂದ ಬೋರ್ ಅನಿಸುವುದು ಇದೆ. ಅಷ್ಟೇ ಅಲ್ಲದೇ, ಈ ಋತುವಿನಲ್ಲಿ ಮನೆ ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಗೋಡೆ ಹಸಿಯಾಗುವುದು, ಅಂಗಳ ಜಾರುವುದು ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಶುಚಿತ್ವದ ಕಡೆಗೆ ಗಮನ ಕೊಡದೇ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಒಕ್ಕರಿಸಿಕೊಂಡು ಬಿಡುತ್ತದೆ.
ಮನೆಯ ಛಾವಣಿ ಸೋರುತ್ತಿದೆಯೇ ಎಂದು ಒಮ್ಮೆ ನೋಡಿ. ಇಲ್ಲದಿದ್ದರೆ ಸೋರುತ್ತಿರುವ ಛಾವಣಿಯಿಂದಾಗಿ ಮಳೆ ನೀರು ಮನೆಯ ಒಳಗೆ ತುಂಬುತ್ತದೆ.
ಮಳೆಗಾಲದಲ್ಲಿ ನೆಲ ತಣ್ಣನೆಗಿರುತ್ತದೆ. ಮನೆಯನ್ನು ಸ್ವಚ್ಛಗೊಳಿಸಲು ಬಿಸಿ ನೀರನ್ನು ಬಳಸಿ. ಈ ನೀರಿಗೆ ಉಪ್ಪು ನೀರು ಬೆರೆಸುವುದರಿಂದ ವಿಷಜಂತುಗಳಿಗೆ ಸಾಯುತ್ತವೆ.
ಬೆಡ್ ಕವರ್, ಪರದೆಗಳು, ಟವೆಲನ್ನು ದಿನನಿತ್ಯ ಬದಲಾಯಿಸುವುದು ಕಷ್ಟವಾದರೆ ವಾರಕ್ಕೊಮ್ಮೆಯಾದರೂ ಬದಲಾಯಿಸುತ್ತ ಇರುವುದು ಒಳ್ಳೆಯದು. ಇಲ್ಲದಿದ್ದರೆ ಇದು ಕೆಟ್ಟ ವಾಸನೆಯನ್ನು ಬೀರುತ್ತದೆ.
ಮನೆಯ ನೆಲ ಟೈಲ್ಸ್ ಆಗಿದ್ದರೆ ನೀರು ಬಿದ್ದ ತಕ್ಷಣವೇ ಒರೆಸಿಬಿಡಿ. ಚೆಲ್ಲಿದ ನೀರಿನ ಮೇಲೆ ಕಾಲಿಟ್ಟರೆ ಜಾರಿ ಬಿದ್ದು ಗಾಯಗಳಾಗುವ ಸಾಧ್ಯತೆಯೇ ಹೆಚ್ಚು.
ಮಳೆಗಾಲದಲ್ಲಿ ಜೇಡವು ಬಲೆಕಟ್ಟದಂತೆ ನೋಡಿಕೊಳ್ಳಿ. ಒಂದು ವೇಳೆ ಬಲೆಯಿದ್ದರೆ ಆಗಾಗ ತೆಗೆಯುತ್ತ ಇರಿ.
ಈ ಋತುವಿನಲ್ಲಿ ಕಾಲೊರಸಲು ಹತ್ತಿಯ ಮ್ಯಾಟ್ ಬಳಸುವುದು ಒಳ್ಳೆಯದು. ಹೊರಗೆ ಹೋಗಿ ಬಂದ ಕೂಡಲೇ ಕಾಲು ಒದ್ದೆಯಾಗಿರುವುದರಿಂದ ಹತ್ತಿಯ ಬಟ್ಟೆಯ ಮ್ಯಾಟ್ ನೀರನ್ನು ಬೇಗನೇ ಹೀರಿಕೊಳ್ಳುತ್ತದೆ.
ಮಳೆ ಕಡಿಮೆಯಿದ್ದರೆ ಸಾಧ್ಯವಾದಷ್ಟು ಬಾಗಿಲು ಕಿಟಕಿಗಳನ್ನು ತೆರೆದಿಟ್ಟು, ಗಾಳಿಯಾಡುವಂತೆ ನೋಡಿಕೊಳ್ಳಿ. ಈ ಗಾಳಿಯಲ್ಲಿ ತೇವಾಂಶ ಹೆಚ್ಚಿದ್ದು ಮನೆಯ ವಸ್ತುಗಳೆಲ್ಲವೂ ತೇವ ಒಳಗಾಗಿ ದುರ್ವಾಸನೆ ಬೀರುತ್ತದೆ.
ಈ ಸಮಯದಲ್ಲಿ ಬಟ್ಟೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ ಇಲ್ಲದಿದ್ದರೆ ಅವು ವಾಸನೆ ಬರಲು ಪ್ರಾರಂಭಿಸುತ್ತವೆ. ಮಳೆಯ ತೇವಾಂಶದಿಂದ ಕಬೋರ್ಡ್‌ನಲ್ಲಿ ಬೇವು, ಕರ್ಪೂರ, ಏಲಕ್ಕಿಯನ್ನು ಇಡುವ ಮೂಲಕ ಬಟ್ಟೆಗಳನ್ನು ದುರ್ನಾತದಿಂದ ರಕ್ಷಿಸಿಕೊಳ್ಳಬಹುದು.